September 6, 2026
Mumbai News Kannada
ಮುಂಬಯಿ

ಮುಂಬಾಯಿ ಮೊಗವೀರ ಮಹಾ ಸಭೆ ಹಾಗೂ ಮಹಿಳಾ ಮಂಡಳಿ ವತಿಯಿಂದ “ ಆಟಿದ ಒಂಜಿ ಕೂಟ” ಹಾಗೂ “ಅಭಿನಂದನಾ ಕಾರ್ಯಕ್ರಮ”





ಮುಂಬಾಯಿ ಮಹಾನಗರದಲ್ಲಿ ನೆಲೆಸಿರುವ ಕಾಪು ಮೊಗವೀರ ಮಹಾ ಸಭೆ ಹಾಗೂ ಮಹಿಳಾ ಮಂಡಳಿ ಇವರ ಆಟಿದ ಒಂಜಿ ಕೂಟ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು 27.07.2025 ರ ರವಿವಾರದಂದು ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಜರಗಿಸಲಾಯಿತು. ಕಾರ್ಯಕ್ರಮವು ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ತುಳಸಿ ಸದಾನಂದರ ಸ್ವಾಗತ ಭಾಷಣದಿಂದ ಪ್ರಾರಂಭವಾಯಿತು.
ಅವರು ಮುಂಬಾಯಿ ಮೊಗವೀರ ಮಹಾಸಭೆಯ ಅಧ್ಯಕ್ಷರಾದ ಶ್ರೀಯುತ ಸತೀಶ್ ಕರ್ಕೇರ, ಮುಖ್ಯ ಅಥಿತಿಗಳಾದ ಶ್ರೀಯುತ ರತ್ನಾಕರ ಕರ್ಕೇರ ಹಾಗೂ ಶ್ರೀಮತಿ ಸುನಂದಾ ಬಂಗೆರರನ್ನು ವೇದಿಕೆಗೆ ಸ್ವಾಗತಿಸಿದರು. ಇವರೊಂದಿಗೆ ಮಹಿಳಾ ಮಂಡಳಿಯ ಹಿರಿಯ ಸದಸ್ಯರಾದ ಶ್ರೀಮತಿ ಯಶೋದ ಕಾಂಚನ್ ಹಾಗೂ ಹಾಗೂ ಶ್ರೀಮತಿ ಶೋಭಾ ಕರ್ಕೆರರು ದೀಪ ಪ್ರಜ್ವಲಿಸಿ ಕಾರ್ಯಕ್ರಮದ ಶುಭಾರಂಭ ಮಾಡಿದರು. ಮಹಿಳಾ ಮಂಡಳಿಯ ಪ್ರಾರ್ಥನೆಯಾದ ಬಳಿಕ ಶ್ರೀಮತಿ ಪ್ರತಿಭಾ ಭಾಸ್ಕರ್ ನೆರೆದ ಸದಸ್ಯರೆಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಕಾರ್ಯಕ್ರಮವನ್ನು ಮಂದುವರಿಸಿದರು.
ಮುಖ್ಯ ಅತಿಥಿಗಳಾದ ಶ್ರೀಯುತ ರತ್ನಾಕರ್ ಕರ್ಕೇರ ಹಾಗೂ ಅವರ ಕುಟುಂಬದ ಸದಸ್ಯರಾದ ಸುನಂದಾ ಕರ್ಕೇರ, ಶ್ರೀಮತಿ ಮೀನಾಕ್ಷಿ ಕರ್ಕೇರ, ಶ್ರೀಮತಿ ವಿಶಾಲಾಕ್ಷಿ ಕುಮಾರ್ ಹಾಗೂ ಶ್ರೀಯುತ ಸುರೇಶ ಕರ್ಕೇರರ ಅಭಿನಂದನಾ ಕಾರ್ಯಕ್ರಮವನ್ನು ಅವರೆಲ್ಲರ ಕಿರು ಪರಿಚಯದೊಂದಿಗೆ ಮುಂಬಾಯಿ ಮಹಾಸಭೆ ಹಾಗೂ ಮಹಿಳಾ ಮಂಡಳಿಯ ಸದಸ್ಯರ ಸಹಯೋಗದಿಂದ ಫಲಪುಷ್ಪ ಕಿರುಕಾಣಿಕೆ ನೀಡಿ ಗೌರವದಿಂದ ಸನ್ಮಾನಿಸಲಾಯಿತು . ಮುಖ್ಯ ಅಥಿತಿಗಳಾದ ಶ್ರೀಯುತ ರತ್ನಾಕರ್ ಕರ್ಕೇರರು ಮಾತನಾಡಿ ನಮ್ಮ ಸಮಾಜದ ಏಕತೆ ಮತ್ತು ಉನ್ನತಿಗಾಗಿ ಇಂತ ಕಾರ್ಯಕ್ರಮಗಳು ಅಗತ್ಯವಿದೆ. ಇಂದು ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿರುವುದು ತುಂಬಾ ಸಂತೋಷದ ವಿಷಯ ಎಂದರು.
ಅನಂತರದಲ್ಲಿ ಕಾಪು ಮಹಾಸಭೆಯ ಅಧ್ಯಕ್ಷರಾದ ಶ್ರೀಯುತ ಸತೀಶ್ ಕರ್ಕೇರ, ಉಪಾಧ್ಯಕ್ಷರಾದ ಶ್ರೀಯುತ ನೀಲಾಧರ ಸಾಲ್ಯಾನ್, ಶ್ರೀಯುತ ಯಶೋಧರ ಕೋಟ್ಯಾನ್, ಪದದಿಕಾರಿಗಳಾದ ಶ್ರೀಯುತ ವಸಂತ ಕುಂದರ್ , ಶ್ರೀಯುತ ರಮೇಶ ಕರ್ಕೇರ ,ಶ್ರೀಯುತ ದೇವದಾಸ ಅಮೀನ್ , ಶ್ರೀಯುತ ನಿತೇಜ್ ಕರ್ಕೇರ, ಶ್ರೀಯುತ ಉಮೇಶ್ ಕರ್ಕೇರ, ಶ್ರೀಯುತ ಮೋಹನ್ ಮೆಂಡನ್ ಹಾಗೂ ಬಾಲಕೃಷ್ಣ ಮೆಂಡನ್ ಅವರನ್ನು ಮುಂಬಾಯಿ ಮಹಾಸಭೆ ಹಾಗೂ ಮಹಿಳಾ ಮಂಡಳಿಯ ಸದಸ್ಯರ ಸಹಯೋಗದಿಂದ ಬಹಳ ಗೌರವದಿಂದ ಫಲಪುಷ್ಪ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು .ಅವರೆಲ್ಲರ ಪರಿಚಯ ಮಹಿಳಾ ಮಂಡಳಿಯ ವಿವಿಧ ಸದಸ್ಯರು ಅವರ ಬಾಲ್ಯ, ಶಿಕ್ಷಣ, ಕುಟುಂಬ, ಉದ್ಯೋಗ ಹಾಗೂ ಸಮಾಜ ಸೇವೆಯ ವಿವರದೊಂದಿಗೆ ನೀಡಿದರು. ಶ್ರೀಯುತ ಸತೀಶ್ ಕರ್ಕೆರರು ಮಾತನಾಡಿ ಆಟಿದ ಒಂಜಿ ಕೂಟ ಬರೇ ಸಂಭ್ರಮವಾಗದೆ ಅಂದಿನ ಕಾಲದ ನೆನಪು ಗಳಾಗಬೇಕು. ಎಲ್ಲಾ ಮಹಿಳೆಯರು ಒಗ್ಗಟ್ಟಾಗಿ ಸಮಾಜವನ್ನು ಸಮರ್ಥವಾಗಿ ಮುನ್ನಡೆಸಬಹುದು ಎಂದು ಇಂದಿನ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.
ಕಾಪು ಗ್ರಾಮದಲ್ಲಿನ ಹಿರಿಯ ಮಹಿಳಾ ಸದಸ್ಯರನ್ನು ಅವರ ಹಿರಿತನಕ್ಕೆ ಅನುಗುಣವಾಗಿ ಸನ್ಮಾನಿಸಲಾಯಿತು.ಶ್ರೀಮತಿ ಇಂದಿರಾ ಸಾಲ್ಯಾನ್, ಶ್ರೀಮತಿ ಯಶೋದ ಕೋಟ್ಯಾನ್ , ಶ್ರೀಮತಿ ಕುಸುಮ ಕರ್ಕೇರ, ಶ್ರೀಮತಿ ಶೋಭಾ ಕರ್ಕೇರ , ಹಾಗೂ ಶ್ರೀಮತಿ ಕಮಲಾಕ್ಷಿ ಪುತ್ರನ್ ರವರನ್ನು ಕಾಪು ಮಹಿಳಾ ಮಂಡಳಿಯ ವಿವಿದ ಸದಸ್ಯರು ತುಂಬಾ ಪ್ರೀತಿಯಿಂದ ಅಭಿಮಾನದಿಂದ ಫಲಪುಷ್ಪ ಕಿರುಕಾಣಿಕೆ ನೀಡಿ ಸನ್ಮಾನಿಸಿದರು .
