September 6, 2026
Mumbai News Kannada
ಮುಂಬಯಿ

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ – ಕರುಣಾಕರ ಎಂ. ಶೆಟ್ಟಿ





ಮುಂಬಯಿ : ನಮ್ಮ ತುಳು ನಾಡು ಶ್ರೀಮಂತ ಸಂಸ್ಕೃತಿಯನ್ನು ಹೊಂದಿಕೊಂಡಿದ್ದು ಹೊರನಾಡಲ್ಲಿ ನಮ್ಮ ತುಳು ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮವು ನಮ್ಮವರಿಂದ ನಿರಂತರವಾಗಿ ನಡೆಯುತಿರುವುದು ನಿಜಕ್ಕೂ ಪ್ರಶಂಸನೀಯ ತುಳು ಸಂಘ ಬೊರಿವಲಿ ಯ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿ ಯವರು ನುಡಿದರು.

ತುಳು ಸಂಘ ಬೊರಿವಲಿ ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಫೆ. ೧8 ರಂದು ಮಹಿಷ ಮರ್ಧಿನಿ ದೇವಸ್ಥಾನ, ಜಯರಾಜ್ ನಗರ, ಬೊರಿವಲಿ(ಪ), ಇಲ್ಲಿ ನಡೆದಿದ್ದು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ಅವರು ನಮ್ಮ ಸಂಘವು ತುಳು ಬಾಷೆ ಸಂಸ್ಕೃತಿಯನ್ನು ಉಳಿಸಲು ಆರಂಭದಿಂದಲೇ ಹಲವಾರು ಸಮಾಜಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಹಿಳಾ ವಿಭಾಗದ ವತಿಯಿಂದ ಪ್ರತೀ ವರ್ಷ ಅರಸಿನ ಕುಂಕುಮ ಕಾರ್ಯಕ್ರಮ ನಡೆಯುತ್ತಿದ್ದು ಪರಿಸರದ ತುಳು ಕನ್ನಡ ಮಹಿಳೆಯರು ಒಂದಾಗುತ್ತಿರುವುದು ಅಭಿನಂದನೀಯ ಎನ್ನುತ್ತಾ ಸಂಘದ ಚಟುವಟಿಕೆಗಳ ಬಗ್ಗೆ ಮಾಯಿತಿಯಿತ್ತರು. 

ಹಿರಿಯ ಸಾಹಿತಿ ಸೀಮಂತೂರು ಚಂದ್ರಹಾಸ  ಸುವರ್ಣ ಮಾತನಾಡುತ್ತಾ ಯುವ ಜನಾಂಗವು ತುಳು ಭಾಷೆಯನ್ನು ಕಲಿಯುವಂತಾಗಲು ಅವರಿಗೆ ಹಿರಿಯರು ಪ್ರೋತ್ಸಾಹಿಸಬೇಕು. ತುಳು  ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯ ಇದೆ. ಇದಕ್ಕಾಗಿ ಯುವ ಜನಾಂಗಕ್ಕೆ ತುಳು ಬಾಷೆಯನ್ನು ಕಲಿಯಲು ಪ್ತೋತ್ಸಾಹಿಸಬೇಕಾರಿದೆ ಎಂದರು. 

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದೇವಾಡಿಗ ಸಂಘ ಮುಂಬಯಿಯ  ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರತಿಭಾ ಗಣೇಶ್ ದೇವಾಡಿಗ ಅವರು ಈ ಸಂದರ್ಭದಲ್ಲಿ ಮಾತನಾಡಿ ಹಳದಿ ಕುಂಕುಮದ ಮಹತ್ವದ  ಬಗ್ಗೆ  ಮಾಹಿತಿಯಿತ್ತು ಕಾರ್ಯಕ್ರಮಕ್ಕೆ ಶುಭ ಕೋರಿದರು. 

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯ ಎಲ್ಲರನ್ನು ಸ್ವಾಗತಿಸಿ ಮಹಿಳಾ ವಿಭಾಗದ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಮಹಿಷ ಮರ್ಧಿನಿ ದೇವಸ್ಥಾನದ ಕಾರ್ಯನಿರ್ವಾಹಕ ಟ್ರಷ್ಟಿ ಪ್ರದೀಪ್ ಎಸ್. ಶೆಟ್ಟಿ, ಉಷಾ ಗೋಪಾಲ್ ಶೆಟ್ಟಿ, ರತಿ ಶಂಕರ್ ಶೆಟ್ಟಿ ಮೊದಲಾದವರನ್ನು ಗೌರವಿಸಲಾಯಿತು.  

ಪ್ರಾರಂಭದಲ್ಲಿ ಮಹಿಳಾ ಸದಸ್ಯರಿಂದ ಭಜನೆ, ಸಭಾ ಕಾರ್ಯಕ್ರಮದ ನಂತರ ಉಪಸ್ಥಿತರಿದ್ದ ಎಲ್ಲಾ ಮಹಿಳೆಯರು ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಬಾಗವಹಿಸಿದರು. ತುಳು ಸಂಘದ ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ, ಉಪಾದ್ಯಕ್ಷರಾದ ಹರೀಷ್ ಮೈಂದನ್, ಕೋಶಾಧಿಕಾರಿ ಚಂದ್ರಹಾಸ ಬೆಳ್ಚಡ,  ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಕುಸುಮಾ ಶೆಟ್ಟಿ, ಹಾಗೂ ಸಮಿತಿಯ ಮತ್ತು ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯದರ್ಶಿ ಲಕ್ಷ್ಮಿ ದೇವಾಡಿಗ ದನ್ಯವಾದ ಸಮರ್ಪಿಸಿದರು.



Related posts

ಬಂಟರ ಸಂಘ ಮುಂಬಯಿ – ಜೋಗೇಶ್ವರಿ-ದಹಿಸರ್ ಸಮಿತಿ ಆಶ್ರಯದಲ್ಲಿ “ಭೀಷ್ಮ ಸೇನಾಧಿಪತ್ಯ – ಕರ್ಮಬಂಧ” ಯಕ್ಷಗಾನ ತಾಳಮದ್ದಳೆ

Mumbai News Desk

ಮಲಾಡ್ ಲಕ್ಷ್ಮಣ ನಗರದ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ,

Mumbai News Desk

ಫಲಿಮಾರು ಮಠದೀಶರಿಗೆ ವಿಶ್ವ ಬಂಟರ ಕಾರ್ಯಕ್ರಮದ ಆಮಂತ್ರಣ.

Mumbai News Desk

ಅತ್ಯಂತ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ -ಶ್ರೀ ಕೃಷ್ಣ ಲೀಲೋತ್ಸವ /ಮೊಸರು ಕುಡಿಕೆ ಹಬ್ಬ /ಪಲ್ಲಕ್ಕಿ ಉತ್ಸವ 

Mumbai News Desk

ಬೈಂದೂರು-ಕುಂದಾಪುರ ಬಿಲ್ಲವರು ಮುಂಬಯಿ ಸ್ನೇಹ ಸಮ್ಮಿಲನ, ಅರಸಿನ ಕುಂಕುಮ ಮತ್ತು ಮನೋರಂಜನಾ ಕಾರ್ಯಕ್ರಮ

Mumbai News Desk

ಮುಂಬಯಿ ಕನ್ನಡ ಸಂಘದ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk