April 2, 2025
ಮುಂಬಯಿ

ಶ್ರೀ ಮಹಿಷಮರ್ಧಿನಿ ದೇವಸ್ಥಾನ 34ನೇ ವಾರ್ಷಿಕ ಶರವನ್ನವರಾತ್ರಿ ಸಂನನ್ನ:

ದೇವಸ್ಥಾನದಲ್ಲಿ ಭಕ್ತರಿಗೆ ಮೂಲಸೌಕರ್ಯಗಳ ಅಗತ್ಯವಿದೆ: ಆಡಳಿತ ಮೊಕ್ತೇಸರ ಪ್ರದೀಪ್ ಸಿ ಶೆಟ್ಟಿ

ಬೊರಿವಲಿ ಅ. 23: ಸತತ ವಿಧಿವತ್ತವಾದ ಪೂಜೆ ಅನುಷ್ಠಾನಗಳು ಭಕ್ತರ ಸಂದರ್ಶನ ಪುಣ್ಯಕಾರ್ಯಚರಣೆಗಳಿಂದ ಹಲವಾರು ಮಹಿಮೆಯನ್ನು ದೃಢೀಕರಿಸಿದ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಶ್ರೀ ಕ್ಷೇತ್ರ ಜಯರಾಜ್ ನಗರ ಬೊರಿವಲಿ ಪಶ್ಚಿಮ ಇಲ್ಲಿ ಅ. 22 ರಂದು ಶರವನ್ನ ರಾತ್ರಿಯ ಪುಣ್ಯಪರ್ವದ ದುರ್ಗಾಷ್ಟಮಿಯ ದಿನದಲ್ಲಿ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ್ ತಂತ್ರಿಯವರ ನೇತೃತ್ವದಲ್ಲಿ ಸಾರ್ವಜನಿಕ ಚಂಡಿಕಾ ಹೋಮ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳೊಂದಿಗೆ ಶ್ರದ್ದಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ 9:30ಕ್ಕೆ ಪ್ರಾರಂಭಗೊಂಡ ಧಾರ್ಮಿಕ ಚಂಡಿಕಾ ಹೋಮಕುಂಡದಲ್ಲಿ ತುಪ್ಪ ದ್ರವ್ಯಾಧಿಗಳನ್ನು ಸಮರ್ಪಿಸಿದ ಬಳಿಕ ಧಾರ್ಮಿಕ ವಿಧಿವತ್ತಾಗಿ ಭಕ್ತರು ದವಸ ಧಾನ್ಯ ವಸ್ತ್ರಾಧಿಗಳನ್ನು ಹೋಮಕುಂಡದಲ್ಲಿ ಸಮರ್ಪಿದರು. ಬಳಿಕ ಅರ್ಚಕ ವೃಂದದವರಿಂದ ವಿಶೇಷ ಪೂಜೆ, ಸಾರ್ವಜನಿಕ ಸೇವಾ ಪೂಜೆ ನೆರವೇರಿದ ಬಳಿಕ, ಮಹಾ ಮಂಗಳಾರತಿ ಜರುಗಿತು. ಧಾರ್ಮಿಕ ಕಾರ್ಯಕ್ರಮದ ಬಳಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೊಳಕ್ಕೆ ಬೈಲು ಪ್ರದೀಪ್ ಸಿ. ಶೆಟ್ಟಿ, ದೇವಸ್ಥಾನವು ಶ್ರೀದೇವಿಯ ನಿತ್ಯದರ್ಶನದ ಮೂಲಕ ಪರಿಸರದಲ್ಲಿ ಭಕ್ತರ ಆಧ್ಯಾತ್ಮಿಕ ಕೇಂದ್ರವಾಗಿ ದಿನೇ ದಿನೇ ಭಕ್ತರ ಸಂಖ್ಯೆ ಅಧಿಕವಾಗಿದೆ. ಭಕ್ತರ ಮೂಲಸೌಕರ್ಯಗಳನ್ನು ಪೂರೈಸಲು ಸ್ಥಳಾವಕಾಶ ಕಡಿಮೆಯಾಗುತ್ತಿದ್ದು ಮುಂಬರುವ ದಿನಗಳಲ್ಲಿ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಉನ್ನತ ಯೋಜನೆ ರೂಪಿಸಿ ಭಕ್ತರಿಗೆ ಅನುಕೂಲಕರವಾಗುವ ರೂಪುರೇಷೆ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಪ್ರಯತ್ನಿಸಲಾಗುತ್ತಿದೆ. ಮಾನಸಿಕ ಸಮಸ್ಯೆಗಳಿಗೆ ಆಧ್ಯಾತ್ಮಿಕ ಪರಿಹಾರ ದೊರೆಯುವುದು ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡುವ ವೇಳೆ ಭಕ್ತರು ಒಳ್ಳೆಯ ಆಧ್ಯಾತ್ಮಿಕ ಚಿಂತನೆ ಆಚಾರ ವಿಚಾರಗಳು ಹೊಂದಿರಬೇಕು ಎಂದು ಹೇಳಿದ ಅವರು ಹೋಮ ಅವನಾದಿ ಮತ್ತು ಮಂತ್ರೋಚ್ಚಾರಣೆ ಪರಿಸರವನ್ನು ಪವಿತ್ರಗೊಳಿಸಿ ದೈವೀ ಅನುಭವ ಈ ಪ್ರಶಾಂತ ಸ್ಥಳದಲ್ಲಿ ದೊರೆಯಲಿ ಎಂದು ಹೇಳಿದರು.