ಪ್ರತಿಯೊಂದು ಸನ್ಮಾನಕ್ಕೂ ಮದ್ಯೆ ಮನೋರಂಜನೆಯು ಸಾಗಿದಂತೆ, ಮಹಿಳಾ ಮಂಡಳಿಯ ವಿವಿಧ ಕಲಾವಿದರು ತುಂಬಾ ಮಧುರವಾಗಿ ಹಾಡಿ ಹಾಗೂ ಸಭೆಯಲ್ಲಿನ ಸಭಿಕರನ್ನು ರಂಜಿಸಿದರು.ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಕ್ಕಳು ಮತ್ತು ಮಹಿಳೆಯರಿಂದ ನೃತ್ಯ ವೈವಿಧ್ಯ ಪ್ರದರ್ಶನಗೊಂಡಿತ್ತು. ಮಹಿಳಾ ಮಂಡಳಿಯ ಸದಸ್ಯರು ಬಿಡಿಸಿದ್ದ ರಂಗೋಲಿ ಎಲ್ಲರ ಮನಸೂರೆಗೊಂಡಿತ್ತು. ಭಾಗವಹಿಸಿದ ಎಲ್ಲ ಸದಸ್ಯರುಗಳಿಗೆ ಶ್ರೀಯುತ ರತ್ನಾಕರ ಕರ್ಕೇರ, ಶ್ರೀಯುತ ಸತೀಶ್ ಕರ್ಕೇರ ಹಾಗೂ ಶ್ರೀಮತಿ ಸುನಂದಾ ಬಂಗೆರರು ಆಕರ್ಷಕ ಬಹುಮಾನಗಳನ್ನು ನೀಡಿ ಹಾರೈಸಿದರು.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತನು ಮನ ಧನ ದಿಂದ ಸಹಕಾರ ನೀಡಿದ ಮುಂಬಾಯಿ ಮೊಗವೀರ ಮಹಾಸಭೆಯ ಅಧ್ಯಕ್ಷರು , ಉಪಾಧ್ಯಕ್ಷರು, ಹಾಗೂ ಪದಾದಿಕಾರಿಗಳೆಲ್ಲರಿಗೂ,ಮುಖ್ಯ ಅತಿಥಿಗಳಾದ ಶ್ರೀಯುತ ರತ್ನಾಕರ ಕರ್ಕೇರ ಹಾಗೂ ಅವರ ಕುಟುಂಬದವರೆಲ್ಲರಿಗೂ, ಪ್ರತ್ಕ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಂದ ಚೆಂದವನ್ನು ಹೆಚ್ಚಿಸಿದ ಮಹಿಳಾ ಮಂಡಳಿಯ ಸದಸ್ಯರೆಲ್ಲರಿಗೂ ಶ್ರೀಮತಿ ತುಳಸಿ ಸದಾನಂದ್ ಕೃತಜ್ಞತೆಯೊಂದಿಗೆ ಧನ್ಯವಾದಗಳನ್ನು ಅರ್ಪಿಸಿದರು.ಈ ಸಮಾರಂಭವು ಶ್ರೀಮತಿ ತುಳಸಿ ಸದಾನಂದ್ ರವರ ನಾಯಕತ್ವದಲ್ಲಿ, ಶ್ರೀಮತಿ ಪ್ರಫುಲ್ಲ ರವರ ಸಹಾಯಕತ್ವದಲ್ಲಿ ಹಾಗೂ ಶ್ರೀಮತಿ ಪ್ರತಿಮಾ ಭಾಸ್ಕರ್ ರವರ ನಿರೂಪಣೆಯೊಂದಿಗೆ, ಮಹಿಳಾ ಮಂಡಳಿಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಅತ್ಯಂತ ಸುವ್ಯವಸ್ಥಿತವಾಗಿ, ಚೆನ್ನಾಗಿ ಮೂಡಿ ಬಂದಿದೆ.
ಕೊನೆಯಲ್ಲಿ ಶ್ರೀಯುತ ಶಮಿತ್ ಸಾಲಿಯಾನ್ ರವರ ಪ್ರಾಯೋಜಕತ್ವದಲ್ಲಿ ಆಟಿಯ ವಿವಿಧ ವ್ಯಂಜನಗಲೊಡನೆ ರುಚಿಕರವಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು .



Related posts

ಡೊಂಬಿವಲಿಯಲ್ಲಿ ಜಗಜ್ಯೋತಿ ಕಲಾವೃಂದದ 39ನೇ ವಾರ್ಷಿಕೋತ್ಸವ ಸಂಭ್ರಮ: ಸಾಹಿತಿಗಳಾದ ಪ್ರಜ್ಞಾ ಮತ್ತಿಹಳ್ಳಿ ಹಾಗೂ ತೇಜಾವತಿ ಎಚ್.ಡಿ ಅವರಿಗೆ ಪ್ರತಿಷ್ಠಿತ ಸ್ಮಾರಕ ಪ್ರಶಸ್ತಿ ಪ್ರದಾನ

Mumbai News Desk

ಬಜೆ ಮೊಗವೀರ ಸುವರ್ಣ ಮೂಲಸ್ಥಾನ ಮುಂಬಾಯಿ ಶಾಖೆ: ಶತಮಾನೋತ್ಸವ ಮನವಿ ಪತ್ರ ಬಿಡುಗಡೆ

Mumbai News Desk

ನವಿ ಮುಂಬಯಿ ಘನ್ಸೋಲಿಯ ದೇವಿ ಮೂಕಾಂಬಿಕಾಗೆ ಸೋಮನಾಥ ಎಸ್‌. ಕರ್ಕೇರರ ನೂತನ ತುಳು ಕೃತಿ ‘ಪೆರ್ಗ’ ದ ಮೊದಲ ಪ್ರತಿ ಅರ್ಪಣೆ

Mumbai News Desk

ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ 15ನೇ ವರ್ಷದ ಸಂಭ್ರಮ

Mumbai News Desk

ಕುಲಾಲ ಭವನದ ಆಹ್ವಾನ ಪತ್ರಿಕೆ ವಿತರಣೆ: ಕುಲಾಲ ಸಂಘ ಮುಂಬಯಿ-ಥಾಣೆ, ಕಾಸರ, ಖರ್ಜತ್, ಬಿವಂಡಿ ಸ್ಥಳೀಯ ಸಮಿತಿ

Mumbai News Desk

ವಸಯಿ ಕರ್ನಾಟಕ ಸಂಘ 38ನೇ ವಾರ್ಷಿಕೋತ್ಸವ ಸಂಭ್ರಮ ಸಾಧಕರಿಗೆ ಸನ್ಮಾನ, ನೃತ್ಯ ವೈಭವ, ನಾಟಕ

Mumbai News Desk