
ಮುಂಬಯಿಯ ಹಿರಿಯ ಧಾರ್ಮಿಕ ಸಂಸ್ಥೆ, ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಸಂಚಾಲಕರಾದ , ವಿದ್ಯಾದಾಯಿನಿ ಸಭಾದ ಶತಮಾನೋತ್ಸವ ಸಂಭ್ರಮ ಆಕ್ಟೊಬರ್ 29 ರಂದು ದಿನವಿಡಿ ಬಿಲ್ಲವ ಭವನದ ನರ್ಸಪ್ಪ ಸಿ.ಸಾಲ್ಯಾನ್ ಹಾಗೂ ಜಯ ಟಿ.ಪೂಜಾರಿ ಸ್ಮರಣಾರ್ಥ ದ್ವಾರ ,ಸೂರು ಸಿ.ಕರ್ಕೇರ ಸ್ಮರಣಾರ್ಥ ವೇದಿಕೆಯಲ್ಲಿ ಅದ್ದೂರಿಯಾಗಿ ಜರಗಿತು.
ಶಾಲಾ ಹಳೆವಿದ್ಯಾರ್ಥಿ ,ಭಾರತ್ ಕೋಚ್
ನ ನಿರ್ದೇಶಕ ಸದಾಶಿವ ಶೆಟ್ಟಿ, ಶ್ರೀ ಭುವನೇಶ್ವರಿ ಸೇವಾ ಸಮಿತಿಯ ಧರ್ಮದರ್ಶಿ ರಾಜೇಶ್ ಭಟ್, ಅಂತಾರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ, ಹಾಗೂ ವಾಸ್ತುತಜ್ಞ ಅಶೋಕ್ ಪುರೋಹಿತ್ ಕಲ್ಪವೃಕ್ಷದ ಕೊಂಬನ್ನು ಬಿಡಿಸಿ ಶತ ಸಂಭ್ರಮಕ್ಕೆ ಚಾಲನೆ ನೀಡಿದರು.
ಸಭಾದ ಅಧ್ಯಕ್ಷರಾದ ಪುರುಷೋತ್ತಮ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ
ಶಾಲಾ ಹಳೇವಿದ್ಯಾರ್ಥಿ ,ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ,ಭಾರತ್ ಬ್ಯಾಂಕ್ ನ ಮಾಜಿ ಕಾರ್ಯದ್ಯಕ್ಷ ಡಿ.ಬಿ.ಅಮೀನ್ , ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮಾ ಸೇವಾ ಸಮಿತಿಯ ಅಧ್ಯಕ್ಷ ರವಿ ಎಲ್.ಬಂಗೇರ, ಸಮಾಜ ಸೇವಕ ,ಉದ್ಯಮಿ ,ನಾರಾಯಣ ಪೂಜಾರಿ, ಸಮಾಜ ಸೇವಕ ಡಾ.ಸತೀಶ್ ಬಂಗೇರ ,ಕನ್ನಡ ಜಾನಪದ ಪರಿಷತ್ ಬೆಂಗಳೂರು, ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ರಾಮಣ್ಣ ದೇವಾಡಿಗ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.



ಈ ಸಂದರ್ಭದಲ್ಲಿ ಸಭದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ಸಭಾದಲ್ಲಿ ಜೀವನ ಪರ್ಯಂತ ಸೇವೆಗೈದ ಹಿರಿಯರಾದ ಗೋಪಾಲ್ ಸಿ.ಸಾಲ್ಯಾನ್, ಸಭಾದ ಗೌರವ ಅಧ್ಯಕ್ಷ ಜೆ ಎಂ.ಕೋಟ್ಯಾನ್, ಉಪಾಧ್ಯಕ್ಷ ಆರ್.ಕೆ.ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು, ಹಾಗೂ , ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಗಲಿಸಿದ ಶಾಲಾ ಹಳೆವಿದ್ಯಾರ್ಥಿಗಳನ್ನು ,ಶಾಲಾ ಅಧ್ಯಾಪಕರುಗಳನ್ನು , ನಿವೃತ್ತ ಅಧ್ಯಾಪಕರನ್ನು, ಸಭಾದ ಪದಾಧಿಕಾರಿಗಳನ್ನು, ಮಾಜಿ ಪದಾಧಿಕಾರಿಗಳನ್ನು, ಮತ್ತು ಸ್ಕೌಟ್ ನಲ್ಲಿ ರಾಷ್ಟ್ರಪತಿ ಪದಕ ಪಡೆದ ಸಂಜೀವ ಎಂ.ಬಿಲ್ಲವ ಇವರನ್ನು ಗೌರವಿಸಲಾಯಿತು.


ಪ್ರಾರಂಭದಲ್ಲಿ ಗೌರವ ಅಧ್ಯಕ್ಷ ಜೆ.ಎಂ.ಕೋಟ್ಯಾನ್ ಸ್ವಾಗತಿಸಿದರೆ, ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ.ಎಂ.ಕೋಟ್ಯಾನ್ ಪ್ರಸ್ತಾವಿಕ ಮಾತನಾಡಿದರು.



ಸರೋಜಿನಿ ವಿ.ಪೂಜಾರಿ ಪ್ರಾಥನೆಗೈದರು.
ಸಚಿಂದ್ರ ಅಂಬಾಗಿಲು ಹಾಗೂ ಹರಿಣಿ ನಿಲೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರೆ ,ಜತೆ ಕಾರ್ಯದರ್ಶಿ ಉಮೇಶ್ ಅಂಚನ್ ಧನ್ಯವಾದ ಸಮರ್ಪಿಸಿದರು.
ಸಭಾದ ಗೌರವ ಕೋಶಾಧಿಕಾರಿ ಪದ್ಮನಾಭ ಎಸ್.ಪೂಜಾರಿ , ಶಾಲಾ ಕಾರ್ಯಧ್ಯಕ್ಷ ಡಾ.ಪ್ರಕಾಶ್ ಮೂಡಬಿದ್ರೆ, ಶಾಲಾ ಮುಖ್ಯೊಪಾಧ್ಯಯ ಪ್ರಕಾಶ್ ಎಂ.ಆರ್.ಮಹಿಳಾ ವಿಭಾಗದ ಕಾರ್ಯದ್ಯಕ್ಷೇ ವಸಂತಿ ಆರ್.ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ “ಡೆನ್ನ ಡೆನ್ನಾನ 2023” ಜಾನಪದ ನ್ರತ್ಯ ಸ್ಪರ್ಧೆ, ಮಹಿಳಾ ವಿಭಾಗದ ಸದಸ್ಯರ ನ್ರತ್ಯ, ತಾದಿ ತತ್ತಂಡ ತುಳು ನಾಟಕ ಪ್ರಸ್ತುತಗೊಂಡಿತು.