
ಮುಂಬಯಿ.ಪುತ್ರನ್ ಮೂಲಸ್ಥಾನ ಮುಂಬಯಿ ಇದರ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅ.15 ರಂದು ಅಂಧೇರಿ ಪಶ್ಚಿಮ ಮೊಗವೀರ ಭವನದಲ್ಲಿ ಅಧ್ಯಕ್ಷರಾದ ಗೋವಿಂದ್ ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರಧಾನ ಕಾರ್ಯದರ್ಶಿ ಡಿ.ಬಿ.ಪುತ್ರನ್ ಎಲ್ಲರನ್ನೂ ಸ್ವಾಗತಿಸಿದರು.
ಜೆ.ಪಿ.ಪುತ್ರನ್ ಶ್ರೀ ನಾಗಬ್ರಹ್ಮ ದೇವರಿಗೆ ಹಾಗೂ ಪರಿವಾರ ದೇವರಿಗೆ ಪ್ರಾಥನೆಸಲ್ಲಿಸಿ, ಪ್ರಸಾದ ವಿತರಿಸಿದರು.
ಕಾರ್ಯದರ್ಶಿ ಅವರು ಗತ ವರ್ಷದ ಮಹಾಸಭೆಯ ಟಿಪ್ಪಣಿ, ಹಾಗೂ 2022-23ರ ಅವಧಿಯಲ್ಲಿ ನಡೆದ ಕಾರ್ಯ ಚಟುವಟಿಕೆಗಳ ವಿವರ ನೀಡಿದರು.
ಗೌರವ ಕೋಶಾಧಿಕಾರಿ ಜಗನ್ನಾಥ ಆರ್.ಕಾಂಚನ್ ಗತ ವರ್ಷದ ಲೆಕ್ಕ ಪತ್ರ ಮಂಡಿಸಿದರು.
ಈ ಸಂಧರ್ಭದಲ್ಲಿ ಮುಖ್ಯ ಅತಿಥಿಯಾಗಿ ಜಯಶೀಲ ಪುತ್ರನ್, ಹಿರಿಯ ಸದಸ್ಯರಾದ ಸಂಜೀವ ಪುತ್ರನ್ ಅವರ ಧರ್ಮಪತ್ನಿ ಪುಷ್ಪಲತಾ ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರೀಯ ಮಟ್ಟದ ತ್ರೋ ಬಾಲ್ ಆಟಗಾರ್ತಿ ಕೃತಿಕಾ ಟಿ.ಕರ್ಕೇರ ಅವರಿಗೆ ನಗದು, ಪ್ರಮಾಣ ಪತ್ರ, ಬಹುಮಾನ ನೀಡಿ ಗೌರವಿಸಲಾಯಿತು.
2022-23 ರ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ಕನಿಷ್ಕಾ ಪುತ್ರನ್, ಕುಶಿ ಸುವರ್ಣ, ಕೌಶಲ್ ಸಾಲ್ಯಾನ್, ಹರ್ಷ ಕಾಂಚನ್, ಪ್ರಿಯ ಕರ್ಕೇರ, ಹಾಗೂ ಐ.ಜಿ.ಸಿ.ಎಸ್ ಇ ಯಲ್ಲಿ ಅತಿಕ್ಷಾ ಪುತ್ರನ್, ಎಂ.ಎಸ್.ಸಿ. ಯ ರೋಹನ್ ಕೆ.ಪುತ್ರನ್, ಬಿಡಿಇಎಸ್ ನ ಸಾಚಿ ಮಹಾಜನ್ ಇವರಿಗೆ ನಗದು, ಪ್ರಮಾಣ ಪತ್ರ ನೀಡಿ ಹಿರಿಯ ಸದಸ್ಯರು ಅಭಿನಂದಿಸಿದರು.
ಹಿರಿಯ ಸದಸ್ಯರುಗಳಾದ ಜೆ.ಪಿ.ಪುತ್ರನ್, ಧನಂಜಯ ಪುತ್ರನ್, ಕುಸುಮ ಕಾಂಚನ್ ರನ್ನು ಗೌರವಿಸಲಾಯಿತು.

ವಿಶ್ವನಾಥ್ ಪುತ್ರನ್, ಜೆ.ಪಿ.ಪುತ್ರನ್, ನಾಗೇಶ್ ಮೆಂಡನ್, ಸಂಜೀವ ಪುತ್ರನ್, ರಘುವೀರ ಪುತ್ರನ್ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಅಧ್ಯಕ್ಷರಾದ ಗೋವಿಂದ ಪುತ್ರನ್ ಪ್ರತಿಭಾ ಪುರಸ್ಕಾರ ಹಾಗೂ ಅನ್ನದಾನಕ್ಕೆ ಸಹಾಯ ಮಾಡಿದವರಿಗೆ ಧನ್ಯವಾದ ಸಲ್ಲಿಸಿ ,ಶುಭ ಹಾರೈಸಿದರು.
ಕೊನೆಯಲ್ಲಿ ಕಾರ್ಯದರ್ಶಿ ಡಿ.ಬಿ.ಪುತ್ರನ್ ಎಲ್ಲರಿಗೂ ಅಭಾರ ಮಂಡಿಸಿದರು.