July 23, 2026
Mumbai News Kannada
ಮುಂಬಯಿ

‘ಡೊಂಬಿವಲಿಯ ಓಂಕಾರ ಕೇಂಬ್ರಿಜ್ ಇಂಟರ್ ನ್ಯಾಸನಲ್ ಶಾಲೆಗೆ ವಿಜ್ಞಾನ ಸ್ಪರ್ಧೆಯಲ್ಲಿ ಪಶ್ಚಿಮ ಭಾರತದಲ್ಲಿ OCIS ಮೊದಲ ಸ್ಥಾನ’







ಡೊಂಬಿವಲಿ: ಡೊಂಬಿವಲಿಯ ಪೂರ್ವದಲ್ಲಿ ಹೆಮ್ಮೆಯ ಶೈಕ್ಷಣಿಕ ಸಾಧನೆಯನ್ನು ಆಚರಿಸಲಾಯಿತು. ಡೊಂಬಿವಲಿಯ ಪೂರ್ವದಲ್ಲಿರುವ ಓಂಕಾರ್ ಕೇಂಬ್ರಿಜ್ ಇಂಟರ್‌
ನ್ಯಾಷನಲ್ ಶಾಲೆ (OCIS) ಕೇಂಬ್ರಿಜ್ ಇಂಟರ್‌ ನ್ಯಾಷನಲ್ ಎಜುಕೇಶನ್ ಆಯೋಜಿಸಿದ “ಪ್ಲಾನೆಟ್ ಅಂಡರ್ ದ ಮೈಕ್ರೋಸ್ಕೋಪ್” ಎಂಬ ಕೇಂಬ್ರಿಜ್ ಲೋವರ್ ಸೆಕೆಂಡರಿ ವಿಜ್ಞಾನ ಸ್ಪರ್ಧೆಯಲ್ಲಿ ಪಶ್ಚಿಮ ಪ್ರದೇಶದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು ಶಾಲೆಗೆ ಹೆಮ್ಮೆ ಪಡೆದಿದೆ.ಈ ಶಾಲೆಯ ವತಿಯಿಂದ ಪ್ರತಿಷ್ಟಿತ ಪ್ರತಿಭಾ ಸ್ಪರ್ಧೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

7ನೇ ತರಗತಿಯ ತಂಡವಾದ ತನೂಷ್ ದಳವಿ, ಸಾನ್ವಿ ಕದಮ್, ರಿಯನ್ ಕುಲಕರ್ಣಿ, ಆರೂಷಿ ಶೆಟ್ಟಿ ಮತ್ತು ಇಶಾನ್ ಹೊಸ್ಕೋಟಿ – “ಸಸ್ಟೇನಬಿಲಿಟಿ ಮೇಲೆ ಕೇಂದ್ರೀಕರಿಸಿ ಮಣ್ಣಿನ ಸೂಕ್ಷ್ಮಜೀವಿಗಳನ್ನು ಬಳಸಿ ಎಣ್ಣೆಯನ್ನು ವಿಭಜಿಸುವ ಕುರಿತು ಅಧ್ಯಯನ” ಮಾಡಿದ ತಮ್ಮ ಯೋಜನೆಗಾಗಿ ಪ್ರಶಂಸೆಗೆ ಪಾತ್ರರಾದರು.ವೈಜ್ಞಾನಿಕ ವಿಚಾರವು ಪರಿಸರದ ಜಾಗರಣೆ ಮತ್ತು ವಾಸ್ತವಿಕ ಜೀವನದ ಸಮಸ್ಯೆಯ ನೆಲೆಯಲ್ಲಿ ನಿತ್ಯ ಸಮಾಧಾನದ ತಿಳುವಳಿಕೆಯನ್ನು ಸ್ಪಷ್ಟವಾಗಿ ಪರಿಪೂರ್ಣವಾಗಿ ಮೂಡಿ ಬಂದಿರುವುದು ಕಂಡು ಬಂದಿತು.

ಶಿಕ್ಷಕಿ ಮಿಸ್ ಸ್ವಾತಿ ಪಾಂಡೆ ಅವರ ಮಾರ್ಗದರ್ಶನದಲ್ಲಿ, ಪ್ರಾಂಶುಪಾಲರಾದ ಡಾ. ಅನುಜಾ ನಾಯಕ್, ಉಪ ಪ್ರಾಂಶುಪಾಲರಾದ ಮಿಸ್ ರೇನು ಪಿಳ್ಳೈ ಮತ್ತು ಡಾ. ನೆಹಾ ನೋಹ್ವರ್ ಅವರ ನೆರವು ಹಾಗೂ ಪೋಷಕರ ಬಲವಾದ ಸಹಕಾರದೊಂದಿಗೆ ಈ ಸಾಧನೆ ಸಾಧ್ಯವಾಯಿತು. ಫೆಬ್ರವರಿ 4ರಂದು ನಡೆದ ಆನ್‌ಲೈನ್ ಅಭಿನಂದನಾ ಸಮಾರಂಭದಲ್ಲಿ ಡಾ. ಡೇವಿಡ್ ಮಾರ್ಟಿಂಡಿಲ್, ಶ್ರೀ ವಿನಯ್ ಶರ್ಮಾ ಮತ್ತು ಶ್ರೀ ಅರುಣ್ ರಾಜಮಣಿ ಭಾಗವಹಿಸಿ ಈ ಯಶಸ್ಸನ್ನು ಗೌರವಿಸಿದರು.

ವಿಜ್ಞಾನ ಸ್ಪರ್ಧೆಯ ಯಶಸ್ವಿ ಕಾಣಲು ಓಂಕಾರ ಇಂಟರ್ ನ್ಯಾಷನಲ್ ಶಾಲೆಯ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಇದರಲ್ಲಿ ಕೇಂಬ್ರಿಜ್ ಪಠ್ಯಕ್ರಮದ ಮಾಧ್ಯಮದ ಮುಖೇನ ಆಲೋಚನಾತ್ಮಕ ಚಿಂತನೆ ಮತ್ತು ಹೊಸ ಶೋಧ ಆಧಾರದ ಮೇಲೆ ಶಿಕ್ಷಣದ ಅಭಿವೃದ್ಧಿಯ ಮೇಲೆ ಶಕ್ತಿ ಕಂಡು ಕೊಂಡಾಯಿತು. ಇದರಿಂದ ವಿದ್ಯಾರ್ಥಿಗಳ ಉತ್ತಮ ನಾಗರೀಕ ಮತ್ತು ಭವಿಷ್ಯ ರೂಪಿಸುವಲ್ಲಿ ಇಂತಹ ವಿಜ್ಞಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು.



Related posts

ಮುಂಬಯಿಯ ಉದ್ಯಮಿ ಸುನೀಲ್ ಆರ್ ಸಾಲ್ಯಾನ್ ಅವರಿಂದ ವಿಶೇಷ ಚೇತನಾ ಮಕ್ಕಳ ಆಶ್ರಮದಲ್ಲಿ ಹೊಸ ವರ್ಷಾಚರಣೆ.

Mumbai News Desk

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕಲ್ಲುರ್ಟಿ ಮಂತ್ರದೇವತಾ ಸಾನಿಧ್ಯ ಕೋಪರಖೈರಣೆ, ಧರ್ಮದೈವ ತಾಯಿ ಕಲ್ಲುರ್ಟಿಯ ಮಾಸಿಕ ಸಂಕ್ರಾಂತಿ ಸೇವೆ

Mumbai News Desk

ಮುಂಬೈನಲ್ಲಿ ಬೆಸ್ಟ್ ಬಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: 25 ಲಕ್ಷ ಪ್ರಯಾಣಿಕರಿಗೆ ತೀವ್ರ ಸಂಕಷ್ಟ

Mumbai News Desk

ಫೆ 5 ಮತ್ತು 6ರಂದು ಮುಂಬೈಯ ಕೆಲ ಭಾಗಗಳಲ್ಲಿ 30 ಗಂಟೆಗಳ ಕಾಲ ನೀರಿನ ಪೂರೈಕೆ ಸ್ಥಗಿತ

Mumbai News Desk

ಮುಂಬೈ : ಕುರ್ಲಾದಲ್ಲಿ ಭಾರೀ ಮಳೆಗೆ ಮರ ಕುಸಿದು ವ್ಯಕ್ತಿ ಸಾವು, ವಿದ್ಯುತ್ ವ್ಯತ್ಯಯ

Mumbai News Desk

ಡೊಂಬಿವಲಿ ಶ್ರೀ ಮಹಾವಿಷ್ಣು ಮಂದಿರದ ವತಿಯಿಂದ ‘ಆಟಿಡೊಂಜಿ ದಿನ’ ಆಚರಣೆ

Mumbai News Desk