
ಎನ್.ಕೆ.ಇ.ಎಸ್ ಜೂನಿಯರ್ ಕಾಲೇಜ್ ಆಶ್ರಯದಲ್ಲಿ ಅ.16 ರಿಂದ ಚೆಂಬೂರು ಕುರ್ಲಾ ಸಾಯನ್, ಮಾಟುಂಗಾ, ದಾದರ್, ಹಾಗೂ ಪೆರೇಲ್ ಪರಿಸರದ 17 ವರ್ಷದ ಕೆಳಗಿನ ವಯೋಮಿತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಎನ್.ಕೆ ಇ.ಎಸ್ ಜೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ. ಎನ್ ಕೆ ಇ ಎಸ್ ಪ್ರೊ ಕಬಡ್ಡಿ ಸೀಸನ್ ಒಂದರ ಫೈನಲ್ ಪಂದ್ಯವು ಹಾಗು ಬಹುಮಾನ ವಿತರಣಾ ಕಾರ್ಯಕ್ರಮವು ಅಕ್ಟೋಬರ್ 18ರಂದು ಜರಗಿತು. ಫೈನಲ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಸನೆ ಗುರೂಜಿ ವಿದ್ಯಾಲಯ ದಾದರ್, ಇಲ್ಲಿಯ ವಿದ್ಯಾರ್ಥಿಗಳು ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ನ್ಯೂ ಸಯನ್ ಮುನ್ಸಿಪಾಲಿಟಿ ಶಾಲೆ.ಸಯನ್ ನ ವಿದ್ಯಾರ್ಥಿ ವಿದ್ಯಾರ್ಥಿಗಳು ಪಡೆದುಕೊಂಡರು. ಹಾಗೂ ತೃತೀಯ ಬಹುಮಾನವನ್ನು ಚಂಬೂರ್ ಕರ್ನಾಟಕ ಹೈಸ್ಕೂಲ್ ವಿದ್ಯಾರ್ಥಿಗಳು ಪಡೆದುಕೊಂಡರು. ಬೆಸ್ಟ್ ರೈಡರ್ ಸಮರ್ಥ್ ಕಸೂರ್ಡೆ ಸಾನೇ ಗುರೂಜಿ ವಿದ್ಯಾಲಯ ದಾದರ್. ಬೆಸ್ಟ್ ಡಿಫೆನ್ಸ್ ತನಿಷ್ ಪೂಜಾರಿ ಚಂಬೂರ್ ಕರ್ನಾಟಕ ಹೈ ಸ್ಕೂಲ್ ಚೆಂಬೂರು ಅವರು ಪಡೆದುಕೊಂಡರು.

ಸುಮಾರು 45ಕ್ಕಿಂತಲೂ ಹೆಚ್ಚಿನ ಶಾಲಾ ತಂಡವು ಸ್ಪರ್ಧೆಯಲ್ಲಿ ಭಾಗವಹಿಸಿದರು. ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಸಮಾಜಸೇವಕ ಸಚಿಂದ್ರ ಅಯಿರೆ ವಿಜಯ್ ತಂಡಗಳಿಗೆ ಬಾರಿತೋಷಕವನ್ನು ಹಾಗೂ ನಗದು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.

. ಮುಖ್ಯ ಉಪಾಧ್ಯಾಯನಿ ಉಮಾಮಹೇಶ್ವರಿ ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಲೆ ಅಧ್ಯಕ್ಷ ಪಾರ್ಥಸಾರಥಿ ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಪಠ್ಯೇತರ ಕಾರ್ಯ ಚಟುವಟಿಕೆಗಳ ಹಾಗೂ ಕ್ರೀಡೆಗಳಿಗೆ ನೀಡುತ್ತಿರುವ ಪ್ರೋತ್ಸಾಹ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ವಿಶ್ವಸ್ಥರಾದ ಅನಂತ್ ಬನವಾಸಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಪದ್ಮಜಾ ಬನವಾಸಿ, ಮತ್ತು ಶಶಿಕಾಂತ್ ಜೋಶಿ, ಜೂನಿಯರ್ ಕಾಲೇಜಿನ ಕೋಆರ್ಡಿನೇಟರ್ ರತೀಶ್ ಕುಕ್ಯನ್, ಮೊದಲಾದಾರ ಉಪಸ್ಥಿತರಿದ್ದರು. ಸಂಗೀತ ಸಿಂಗ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಾರಂಭದಲ್ಲಿ ಶಾಲೆಯ ಸಂಗೀತ ಶಿಕ್ಷಕರಾದ ಸಚಿನ್ ಮೋರೆ ಅವರ ಪ್ರಾರ್ಥನೆಯೊಂದಿಗೆ ಬಹುಮಾನ ವಿತರಣಾ ಸಮಾರಂಭ ಪ್ರಾರಂಭಗೊಂಡು.
ಚಂದ್ರಕಾಂತ್ ಶಿಂದೆ ಅವರು ವಂದನಾರ್ಪಣೆ ಮಾಡಿದರು.