ಧಾರ್ಮಿಕ ಕಾರ್ಯಕ್ರಮದ ವಿಧಿವಿಧಾನಗಳನ್ನು ಪೂರೈಸಿ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಆಶೀರ್ವರ್ಚನೆ ನೀಡಿದ ಬ್ರಹ್ಮ ಶ್ರೀ ಕೊಯ್ಯೂರು ನಂದ ಕುಮಾರ ತಂತ್ರಿ ದುರ್ಗಾಷ್ಟಮಿ ಪರ್ವಕಾಲದಲ್ಲಿ ನವರಾತ್ರಿಯ ದುಷ್ಟ ಸಂಹಾರದ ಪ್ರಥಮ ವಿಜಯ ಕಾಲದಲ್ಲಿ ಮಹಿಷಮರ್ಧಿನಿ ದೇವಸ್ಥಾನದ ಸನ್ನಿಧಿಯಲ್ಲಿ ದೇವಸ್ಥಾನದ ಯಜಮಾನಿಕೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತರು ದೇವಿಯನ್ನು ಮಂಡಲ ಮಧ್ಯದಲ್ಲಿ ಆರಾಧಿಸಿ ಅಷ್ಟೋತ್ತರ ನಾಮಾರ್ಚನೆ ಶ್ಲೋಕಗಳ ಮೂಲಕ ಆರಾಧನೆಯ, ಈ ಪುಣ್ಯ ಕಾಲದಲ್ಲಿ ಭಕ್ತರಿಗೆ ಬರು ಕಷ್ಟ ನಷ್ಟ ರೋಗ ರುಜಿನ ದಿನಗಳು ದೂರವಾಗಿ ಸಮಸ್ತ ಭಕ್ತ ವರ್ಗಕ್ಕೆ ಯಜಮಾನ ಕುಟುಂಬಕ್ಕೆ ಈ ಮಂಗಳ ಕಾರ್ಯದಿಂದ ಸುಖ ಸಮೃದ್ಧಿ ಆರೋಗ್ಯ ಶ್ರೀ ದೇವಿ ಕರುಣಿಸಲಿ ಎಂದು ಆಶೀರ್ವದಿಸಿದ್ದರು
ಭಕ್ತರು ತಮ್ಮ ಹರಕೆ ಸಾಮಗ್ರಿಗಳನ್ನು ಹೋಮಕುಂಡದಲ್ಲಿ ಭಕ್ತಿ ಯಿಂದ ಸಮರ್ಪಿಸಿದರು. ಪ್ರಸಾದ ವಿತರಣೆ ಬಳಿಕ ಪುಷ್ಪ ರಾಮಚಂದ್ರನ್ ಮತ್ತು ಶೇಖರ ರಾಮಚಂದ್ರನ್ ದಂಪತಿಗಳಿಂದ ಅನ್ನಸಂತರ್ಪಣೆ ಜರುಗಿತು.

