
ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಸನ್ಮಾನ
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ ನ7. ಮಲಾಡ್ ಪೂರ್ವದ ಗೋವಿಂದ್ ನಗರ್ ದ ಶ್ರೀ ಅಂಬಿಕಾ ಮಂದಿರದ ಸಂಸ್ಥಾಪಕ ದಿವಂಗತ ನಾರಾಯಣ ಟಿ ಕುಕ್ಯಾನ್ ರವರು ನವರಾತ್ರಿಯ ಸಂದರ್ಭದಲ್ಲಿ ವಿಶೇಷ ಪೂಜೆಗಳನ್ನು ನಡೆಸುತ್ತಾ ಬಂದಿದ್ದರು ಇದೀಗ ಅವರ ಸುಪುತ್ರ ದೀನಾದಾಸ್ ನಾರಾಯಣ ಕುಕ್ಯಾನ್ ರವರು ಆಚರಿಸಿ ಕೊಂಡು ಬಂದಂತ ದಸರಾ ಪೂಜೆಯ ಭಕ್ತಿ ಸಂಭ್ರಮದಿಂದ ನಡೆಸುತ್ತಾ ಬಂದಿದ್ದಾರೆ.
ನವರಾತ್ರಿಯ ಸಂದರ್ಭದಲ್ಲಿ ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷ ರಾಗಿ ಆಯ್ಕೆ ಆದ ಸೂರ್ಯಕಾಂತ್ ಜಯ ಸುವರ್ಣ ಅವರನ್ನು ಅಭ್ಯುದಯ ಕೋಪರೆಟ್ ಬ್ಯಾಂಕ್ ನ ಸಿ ಒ ಪ್ರೇಮ್ ನಾಥ್ ