
ಡೊಂಬಿವಲಿ ಟೆಲ್ಕ್ ಸ್ ವಾಡಿಯ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ 65ನೇ ವಾರ್ಷಿಕ ಮಂಗಳೋತ್ಸವವು ತಾ. 03.11.2023 ಶುಕ್ರವಾರ ಬೆಳಿಗ್ಗೆ 8.00 ರಿಂದ ತಾ. 04.11.2023 ಶನಿವಾರ ರಾತ್ರಿ 10.00 ಗಂಟೆಯವರೆಗೆ ದೇವಸ್ಥಾನದ ಪ್ರದಾನ ಅರ್ಚಕ ಪ್ರಕಾಶ್ ಭಟ್ ಕಾನಂಗಿ ನೇತೃತ್ವದಲ್ಲಿ ಜರಗಲಿದೆ.
ಶುಕ್ರವಾರ ಬೆಳಿಗ್ಗೆ 8.00 ರಿಂದ ತೋರಣ ಮುಹೂರ್ತ
ಗಣಹೋಮ, ನವಕ ಪ್ರದಾನ ಹೋಮ, ಪಂಚಾಮೃತ ಅಭಿಷೇಕ ಹಾಗೂ ಅಲಂಕಾರ ಪೂಜೆ
9.30 ಮಂಗಳಾರತಿ,
ಶನಿವಾರ ಬೆಳಿಗ್ಗೆ 6.30 ರಿಂದ ಬೆಳಗಿನ ಪೂಜೆ,
9.00 ರಿಂದ 11.00 ರವರೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ
11.15 ಕ್ಕೆ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ
ಮಧ್ಯಾಹ್ನ 12.15ಕ್ಕೆ ಮಹಾಮಂಗಳಾರತಿ, ಮಹಾಪೂಜೆ
12.30 ರಿಂದ 1.30 ರ ವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ
1.30 ರಿಂದ 7.30 ರವರೆಗೆ ಶ್ರೀ ಶನಿಪೂಜೆ ಶನಿ ಗ್ರಂಥ ಪಾರಾಯಣ ಯಕ್ಷಗಾನ ರೂಪದಲ್ಲಿ
ರಾತ್ರಿ 8.00ರಿಂದ ರಂಗಪೂಜೆ
ರಾತ್ರಿ 9.00 ಕ್ಕೆ ಭಜನೆ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ
ಭಕ್ತಾಭಿಮಾನಿಗಳು ಮಹಾಪೂಜೆಯ ಎಲ್ಲಾ ಸೇವೆಯಲ್ಲಿ ಪಾಲ್ಗೊಂಡು ತನು ಮನ ಧನದಿಂದ ಸಹಕರಿಸಿ ಶ್ರೀ ರಾಧಾಕೃಷ್ಣ ಶನೀಶ್ವರ ದೇವರ ಮಹೋತ್ಸವವನ್ನು ಚೆಂದಗಾಣಿಸಿ ಕೊಡಬೇಕಾಗಿ ಹಾಗೂ ಶ್ರೀ ಮಹಾಗಣಪತಿ ಮತ್ತು ಶನೀಶ್ವರ ಹಾಗೂ ಪ್ರಧಾನ ಒಡೆಯ ಶ್ರೀ ರಾಧಾಕೃಷ್ಣ ದೇವರ ಅನುಗ್ರಹ ಕೃಪೆಗೆ ಪಾತ್ರರಾಗಿ ತೀರ್ಥ ಪ್ರಸಾದವನ್ನು ಸ್ವೀಕರಿಸಿಬೇಕಾಗಿ ಮಂದಿರದ ಗೌ,ಅಧ್ಯಕ್ಷರು, ಅಧ್ಯಕ್ಷರು, ಕಾರ್ಯಕಾರಿ ಸಮಿತಿ, ಸಲಹೆಗಾರರು, ಮಹಿಳಾ ವಿಭಾಗ ಹಾಗೂ ಸರ್ವಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.