April 2, 2025
ಮುಂಬಯಿ

ಬಾಂಬೆ ಬಂಟ್ಸ್ ಅಸೋಸಿಯೇಶನ್‌ನ ಮಹಿಳಾ ವಿಭಾಗದಿಂದ ಭಜನೆ – ಕುಣಿತ ಭಜನ ಸ್ಪರ್ಧೆ

ಭಜನೆಯ  ಮೂಲಕ ಮಕ್ಕಳಲ್ಲಿ ಧರ್ಮ, ದೇವರ ಮೇಲೆ ಭಕ್ತಿ-ಶ್ರದ್ಧೆ ಹೆಚ್ಚಾ ಗುತ್ತದೆ : ಸಿಎ ಸುರೇಂದ್ರ ಕೆ. ಶೆಟ್ಟಿ,

ನವಿಮುಂಬಯಿ, ನ. 6: ಸನಾತನ ಧರ್ಮ, ಸಂಸ್ಕೃತಿಯನ್ನು ಉಳಿಸಿ-ಬೆಳೆಸು ವಂತಹ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ಭಜನೆ, ಕುಣಿತ ಭಜನೆಗಳಂತಹ ಧಾರ್ಮಿಕ ಕಾರ್ಯಕ್ರ ಮಗಳನ್ನು ಸಂಘ-ಸಂಸ್ಥೆಗಳು ಆಯೋ ಜಿಸುವುದರಿಂದ ಮಕ್ಕಳಲ್ಲಿ ಧರ್ಮ, ದೇವರ ಮೇಲೆ ಭಕ್ತಿ-ಶ್ರದ್ಧೆ ಹೆಚ್ಚಾ ಗುತ್ತದೆ ಎಂದು ಬಾಂಬೆ ಬಂಟ್ಸ್ ಅಸೋ ಸಿಯೇಶನ್‌ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ತಿಳಿಸಿದರು.
ಬಾಂಬೆ ಬಂಟ್ಸ್ ಅಸೋಸಿಯೇ ಶನ್‌ನ ಮಹಿಳಾ ವಿಭಾಗವು ನ. 4ರಂದು  ಜುಯಿ ನಗರದ ಬಂಟ್ಸ್ ಸೆಂಟರ್ ನಲ್ಲಿ ಆಯೋಜಿಸಿದ್ದ ಭಜನೆ ಮತ್ತು ಕುಣಿತ ಭಜನ ಸ್ಪರ್ಧೆಯ ಬಹು ಮಾನ ವಿತರಣ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟ್ಸ್ ಅಸೋಸಿಯೇಶನ್ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮಹಿಳಾ  ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದಾ ಕ್ರಿಯಾ ಶೀಲವಾಗಿ ಕೆಲಸ ಮಾಡುತ್ತಿರು  ಅಭಿನಂದನೀಯ. ಇಂದಿನ ಕಾಲಘಟ್ಟದಲ್ಲಿ ಇಂತಹ ಧಾರ್ಮಿಕ ಯೋಜನೆ ಅಗತ್ಯವಿದೆ. ಇಂತಹ ಕಾಠ್ಯಕ್ರಮಗಳಿಗೆ ಎಲ್ಲರೂ ಪ್ರೋತ್ಸಾ ಶಬೇಕಾಗಿದೆ. ಇಂದಿನ ಕಾರ್ಯಕ್ರ ಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಿರುವುದು  ಸಂತೋಷದ ವಿಷಯ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಶ್ರೀ  ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಶ್ರೀಕ್ಷೇತ್ರ ಒಡಿಯೂರು ರು ಇದರ ಮಹಾರಾಷ್ಟ್ರ ಘಟಕದ ಅಧ್ಯಕ್ಷೆ  ಶ್ವೇತಾ ಚಂದ್ರಹಾಸ್ ರೈ ಮಾತನಾಡಿ, ಭಜನೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಜೀವನದಲ್ಲಿ  ಆಧ್ಯಾತ್ಮಿಕ ಚಿಂತನೆಯೊಂದಿಗೆ ಉತ್ತಮ ಜೀವನ ನಡೆಸಲು ಪ್ರೇರೇಪಿಸು ತ್ತದೆ. ಇಂತಹ ಕಾರ್ಯಕ್ರಮಗಳು  ನಿರಂತರ ಜರಗುತ್ತಿರಬೇಕು. ಶ್ರೀವಜ್ರಮಾತಾ ಮಹಿಳಾ ವಿಕಾಸ – ಕೇಂದ್ರ ಇಂತಹ ಧಾರ್ಮಿಕ ಕಾರ್ಯ ಕ್ರಮಗಳಿಗೆ ಸದಾ ಸಹಕಾರ ನೀಡುತ್ತಿದೆ ಎಂದರು.

ಅತಿಥಿಯಾಗಿದ್ದ ಸಮಾಜ ಸೇವಕಿ ಸೀಮಾ ಕಿಶೋರ್ ರಾವ್ ಮಾತ ನಾಡಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ ಮಹಿಳಾ ವಿಭಾಗದ ಕಾರ್ಯ ಶ್ಲಾಘನೀಯ ಎಂದು ತಿಳಿಸಿ, ಶುಭ ಹಾರೈಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ತೇಜಾಕ್ಷಿ ಎಸ್. ಶೆಟ್ಟಿ ಪ್ರಸ್ತಾವಿಸಿದರು.

