
ಮುಂಬಯಿ ನ 2.ಮಲಾಡ್ ಪೂರ್ವದ ಕುರಾರ್ ವಿಲೇಜ್ ಶ್ರೀ ಮಹಮ್ಮಾಯಿ ದೇವಸ್ಥಾನ ದಲ್ಲಿ ಅ 15 ರವಿವಾರ ದಿಂದ ಅ 24 ಮಂಗಳವಾರ ತನಕ ನವರಾತ್ರಿ ದಸರಾ ಮಹೋತ್ಸವದ ಸಂಭ್ರಮ ಆಚರಣೆಯು ಪ್ರಯುಕ್ತ ಪ್ರತಿದಿನ ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಪೂಜೆಗಳು ರಾತ್ರಿ ಭಜನೆ ಮಹಾಮಂಗಳಾರತಿ ದೇವಸ್ಥಾನದ ಧರ್ಮದರ್ಶಿ ರವಿ ಸ್ವಾಮೀಜಿಯವರ ನೇತೃತ್ವದಲ್ಲಿ ಭಕ್ತಿ ಸಂಭ್ರಮದೊಂದಿಗೆ ಸಂಪನ್ನಗೊಂಡಿದೆ.



ಪ್ರತಿದಿನ ಸಂಜೆ ಭಜನೆ ರಾತ್ರಿ ರವಿ ಸ್ವಾಮೀಜಿಯವರಿಂದ ದೇವಿ ದರ್ಶನ ಆ ಬಳಿಕ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು
ಪ್ರತಿ ದಿನ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಶ್ರೀ ಮಾಹಮಾಯಿ ಅಮ್ಮನವರ ಪ್ರಸಾದವನ್ನು ಸ್ವೀಕರಿಸಿದರು.
ಪೂಜಾ ಕಾರ್ಯ ಯಶಸ್ವಿಯಾಗುವಲ್ಲಿ ಶ್ರೀ ಮಹಾಮ್ಮಾಯಿ ದುರ್ಗಾಪರಮೇಶ್ವರಿ ಸೇವಾ ಸಮಿತಿಯಗೌರವಾಧ್ಯಕ್ಷ ಸಂತೋಷ್ ಪೂಜಾರಿ, ಅಧ್ಯಕ್ಷ ಉಮೇಶ್ ಅಂಚನ್ ಮಾರ್ನಾಡ್, ಕಾರ್ಯದರ್ಶಿ ಶೇಖರ್ ದುರ್ಗೇಶ ಅಮೀನ್, ಕೋಶಧಿಕಾರಿ ರಾಜು ಪೂಜಾರಿ, ಮತ್ತಿತರ ಪದಾಧಿಕಾರಿಗಳು .ಮಹಿಳಾ ವಿಭಾಗದ . ಯುವ ಸದಸ್ಯರು ಹಾಗೂ ರಾಜು ಪೂಜಾರಿ, ಉದಯ ಸಾಲಿಯಾನ್, ಸನತ್ ಪೂಜಾರಿ, ಲಾಲ್ ಮನ್ ಯಾದವ್, ಮತ್ತಿತರ ಸದಸ್ಯರು ಸಹಕರಿಸಿದರು