
ಭವಿಷ್ಯತ್ತಿನಲ್ಲಿ ಸಂಘಸಂಸ್ಥೆಗಳ ಪೂರಕ ಬೆಳವಣಿಗೆಗೆ ಯುವ ಸಮುದಾಯದ ಕೊಡುಗೆ ಅಗತ್ಯ: ಮೋಹನ್ ಬಿ. ಅಮೀನ್
ಚಿತ್ರ, ವರದಿ: ರಮೇಶ್ ಉದ್ಯಾವರ
ಬೊರಿವಲಿ, ನ. 3: ಸಾಂತಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಇತ್ತೀಚೆಗೆ ಜರುಗಿದ ಮಹಾನಗರದ ಹಿರಿಯ ವಿದ್ಯಾದಾಹಿನಿ ಸಭಾ ಇದರ ಶತಮಾನೋತ್ಸವ ಕಾರ್ಯಕ್ರಮದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಬಿಲ್ಲವರ ಎಸೋಶಿಯೇಶನ್ ಮುಂಬಯಿ ಬೊರಿವಲಿ ದಹಿಸರ್ ಸ್ಥಳೀಯ ಕಚೇರಿಯ ಯುವ ವಿಭಾಗದ ಸದಸ್ಯರನ್ನು ಸ್ಥಾನೀಯ ಕಚೇರಿಯ ಕಾರ್ಯಾಧ್ಯಕ್ಷ ಮೋಹನ್ ಬಿ ಅಮೀನ್ ಮತ್ತು ಸ್ಥಳೀಯ ಕಾರ್ಯಕಾರಿ ಸಮಿತಿಯ ಸದಸ್ಯರು ನ.2ರಂದು ಗುರುವಾರ ಸ್ಥಳೀಯ ಕಛೇರಿ ಗುರು ಸನ್ನಿಧಿ ಗೊರಾಯಿ-1, ಇಲ್ಲಿ ಜರುಗಿದ ವಿಶೇಷ ಗುರು ಪೂಜೆಯ ಕಾರ್ಯಕ್ರಮದ ಸಂದರ್ಭದಲ್ಲಿ ಗೌರವಿಸಿದರು.



ಬಳಿಕ ಮಾತನಾಡಿದ ಅವರು ಭವಿಷ್ಯದಲ್ಲಿ ಯುವ ಸಮುದಾಯ ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಯುವಕರನ್ನು ಸಂಘ ಸಂಸ್ಥೆಗಳು ಪ್ರೋತ್ಸಾಹಿಸಬೇಕು. ಸಂಘಸಂಸ್ಥೆಗಳು ಯುವ ವೇದಿಕೆ ಸೃಷ್ಟಿಸಿ ಸಾಮಾಜಿಕ ಜವಾಬ್ದಾರಿಯನ್ನು ನೀಡಿದಾಗ ಭವಿಷ್ಯತ್ತಿನಲ್ಲಿ ಸಂಘಸಂಸ್ಥೆಗಳು ಪೂರಕ ಬೆಳವಣಿಗೆಗೆ ಸಾಧ್ಯ ಎಂದು ಹೇಳಿ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಯುವ ಸದಸ್ಯರನ್ನು ಅಭಿನಂದಿಸಿ ವೈಯಕ್ತಿಕವಾಗಿ ಬಹುಮಾನ ನೀಡಿ ಗೌರವಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ಥಳೀಯ ಕಚೇರಿ ಸದಸ್ಯರಿಂದ ಭಜನೆ ಕಾರ್ಯಕ್ರಮ ಜರುಗಿತು. ಬಳಿಕ ಭುವಾಜಿ ಕೃಷ್ಣರಾಜ್ ಸುವರ್ಣರವರ ನೇತೃತ್ವದಲ್ಲಿ ಗುರು ಪೂಜೆ ಮಂಗಳಾರತಿ ನೆರವೇರಿತು. ಆ ಬಳಿಕ ತೀರ್ಥ ಪ್ರಸಾದ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಕಚೇರಿಯ ಉಪಕಾರ್ಯಾಧ್ಯಕ್ಷ ಶೇಖರ್ ಅಮೀನ್ ಕಾರ್ಯದರ್ಶಿ ರಜಿತ್ ಎಲ್ ಸುವರ್ಣ ಕೋಶಾಧಿಕಾರಿ ವತ್ಸಲ ಕೆ ಪೂಜಾರಿ ಜತೆ ಕೋಶಾಧಿಕಾರಿ ಉಮೇಶ್ ಜಿ ಕೋಟ್ಯಾನ್ ಕರ್ನಾಟಕ ಸ್ಪೋರ್ಟಿಂಗ್ ಎಸೋಸಿಯೇಷನ್ ಸದಸ್ಯರಾದ ಪ್ರೇಮ್ ನಾಥ್ ಕೋಟ್ಯಾನ್ ಅಶೋಕ ಸಾಲ್ಯಾನ್ ಶರಣ್ಯ ಬಿಲ್ಲವ, ಜಯರಾಮ ಪೂಜಾರಿ, ಕೇಶರಂಜನ್ ಮುಲ್ಕಿ, ಕೃಷ್ಣ ಸಾಲ್ಯಾನ್, ಶ್ರೀ ಧರ ಸುವರ್ಣ, ಸೋಮನಾಥ ಪೂಜಾರಿ ಸುಂದರಿ ಪೂಜಾರಿ, ಸುಜಾತ ಪೂಜಾರಿ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.
ಶೃತಿ ಎ ಪೂಜಾರಿ ಮನಸ್ವಿ ಎಸ್ ಪೂಜಾರಿ ಶಿಪ್ರಾ ಎನ್ ಸುವರ್ಣ ಖುಸಿ ಜೆ ಶೆಟ್ಟಿಗಾರ್ ನವ್ಯ ಕೆ ಪೂಜಾರಿ ಭಾವನ ಆರ್ ಪೂಜಾರಿ ಕರುಣೇಶ್ ಆರ್ ಕೋಟ್ಯಾನ್ ಅಂಕಿತ್ ಎಸ್ ಪೂಜಾರಿ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.