ಪೇಜಾವರ ಶ್ರೀ ಗಳಿಗೆ ಪಿತೃ ವಿಯೋಗ

ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಪೇಜಾವರ ಮಠದ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಅವರ ತಂದೆ ಅಂಗಡಿಮಾರ್ ಕೃಷ್ಣ ಭಟ್ ಹಳೆಯಂಗಡಿ ಸಮೀಪದ ಪಕ್ಷಿಕೆರೆಯ ಸ್ವಗ್ರಹದಲ್ಲಿ ನಿನ್ನೆ ರಾತ್ರಿ ನಿಧನ ಹೊಂದಿದರು.ಅವರಿಗೆ 102 ವರ್ಷ ವಯಸಾಗಿತ್ತು.
ಪುತ್ರ ವಿಶ್ವೇರ್ಶ್ವರ ಭಟ್ ಅವರೊಂದಿಗೆ ವಾಸವಾಗಿದ್ದ ಅವರು ತುಳು ಲಿಪಿಕಾರರಾಗಿ, ಪಂಚಾಂಗಕರ್ತರಾಗಿ, ಕನ್ನಡ-ತುಳು ಭಜನೆ ರಚನಕಾರರಾಗಿದ್ದರು.
ಐದು ವೇದಗಳನ್ನು ಅಧ್ಯಯನ ಮಾಡಿದ್ದ ಅವರು ಸಂಹಿತಾ ಯಾಗ ಹಾಗೂ ಇತರ ಯಾಗಗಳನ್ನು ಮಾಡಿದ್ದರು. 10 ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದ ಕೃಷ್ಣ ಭಟ್ ಅವರು ಐವರು ಪುತ್ರರು, ಏಳು ಮಂದಿ ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.