 ಭಜನೆ ಹಾಗೂ ಕುಣಿತ ಭಜನೆಯಲ್ಲಿ ವಿಜೇತರಾದ ತಂಡಗಳಿಗೆ ಅತಿಥಿಗಳುಫಲಕ ಹಾಗೂ ನಗದು ಬಹುಮಾನ  ವಿತರಿಸಿ ಶುಭ ಹಾರೈಸಿದರು. 

ಉಪಾಧ್ಯಕ್ಷ ನ್ಯಾಯವಾದಿ  ಡಿ. ಕೆ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಶೆಟ್ಟಿ,  ಕೋಶಾಧಿಕಾರಿ ಸಿ ಎ ವಿಶ್ವನಾಥ್ ಶೆಟ್ಟಿ, ಜತೆ ಕಾರ್ಯದರ್ಶಿ ನ್ಯಾಯವಾದಿ ಗುಣಕರ್ ಶೆಟ್ಟಿ, ಜತೆ ಕೋಶಾಧಿಕಾರಿ ಸಿಎ ದಿವಾಕರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಎಸ್. ಶೆಟ್ಟಿ, ಉಪಕಾರಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ. ಗೌರವ ಕಾರ್ಯದರ್ಶಿ ಉಷಾ ಆರ್. ಶೆಟ್ಟಿ, ಗೌರವ ಕೋಶಾಧಿಕಾರಿ ಸಹಾನಿ ಏ. ಶೆಟ್ಟಿ, ಜತೆ ಕಾರ್ಯದರ್ಶಿ ಲಲಿತಾ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಮಾಯಾ ಆಳ್ವ ಯುವ ವಿಭಾಗದ ಕಾರ್ಯಾಧ್ಯಕ್ಷೆ ದೃಶ್ಯಾ ಶೆಟ್ಟಿ ಉಪಸ್ಥಿತರಿದ್ದರು.

ಪತ್ರಕರ್ತ ದಯಾಸಾಗರ್ ಕಾರ್ಯಕ್ರಮವನ್ನು ನಿರೂಪಿಸಿ, ಮಹಿಳಾ ವಿಭಾಗದ ಗೌರವ ಕೋಶಾಧಿಕಾರಿ ಸಹಾನಿ ವಿ. ಶೆಟ್ಟಿ ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರಕಾರಿ ಸಮಿತಿಯ ಸದಸ್ಯರು, ವಿವಿಧ ಉಪ ಸಮಿತಿ ಯಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾಠ್ಯಕ್ರಮದ  ಯಶಸ್ಸಿಗೆ ಸಹಕರಿಸಿದರು.

——

ಸ್ಪರ್ಧೆಗಳ ಫಲತಾಂಶ

ಭಜನೆಯಲ್ಲಿ ಪ್ರಥಮ ಬಹುಮಾನವನ್ನು ನವೋದಯ ಕನ್ನಡ   ಸಂಘ ಠಾಣೆ, ದ್ವಿತೀಯ ಬಹುಮಾನವನ್ನು ಶ್ರೀ ಭ್ರಮರಾಂಬಿಕ ಭಜನಾ ಮಂಡಳಿ ಡೊಂಬಿವಲಿ, ತೃತೀಯ ಬಹುಮಾನವನ್ನು ನವೀನ್ ಮುಂಬೈಯ ಮಕ್ಕಳ ಭಜನ ಮಂಡಳಿ ಪಡೆದುಕೊಂಡಿತು.

ಕುಣಿತ ಭಜನೆಯಲ್ಲಿ ಪ್ರಥಮ ಬಹುಮಾನವನ್ನು ಶ್ರೀ ಮಹಾವಿಷ್ಣು ಭಜನಾ ಮಂಡಳಿ ಡೊಂಬಿವಲ್ಲಿ, ದ್ವಿತೀಯ ಬಹುಮಾನವನ್ನು ಬಿಲ್ಲವರ ಪೋಸಿಯೇಷನ್ ನವಿಮುಂಬಯಿ ಸ್ಥಳೀಯ ಸಮತಿ, ತೃತೀಯ ಬಹುಮಾನವನ್ನು ಮಹಿಷಮರ್ದಿನಿ ಭಜನಾ ಮಂಡಳಿ ಭೋವಿಲಿ ಪಡೆದುಕೊಂಡಿತು

Related posts

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಧಾರ್ಮಿಕ ಸಭೆ

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾಠ್ಯಕ್ರಮ ,

Mumbai News Desk

ಡೊಂಬಿವಲಿ ಹೋಟೆಲ್ ಅಸೋಸಿಯೇಷನ್ ನ ಮುಂದಾಳುತ್ವದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಶೋಭಾಯಾತ್ರೆಗೆ ಅದ್ದೂರಿ ಚಾಲನೆ

Mumbai News Desk

ಬಂಟರ ಸಂಘ ಮುಂಬಯಿ, ಮೀರಾ -ಭಾಯಂದರ್ ಪ್ರಾದೇಶಿಕ  ಸಮಿತಿ ವಾರ್ಷಿಕ ವಿದ್ಯಾರ್ಥಿ ವೇತನ, ದತ್ತು ಸ್ವೀಕಾರ, ವಿಧವಾವೇತನ, ಆರ್ಥಿಕ ನೆರವು ವಿತರಣೆ,

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಧಾರವಿ ಶಾಖೆಯಲ್ಲಿ 46 ನೇ ಸಂಸ್ಥಾಪನಾ ದಿನಾಚರಣೆ .

Mumbai News Desk

ಕುಲಾಲ ಸಂಘದ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆಯ ಆಚರಣೆ.

Mumbai News Desk