April 2, 2025
ಮಹಾರಾಷ್ಟ್ರ

ಶ್ರೀ ದುರ್ಗಾ ಕಾಳಿ ಮಂದಿರದಲ್ಲಿ ನವರಾತ್ರಿ ಉತ್ಸವ.

ಚಿತ್ರ, ವರದಿ : ಸತೀಶ್ ಶೆಟ್ಟಿ.

ಶ್ರೀ ದುರ್ಗಾ ಕಾಳಿ ಮಂದಿರ, ಸ್ವರ್ಗೀಯ ಪರಮ ಪೂಜ್ಯ ಶ್ರೀ ಬಾಲಗಂಗಾಧರ್ ಸ್ವಾಮೀಜಿಯವರ ಆಶ್ರಮದಲ್ಲಿ ನವರಾತ್ರಿ ಉತ್ಸವ ಜರಗುತ್ತಿದ್ದು, ಅಕ್ಟೋಬರ್ 15 ರ ಮಂಗಳವಾರದಿಂದ ನವರಾತ್ರಿ ಉತ್ಸವವು ಆರಂಭಗೊಂಡಿದ್ದು, ಪ್ರತಿದಿನ ನೂರಾರು ಭಕ್ತರು ಬಂದು ದೇವಿಯ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾಗುತ್ತಿದ್ದಾರೆ.

ಅಕ್ಟೋಬರ್ 15ರ ಮಂಗಳವಾರ ಬೆಳಿಗ್ಗೆ ಗಣ ಹೋಮ, ಪಂಚಾಮೃತ ಅಭಿಷೇಕ, ಕಳಸ ಪ್ರತಿಷ್ಠಾಪನೆ, ಭಜನೆ ಮಂಗಳಾರತಿ ನಡೆದು ತೀರ್ಥ ಪ್ರಸಾದ ವಿತರಣೆ ನಡೆಯಿತು. ಅಕ್ಟೋಬರ್ 20 ಶುಕ್ರವಾರದಂದು ಬೆಳಿಗ್ಗೆ ದುರ್ಗಾ ಹೋಮ, ಮಂಗಳಾರತಿ ನಡೆದು ಸಂಜೆ ಶ್ರೀ ಸ್ವಾಮೀಜಿಯ ಪಾದಪೂಜೆ ನಡೆದು ಭಜನೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ಅಕ್ಟೋಬರ್ 21 ರ ಶನಿವಾರದಂದು ಬೆಳಿಗ್ಗೆ ಸತ್ಯನಾರಾಯಣ ಮಹಾಪೂಜೆ ನಂತರ ಶ್ರೀ ಶನೇಶ್ವರ ಭಕ್ತವೃಂದ ಮಿತ್ರ ಮಂಡಳಿ ಬಾಂಡುಪ್ ಇವರಿಂದ ಶನಿ ಗ್ರಂಥ ಪಾರಾಯಣ, ರಾತ್ರಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಅಕ್ಟೋಬರ್ 24 ರ ದಸರಾದಂದು ಬೆಳಿಗ್ಗೆ ಅಲಂಕಾರ ಪೂಜೆ ಮಹಾಮಂಗಳಾರತಿಯ ನಂತರ ಮಾತ ಅನ್ನಪೂರ್ಣೇಶ್ವರಿ ಮಾತಾಜಿ ಆಶೀರ್ವಾದ ಅನುಸಾರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಪರಿಸರದ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ತೀರ್ಥ ಪ್ರಸಾದ ಸ್ವೀಕರಿಸಬೇಕಾಗಿ ಮಂದಿರದ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Related posts

ಮಹಾರಾಷ್ಟ್ರದ ಸಿಎಂ ರೇಸ್​ನಿಂದ ಹಿಂದೆ ಸರಿದ ಏಕನಾಥ್ ಶಿಂಧೆ; ದೇವೇಂದ್ರ ಫಡ್ನವಿಸ್ ಹಾದಿ ಸುಗಮ

Mumbai News Desk

ಮುಂಬೈನಲ್ಲಿ ಟೋಲ್ ಇಲ್ಲ; ಮಹಾರಾಷ್ಟ್ರ ಸರ್ಕಾರದಿಂದ ಘೋಷಣೆ; ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ

Mumbai News Desk

ಮಹಾರಾಷ್ಟ್ರ : ಹಲಾಲ್ ಪ್ರಾಮಾಣೀಕರಣವನ್ನು ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿಯ ಪ್ರಸ್ತಾವನೆ

Mumbai News Desk

ಆಸ್ತಿ ಮತ್ತು ಬಾಡಿಗೆ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದ ಮಹಾರಾಷ್ಟ್ರ ಸರ್ಕಾರ

Mumbai News Desk

ಬಿಜೆಪಿ ನಿರ್ಧಾರಕ್ಕೆ ನನ್ನ ಬೆಂಬಲವಿದೆ – ಮೌನ ಮುರಿದ ಏಕನಾಥ್ ಶಿಂಧೆ

Mumbai News Desk

ಸಾಮಾನ್ಯ ಮನುಷ್ಯನನ್ನು ಸೂಪರ್ ಮ್ಯಾನ್ ಆಗಿ ಪರಿವರ್ತಿಸುತ್ತೇವೆ; ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಪ್ರತಿಕ್ರಿಯೆ

Mumbai News Desk