
ಮುಂಬಯಿ, ಅ.23- ಭಕ್ತಿ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತ ಗಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸರ ಪದಗಳ ಭಕ್ತಿ ಸಂಗೀತ ಕಾರ್ಯಕ್ರಮವು ಅ.21 ರಂದು ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯಲ್ಲಿರುವ ಶ್ರೀ ಪೇಜಾವರ ಮಠದಲ್ಲಿ ಭಕ್ತಿಸಂಭ್ರಮದಿಂದ ಜರಗಿತು.



ಮುಂಬಯಿಗೆ ಕಳೆದ ಹಲವಾರು ವರ್ಷಗಳಿಂದ ಪುತ್ತೂರು ನರಸಿಂಹ ನಾಯಕ್ ಅವರನ್ನು ಬರಮಾಡಿಸಿ ಭಕ್ತಿ ಸಂಗೀತದ ಉಚಿತ ರಸದೌತಣ ನೀಡುತ್ತಾ ಬಂದಿರುವ ಪ್ರಫುಲ್ಲಾ ಎಸ್ ಕೆ ಉರ್ವಲ್ ಕುಟುಂಬ ಮತ್ತು ಬಿ ಆರ್ ಶೆಟ್ಟಿ ಕುಟುಂಬ ಈ ವರ್ಷವೂ ಮುಂಬಯಿಯ ಭಕ್ತಿಸಂಗೀತ ಪ್ರೇಮಿಗಳಿಗೆ ಶನಿವಾರ ಪೇಜಾವರ ಮಠದಲ್ಲಿ ಉಚಿತವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಗಾಯಕರಾದ ಪುತ್ತೂರು ನರಸಿಂಹ ನಾಯಕ್ ಅವರಿಗೆ ಶಾಲು ಹೊದೆಸಿ ಪೇಜಾವರ ಮಠದ ನಿರ್ವಾಹಕರಾದ ಶ್ರೀ ಹರಿ ಭಟ್ ಗೌರವಿಸಿದರು. ವೇದಿಕೆಯಲ್ಲಿ ಮುರಳಿ ಭಟ್ ಡೊಂಬಿವಿಲಿ, ಹರಿ ಭಟ್, ಕಾರ್ಯಕ್ರಮ ಆಯೋಜಕರಾದ ಐಐಟಿಸಿ ಯ ವಿಕ್ರಾಂತ್ ಉರ್ವಲ್, ಸುಧೀರ್ ಶೆಟ್ಟಿ, ಶ್ರೀಧರ್ ರಾವ್ ಗೊರಾಯಿ, .. ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.