
ಚಿತ್ರ ವರದಿ : ಶಂಕರ್ ಸುವರ್ಣ
ಡೊಂಬಿವಲಿ ಪಶ್ಚಿಮದ ಗೋಪಿನಾಥ್ ಚೌಕ್ ಬಲಿ ಇರುವ ಯಕ್ಷಕಲಾ ಸಂಸ್ಥೆ ಸಂಚಾಲಿತ ಶ್ರೀ ಜಗದಂಬ ಮಂದಿರದಲ್ಲಿ ಅಕ್ಟೋಬರ್ 15 ರ ರವಿವಾರದಿಂದ ದಿನಾಂಕ 24 ರ ಮಂಗಳವಾರದವರೆಗೆ ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.
ಶ್ರೀ ಕ್ಷೇತ್ರದ ತಂತ್ರಿಯವರ ಶುಭ ಆಶೀರ್ವಾದದೊಂದಿಗೆ ಹಾಗೂ ಪ್ರಧಾನ ಅರ್ಚಕರಾದ ರಘುಪತಿ ಭಟ್ ರವರ ನೇತೃತ್ವದಲ್ಲಿ ಚಂಡಿಕಾ ಹೋಮ, ದುರ್ಗ ನಮಸ್ಕಾರ ಪೂಜೆ ಮತ್ತು ರಂಗ ಪೂಜೆ ಸಹಿತ ಶರನ್ನವರಾತ್ರಿ ಮಹೋತ್ಸವವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.









ಪ್ರತಿನಿತ್ಯ ಆಮಂತ್ರಿತ ಭಜನಾ ಮಂಡಳಿಗಳಿಂದ ಬೆಳಿಗ್ಗೆ ಹಾಗೂ ಸಾಯಂಕಾಲ ಭಜನಾಮೃತ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿ ದಿನ ಮಧ್ಯಾಹ್ನ ಹಾಗೂ ರಾತ್ರಿ ಮಹಾಮಂಗಳಾರತಿ ನಡೆದು ಅನ್ನಸಂತರ್ಪಣೆ ನಡೆಯಿತು.






ಆಕ್ಟೊಬರ್ 15 ರ ರವಿವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ತೋರಣ ಮುಹೂರ್ತ
ಸಂಜೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರದ ಮಹಿಳಾ ವಿಭಾಗದ ವತಿಯಿಂದ ಕುಣಿತ ಭಜನೆ ನಡೆಯಿತು.
ನವರಾತ್ರಿ ಉತ್ಸವಕ್ಕೆ ದೇವಾಡಿಗ ಸಂಘ ಡೊಂಬಿವಲಿ ವಿಭಾಗ, ಸಾಯಿನಾಥ್ ಮಿತ್ರ ಮಂಡಳಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಹಾಗೂ ಶ್ರೀ ರಜಕ ಸಂಘ ಡೊಂಬಿವಲಿ ವಲಯದ ವತಿಯಿಂದ ಹೊರೆಕಾಣಿಕೆ ಅರ್ಪಿಸಲಾಯಿತು.







ಯುವ ವಿಭಾಗದ ಸದಸ್ಯರಿಂದ ಕುಣಿತ ಭಜನೆ ನಡೆಯಿತು.
ಅಕ್ಟೋಬರ್ 16 ರ ಸೋಮವಾರ ಮುಂಜಾನೆ ತುಲಾಭಾರ ಸೇವೆ, ಸಂಜೆ ದುರ್ಗಾ ನಮಸ್ಕಾರ ಪೂಜೆ.
ಅಕ್ಟೋಬರ್ 17 ರ ಮಂಗಳವಾರ ಸಂಜೆ ರಂಗ ಪೂಜೆ.
ಅಕ್ಟೋಬರ್ 18 ರ ಬುಧವಾರ ಸಂಜೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಪಲ್ಲಕ್ಕಿ ಉತ್ಸವ ನಡೆಯಿತು.
ಅಕ್ಟೋಬರ್ 19 ರ ಗುರುವಾರ ಲಲಿತ ನಾಮ ಸಹಸ್ರನೆ. ರಾತ್ರಿ ಶ್ರೀ ಜಗದಂಬಾ ಮಂದಿರ, ಮಹಿಳಾ ವಿಭಾಗದ ಸಂಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.