ಈ ವಿಶೇಷ ದಿನದಲ್ಲಿ ದೇವಸ್ಥಾನದಲ್ಲಿ ಸ್ಥಾಪಿಸಲ್ಪಟ್ಟ ಮಹಾ ಗಣಪತಿ ಶ್ರೀ ಆಂಜನೇಯ ಕೊಡಿಮನಿತ್ತಾಯ ದೈವ ಮತ್ತು ನಾಗದೇವರ ಸನ್ನಿಧಿಗೆ ವಿಶೇಷ ಪೂಜೆ ನೆರವೇರಿತು.
ಕಾರ್ಯಕ್ರಮದಲ್ಲಿ ಮಹಿಷಮರ್ಧಿನಿ ದೇವಸ್ಥಾನ ಟ್ರಸ್ಟ್ ನ ವಂಶಸ್ಥ ಮೊಕ್ತೇಸರರಾದ ಜಯರಾಜ್ ಶ್ರೀಧರ್ ಶೆಟ್ಟಿ ಡಾ. ಸ್ವಪ್ನಾ ಜಯರಾಜ್ ಶೆಟ್ಟಿ ಶ್ರೀಮತಿ ಶಾಲಿನಿ ಪ್ರದೀಪ್ ಶೆಟ್ಟಿ ಮೊಕ್ತೇಸರರಾದ ಜಯಪಾಲಿ ಅಶೋಕ್ ಶೆಟ್ಟಿ ಅರ್ಚಕವೃಂದ, ಬೆಳ್ಮಣ್ಣು ವೆಂಕಟರಮಣ ತಂತ್ರಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಆಡಳಿತ ಮಹಿಷಮರ್ಧಿನಿ ಭಜನ ಮಂಡಳಿ ಸದಸ್ಯರು ಬಾಲಕೃಷ್ಣ ರೈ ಕುಟುಂಬಸ್ಥರು, ಜನಾರ್ಧನ ಶೆಟ್ಟಿ ಕುಟುಂಬಸ್ಥರು ಸದಾಶಿವ ಶೆಟ್ಟಿ ಕುಟುಂಬಸ್ಥರು, ಗುರುದೇವ ಸೇವಾ ಬಳಗ ಮುಂಬಯಿ ಗೌ. ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ನಿವೃತ್ತ ಪೊಲೀಸ್ ಅಧಿಕಾರಿ ವಿಜಯ ಕಾಂದೋಲ್ಗಾಂಕರ್ ಮತ್ತು ಸದ್ಭಕರು, ಗಣ್ಯರು ಸ್ಥಳೀಯ ವಿವಿಧ ಸಂಘ ಸಂಸ್ಥೆ ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ, 

Mumbai News Desk

ಪ್ರಣವ್ ಬಿ.ಕೋಟ್ಯಾನ್ ಗೆ ಶೇ. 95.60 ಅಂಕ.

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ : ಗುರುಪೂರ್ಣಿಮೆ ಆಚರಣೆ

Mumbai News Desk

ಮಲಾಡ್ ಶ್ರೀಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ.

Mumbai News Desk

ಭಂಡಾರಿ ಸೇವಾ ಸಮಿತಿ ಮುಂಬಯಿ – 70ನೇ ವಾರ್ಷಿಕ ಕೌಟುಂಬಿಕ ಸ್ನೇಹ ಸಮ್ಮಿಲನ

Mumbai News Desk

ಮೆಂಡನ್ ಮೂಲಸ್ಥಾನ ಮುಂಬಯಿ ಶಾಖೆ 92ನೇ ವಾರ್ಷಿಕ ಮಹಾಸಭೆ.

Mumbai News Desk