September 6, 2026
Mumbai News Kannada
ಪ್ರಕಟಣೆ

ಮಲಾಡ್ ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿ: ಜ.17 ರಂದು ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ





ಮುಂಬಯಿ : ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿ, ಮಲಾಡ್ ಇದರ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವು ಶನಿವಾರ ಜ. 17 ರಂದು ಸಂಜೆ  6 ರಿಂದ ಉತ್ಕರ್ಷ ಸಭಾಗೃಹ, ಉತ್ಕರ್ಷ ವಿದ್ಯಾ ಮಂದಿರ, ಮಲಾಡ್ ಪೂರ್ವ ಇಲ್ಲಿ ಮಲಾಡ್ ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿ ಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು  ಇವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕುಮರೇಶ್ ಆಚಾರ್ಯ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ಮಹಿಳಾ ವಿಭಾಗದವರಿಂದ ಭಜನೆ, ಯುವ ವಿಭಾಗದವರಿಂದ ಕುಣಿತ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮ. ಮುಖ್ಯ ಅತಿಥಿಯಾಗಿ, ಬಂಟರ ಸಂಘ ಮುಂಬಯಿಯ ಅಂಧೇರಿ -ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರ್ ನಾಥ್ ಶೆಟ್ಟಿ, ಮಲಾಡ್ ಪೂರ್ವ ಅಂಚೆ ಇಲಾಖೆಯ ಮುಖ್ಯಸ್ಥೆ ಜಯ ಬಂಗೇರ ಮತ್ತು ಸಾಫಲ್ಯ ತ್ರೈಮಾಸಿಕದ ಸಂಪಾದಕಿ ಡಾ. ಜಿ. ಪಿ. ಕುಸುಮ ಪಾಲ್ಗೊಳ್ಳಲಿದ್ದಾರೆ. 

ಬಳಿಕ ಹಳದಿ ಕುಂಕುಮ ನಡೆಯಲಿದೆ. 

 ಈ ಕಾರ್ಯಕ್ರಮಕ್ಕೆ ಸದಸ್ಯರು  ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕಾಗಿ  ಪೂಜಾ ಸಮಿತಿಯ ಮಹಿಳಾ ವಿಭಾಗದ  ಕಾರ್ಯದರ್ಶಿ ಶ್ರೀಲಾ ಎಂ. ಪೂಜಾರಿ, ಕೋಶಾಧಿಕಾರಿ ನಳಿನಿ ಪಿ. ಕರ್ಕೇರ, ಉಪಕಾರ್ಯಾಧ್ಯಕ್ಷೆರುಗಳಾದ ಗೀತಾ ಜೆ. ಮೆಂಡನ್, ಲಲಿತಾ ಎಸ್ ಗೌಡ, ಸಂಧ್ಯ ಎಸ್. ಪ್ರಭು, ಜೊತೆ  ಕಾರ್ಯದರ್ಶಿಗಳಾದ ಭಾರತಿ ಎಸ್ ಆಚಾರ್ಯ, ವಿಧ್ಯಾ ಡಿ. ಆಚಾರ್ಯ, ಜೊತೆ  ಕೋಶಾಧಿಕಾರಿಗಳಾದ  ಶೋಭಾ ಎಲ್ ರಾವ್, ವಿಧ್ಯಾ ಎಸ್ ನಾಯಕ್, ಸಲಹಾ ಸಮಿತಿಯ ಮೋಹಿನಿ ಜೆ. ಶೆಟ್ಟಿ ಮತ್ತು ರತ್ನಾ ಡಿ. ಕುಲಾಲ್ ಹಾಗೂ ಮಹಿಳಾ ವಿಭಾಗದ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.

———-

.

 



Related posts

ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲಕ್ಕೆ ದಿನ ನಿಗದಿ

Mumbai News Desk

ಫಲಿಮಾರಿನಲ್ಲಿ ಆ.17ರಂದು ಕುಮಾರವ್ಯಾಸ ವಿರಚಿತ ‘ಮಹಾಭಾರತ’ ಸಪ್ತಾಹ ವಾಚನ ಮಂಗಲೋತ್ಸವ

Mumbai News Desk

ಬೋಂಬೆ ಬಂಟ್ಸ್ ಅಸೋಷಿಯೇಶನ ಮಾ.9ರಂದ 41 ನೇ ಮಹಾಸಭೆ, ಸಾಧಕರಿಗೆ ಸನ್ಮಾನ! ಮಾಜಿ ಅಧ್ಯಕ್ಷರುಗಳಿಗೆ ಗೌರವ!

Mumbai News Desk

ದಹಿಸರ್ ಪೂರ್ವ. ರಾವಲ್ಪಾಡ   ಶ್ರೀ ದುರ್ಗಾಪರಮೇಶ್ವರಿ -ಶನೀಶ್ವರ ದೇವಸ್ಥಾನ, ಜೂ 6 ರಂದು ಶ್ರೀ ಶನಿ ಜಯಂತಿ ಆಚರಣೆ.

Mumbai News Desk

ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಎ. 4: ಮಾಜಿ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿ ಅವರಿಂದ ‘ಧೀಮಂತ ಧರ್ಮಪಾಲ’ ಆತ್ಮಕಥನ ಕೃತಿ ಲೋಕಾರ್ಪಣೆ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾರೋಡ್, ನ.27 ರಂದು ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk