
ಬಿಜೆಪಿ ಡೊಂಬಿವಲಿಯ ಪರಿವಾಹನ ವಿಭಾಗ ಹಾಗೂ ಜುವೆಲ್ಲರಿ ಅಸ್ಸೋಸಿಯೇಷನ್ ಅಕ್ಟೋಬರ್ 28 ಮತ್ತು29 ರಂದು ಡೊಂಬಿವಲಿ ಕೆ ಡಿ ಎಮ್ ಸಿ ಮೈದಾನದಲ್ಲಿ ಸಚಿವ ರವೀಂದ್ರ ಚೌಹಾಣ್ ರವರ ನೇತೃತ್ವದಲ್ಲಿ ಏರ್ಪಡಿಸಿದ್ದ ನಮೋ ರಾಮೋ ರಾಮಜತ್ ಶರದ್ ಪೂರ್ಣಿಮಾ ಗರ್ಬಾ ಉತ್ಸವದಲ್ಲಿ ಯಕ್ಷಕಲಾ ಸಂಸ್ಥೆ ಸಂಚಾಲಿತ ಶ್ರೀ ಜಗದಂಬ ಮಂದಿರದ ಯುವ ವಿಭಾಗದ ಜಗದಂಬಾ ಗ್ರೂಪ್ ಡೊಂಬಿವಲಿ ದ್ವಿತೀಯ ಸ್ಥಾನ ಪಡೆಯಿತು.
ಬಿಜೆಪಿ ಡೊಂಬಿವಲಿ ದಕ್ಷಿಣ ಭಾರತ ಘಟಕದ ಅಧ್ಯಕ್ಷ ರತನ್ ಪೂಜಾರಿ, ಜಗದಂಬ ಮಂದಿರದ ಯುವ ವಿಭಾಗದ ಅಧ್ಯಕ್ಷ ಪ್ರಸಾದ್ ದೇವಾಡಿಗ, ಹಾಗೂ ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.