ಅಕ್ಟೋಬರ್ 20 ರ ಶುಕ್ರವಾರ ಬೆಳಿಗ್ಗೆ ಚಂಡಿಕಾ ಹೋಮ, ಸಂಜೆ ಶ್ರೀ ಅಜಿತ ಶೆಟ್ಟಿ, ಮೀರಾ ರೋಡ್ ಅವರ ಸಹಾಯಕತ್ವ ದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಿತ್ರ ಮಂಡಳಿ, ಮುಂಬಯಿ ಇವರಿಂದ “ಕುಂಜ ರoಗರ ದೈವ ಪ್ರತಾಪ” ಯಕ್ಷಗಾನ ಬಯಲಾಟ ಪ್ರದರ್ಶನ ಗೊಂಡಿತು.
ಅಕ್ಟೋಬರ್ 21 ರ ಶನಿವಾರ ಸಾಯಂಕಾಲ ಭ್ರಾಮರಿ ಕಲಾ ತಂಡ (ಸತೀಶ್ ಮನ್ಕೂರ್) ಮುಂಬಯಿ, ಮಂಗಳೂರು ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ, ರಾತ್ರಿ ಶ್ರೀ ಜಗದಂಬಾ ಮಂದಿರ ಯುವ ವಿಭಾಗದ ಆಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.








ಅಕ್ಟೋಬರ್22 ರ ರವಿವಾರ ಬೆಳಿಗ್ಗೆ ಚಂಡಿಕಾ ಹೋಮ, ಸಂಜೆ ರಂಗ ಪೂಜೆ,
ಅಕ್ಟೋಬರ್ 23 ರ ಸೋಮವಾರ ಮುಂಜಾನೆ
ದುರ್ಗಾ ಹೋಮ (ಸಂಪೂರ್ಣ ಆಹುತಿ) ರಾತ್ರಿ ಶ್ರೀ ಸತೀಶ ಶೆಟ್ಟಿ ಅಜೆಕಾರು ಮತ್ತು ಕುಟುಂಬಸ್ಥರ ಸಹಕಾರದಲ್ಲಿ ಶ್ರೀ ಗೀತಾಂಬಿಕ ಯಕ್ಷಗಾನ ಮಂಡಳಿ, ಅಸಲ್ಫಾ, ಮುಂಬಯಿ ಹಾಗೂ ಊರಿನ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ “ಶ್ರೀ ದೇವಿ ಮಹಾತ್ಮೆ” ಪ್ರದರ್ಶನ ಗೊಂಡಿತು.
ಯಕ್ಷಗಾನದ ಮಧ್ಯಂತರದಲ್ಲಿ ಸಂಸದ ಶ್ರೀಕಾಂತ್ ಶಿಂಧೆ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಮಂದಿರದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.








ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ದಿವಾಕರ್ ಜಿ ರೈ ಅಧ್ಯಕ್ಷತೆ ಯಲ್ಲಿ ನಡೆದ ಕಿರು ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಗಣ್ಯರ ಸಮ್ಮುಖದಲ್ಲಿ ಸತೀಶ್ ಶೆಟ್ಟಿ ಅಜೆಕಾರು ಅವರನ್ನು ಸನ್ಮಾನಿಸಲಾಯಿತು,
ಮಂದಿರದ ಏಳಿಗೆಗಾಗಿ ಸದಾ ಶ್ರಮಿಸುತ್ತಿರುವ ರವೀಂದ್ರ ವೈ ಶೆಟ್ಟಿ ಯವರನ್ನು ವಿಶೇಷವಾಗಿ ಗೌರವಿಸಲಾಯಿತು.
ರವೀಂದ್ರ ವೈ ಶೆಟ್ಟಿ ಯವರು ಗೌರವಕ್ಕೆ ಅಬಾರ ಮನ್ನಿಸಿದರು.
ಶಿವಸೇನೆ ದಕ್ಷಿಣ ಭಾರತೀಯ ಘಟಕದ ಪದಾಧಿಕಾರಿಗಳಾದ ಅನುಪಮಾ ಶೆಟ್ಟಿ ಹಾಗೂ ಶುಭಾಸ್ ಶೆಟ್ಟಿ ಇನ್ನಂಜೆ ಹಾಗೂ ಕಾರ್ಯಕ್ರಮ ಯಶಸ್ವಿಯಾಗಿ ಜರಗುವಲ್ಲಿ ಸಹಕರಿಸಿ ದವರನ್ನು ಸತ್ಕರಿಸಲಾಯಿತು.
ಮಂದಿರ ಪ್ರದಾನ ಅರ್ಚಕ ರಾದ ರಘುಪತಿ ಭಟ್ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷ ಇಂದ್ರಲಿ ದಿವಾಕರ್ ಶೆಟ್ಟಿ ಮಾತನಾಡುತ್ತ ಮಂದಿರದಲ್ಲಿ ಜರುಗುವ ಕಾರ್ಯಗಳನ್ನು ಸ್ಲ್ಯಾಂಗಿಸಿದರು.
ಅಧ್ಯಕ್ಷ ದಿವಾಕರ್ ಜಿ ರೈ ಮಾತನಾಡುತ್ತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಮಂದಿರ ಪ್ರದಾನ ಅರ್ಚಕ ರಾದ ರಘುಪತಿ ಭಟ್, ಕರ್ನಾಟಕ ಸಂಘ ಡೊಂಬಿವಲಿಯ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ರಾಜೀವ್ ಭಂಡಾರಿ, ಬಿಲ್ಲವರ ಅಸ್ಸೋಸಿಯೇಷನ್ ಮುಂಬಯಿಯ ಜೊತೆ ಕಾರ್ಯದರ್ಶಿ ರವಿ ಸನಿಲ್, ಮಂದಿರದ ಗೌರವ ಅಧ್ಯಕ್ಷ ಹರೀಶ್ ಡಿ ಶೆಟ್ಟಿ, ಉಪಾಧ್ಯಕ್ಷ ರವೀಂದ್ರ ವೈ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಸಿ ಕೋಟ್ಯಾನ್, ಸಾಂಸ್ಕೃತಿಕ ವಿಭಾಗದ ವಿಜಯ್ ಶೆಟ್ಟಿ ಸಜೀಪ ಗುತ್ತು, ಮಾಜಿ ಅಧ್ಯಕ್ಷ ಚಂದ್ರಹಾಸ್ ರೈ, ಜೊತೆ ಕೋಶಾಧಿಕಾರಿ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಜೊತೆ ಕಾರ್ಯದರ್ಶಿ ಸಚಿನ್ ಪೂಜಾರಿ ಹಾಗೂ ಶಿಲ್ಪಾ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.








ಅಕ್ಟೋಬರ್ 24 ರ ಮಂಗಳವಾರ ಮಹಾಮಂಗಳಾರತಿ, ಪಲ್ಲ ಪೂಜಾ ಅನ್ನಸಂತರ್ಪಣೆ ಜರುಗಿತು.
ಸಾವಿರಾರು ಭಕ್ತಾಭಿಮಾನಿಗಳು ಶರನ್ನವರಾತ್ರಿಯ ಎಲ್ಲಾ ಶುಭದಿನಗಳಲ್ಲಿ ಎಲ್ಲಾ ತರಹದ ಸೇವೆಯಲ್ಲಿ ಉಪಸ್ಥಿತರಿದ್ದು, ತೀರ್ಥ ಪ್ರಸಾದ ಸ್ವೀಕರಿಸಿ ಅನ್ನ ಸಂತರ್ಪಣೆ ಯಲ್ಲಿ ಪಾಲ್ಗೊಂಡರು, ಶ್ರೀ ಜಗದಂಬೆಯ ಶರನ್ನವರಾತ್ರಿಯ ಮಹೋತ್ಸವವು ಯಶಸ್ವಿಯಾಗಿ ನಡೆಯುವಲ್ಲಿ
ಮಂದಿರದ ಗೌರವ ಅಧ್ಯಕ್ಷರು, ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು, ಪೂಜಾ ಸಮಿತಿ, ಶನಿಪೂಜಾ ಸಮಿತಿ, ಯುವ ವಿಭಾಗ, ಮಹಿಳಾ ವಿಭಾಗ ಹಾಗೂ ಸರ್ವ ಸದಸ್ಯರ ಪರಿಶ್ರಮ ಅಭಿನಂದನಾರ್ಹ.