September 6, 2026
Mumbai News Kannada
ಮುಂಬಯಿ

ಪೇಜಾವರ ಮಠದಲ್ಲಿ ಮನಸೂರೆಗೊಂಡ ಪುತ್ತೂರು ನರಸಿಂಹ ನಾಯಕ್ ಭಕ್ತಿ ಸಂಗೀತ ಕಚೇರಿ





ಮುಂಬಯಿ, ಅ.23- ಭಕ್ತಿ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತ ಗಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸರ ಪದಗಳ ಭಕ್ತಿ ಸಂಗೀತ ಕಾರ್ಯಕ್ರಮವು ಅ.21 ರಂದು ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯಲ್ಲಿರುವ ಶ್ರೀ ಪೇಜಾವರ ಮಠದಲ್ಲಿ ಭಕ್ತಿಸಂಭ್ರಮದಿಂದ ಜರಗಿತು.

ಮುಂಬಯಿಗೆ ಕಳೆದ ಹಲವಾರು ವರ್ಷಗಳಿಂದ  ಪುತ್ತೂರು ನರಸಿಂಹ ನಾಯಕ್ ಅವರನ್ನು  ಬರಮಾಡಿಸಿ ಭಕ್ತಿ ಸಂಗೀತದ ಉಚಿತ ರಸದೌತಣ ನೀಡುತ್ತಾ ಬಂದಿರುವ ಪ್ರಫುಲ್ಲಾ ಎಸ್ ಕೆ  ಉರ್ವಲ್ ಕುಟುಂಬ ಮತ್ತು ಬಿ ಆರ್ ಶೆಟ್ಟಿ ಕುಟುಂಬ ಈ ವರ್ಷವೂ  ಮುಂಬಯಿಯ ಭಕ್ತಿಸಂಗೀತ ಪ್ರೇಮಿಗಳಿಗೆ ಶನಿವಾರ  ಪೇಜಾವರ ಮಠದಲ್ಲಿ ಉಚಿತವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. 

ಈ ಸಂದರ್ಭದಲ್ಲಿ ಗಾಯಕರಾದ ಪುತ್ತೂರು ನರಸಿಂಹ ನಾಯಕ್ ಅವರಿಗೆ ಶಾಲು ಹೊದೆಸಿ  ಪೇಜಾವರ ಮಠದ ನಿರ್ವಾಹಕರಾದ ಶ್ರೀ ಹರಿ ಭಟ್ ಗೌರವಿಸಿದರು. ವೇದಿಕೆಯಲ್ಲಿ ಮುರಳಿ ಭಟ್ ಡೊಂಬಿವಿಲಿ, ಹರಿ ಭಟ್, ಕಾರ್ಯಕ್ರಮ ಆಯೋಜಕರಾದ ಐಐಟಿಸಿ ಯ ವಿಕ್ರಾಂತ್ ಉರ್ವಲ್,  ಸುಧೀರ್ ಶೆಟ್ಟಿ, ಶ್ರೀಧರ್ ರಾವ್ ಗೊರಾಯಿ, .. ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.



Related posts

ವಸಯಿ ಕರ್ನಾಟಕ ಸಂಘದ ವಿಹಾರ ಕೂಟ

Mumbai News Desk

ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ವಿಜ್ರಂಭಣೆಯ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಭೂಮಿಕಾ ಭಂಡಾರಿ  ಗೆ ಶೇ 93 ಅಂಕ.

Mumbai News Desk

ತುಳು ಸಂಘ ಬೊರಿವಲಿಯ ವಾರ್ಷಿಕ ಮಹಾಸಭೆ

Mumbai News Desk

ವಸಾಯಿ ತಾಲೂಕು ಮೊಗವೀರ ಸಂಘ (ರಿ.) ವತಿಯಿಂದ ಸಮುದಾಯ ಪಿಕ್ನಿಕ್ ಯಶಸ್ವಿಯಾಗಿ ಆಯೋಜನೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ: ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಸಭಾಭವನದ ಕಾಮಗಾರಿಯ ಕುರಿತು ವಿಶೇಷ ಸಭೆ

Mumbai News Desk