
ಕಳೆದ ತಿಂಗಳು ದುಬೈಯಲ್ಲಿ 35 ಕ್ಕೂ ಅಧಿಕ ವರ್ಷದ ಮಹಿಳೆಯರಿಗಾಗಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ,ಭಾರತ ದೇಶವನ್ನು ಪ್ರತಿನಿಧಿಸಿದ , ಮುಂಬೈ ಯ ಕ್ರೀಡಾ ಪಟು ಜಯಂತಿ ದೇವಾಡಿಗ ಅವರು ಡಿಸ್ಕಸ್ ತ್ರೋ ಹಾಗೂ 4 x 100 ಮೀಟರ್ ನಲ್ಲಿ ಬೆಳ್ಳಿ ಪದಕ , ಹೈಜಂಪ್ ನಲ್ಲಿ ಕಂಚಿನ ಪದಕ ಗೆದ್ದು ವಿಷೇಶ ಸಾಧನೆ ಮಾಡಿದ್ದಾರೆ. ಕ್ರೀಡಾ ಕೂಟದಲ್ಲಿ ಹಲವು ರಾಷ್ಟ್ರದ ಕ್ರೀಡಾ ಪಟುಗಳು ಭಾಗಿಯಾಗಿದ್ದರು

ಸಣ್ಣ ಪ್ರಾಯದಲ್ಲೆ ಕ್ರೀಡಾ ಪಟುವಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ಜಯಂತಿ ಅವರು ,ತನ್ನ ಕ್ರೀಡಾ ಪ್ರತಿಭೆಗಾಗಿ ಹಲವಾರು ಬಹುಮಾನ, ಪದಕಗಳನ್ನು ಪಡೆದಿರುವರು. ಸದ್ಯ ಮೂರು ಮಕ್ಕಳ ತಾಯಿಯಾಗಿರುವ ಜಯಂತಿ ದೇವಾಡಿಗ , ಅದೇ ಹುರುಪು, ಉತ್ಸಾಹದಿಂದ ಮುಂಬೈ ಹಾಗೂ ಇತರ ರಾಜ್ಯ , ದೇಶದಲ್ಲಿ ನಡೆಯುವ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತ , ಪದಕಗಳನ್ನು ಗಳಿಸುತ್ತಾ ಸಾಧನೆ ಮಾಡುತಿರುವರು.
ದುಬೈಯಲ್ಲಿ ನಡೆದ ಕ್ರೀಡಾಕೂಟ ಜಯಂತಿ ಅವರು ಪಾಲ್ಗೊಂಡ 4ನೇ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟವಾಗಿದ್ದು, ಈ ಮೊದಲು ಆಸ್ಟ್ರೇಲಿಯಾ, ಥೈಲ್ಯಾಂಡ್, ಮಲೇಷ್ಯಾದಲ್ಲಿ ಜರಗಿದ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಜಯಂತಿ ದೇವಾಡಿಗ ಇವರು ಜೀಲ್ ಸ್ಪೋರ್ಟ್ಸ್(zeal sports ) ಹಾಗೂ ಜೀಲ್ ಫಿಟ್ನೆಸ್ ಟ್ರೈನಿಂಗ್ (zeal fitness training) ನ ಮಾಲೀಕರು.
ತನ್ನ ಸಾಧನೆಗೆ ಮೂವರು ಮಕ್ಕಳ ಪ್ರೋತ್ಸಾಹವೇ ಕಾರಣ ಎನ್ನುವ ಜಯಂತಿ ದೇವಾಡಿಗ ,ಅಂತಹ ಮಕ್ಕಳನ್ನು ಪಡೆಯಲು ನಾನು ನಿಜವಾಗಿಯೂ ಪುಣ್ಯ ಮಾಡಿದ್ದೇನೆ ಎಂದು ದನ್ಯತೆಯಿಂದ ನುಡಿಯುತ್ತಾರೆ.






ಸಮಾಜಿಕವಾಗಿಯೂ ಕ್ರಿಯಾಶೀಲಾರಾಗಿರುವ ಜಯಂತಿ , ದೇವಾಡಿಗ ಸಂಘ ಮುಂಬಯಿ ಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿಯೂ ,ಕಾರ್ಯ ನಿರ್ವಹಿಸುತ್ತಿರುವರು.
ಸಂಸಾರಿಕ , ಸಾಮಾಜಿಕ, ಬದುಕಿನೊಂದಿಗೆ ಉದ್ಯಮವನ್ನು ಮುನ್ನಡೆಸಿಕೊಂಡು, ಕ್ರೀಡೆಗಳಲ್ಲಿ ಭಾಗವಹಿಸಿ , ವಿಶಿಷ್ಟ ಸಾಧನೆ ಮಾಡುತ್ತಿರುವ ಜಯಂತಿ ದೇವಾಡಿಗರ ಬದುಕು , ಮಹಿಳೆಯರಿಗೆ ಮಾದರಿ.
ಜಯಂತಿ ದೇವಾಡಿಗ ಅವರ ಸಾಧನೆ ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯ, ಇವರು ರಾಷ್ಟ್ರ ,ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಮತಷ್ಟು ಪದಕಗಳನ್ನು ಗಳಿಸಿ , ದೇಶಕ್ಕೆ ಕೀರ್ತಿ ತರಲಿ ಎಂದು ಮುಂಬಯಿ ನ್ಯೂಸ್ ಶುಭ ಹಾರೈಸುತದೆ.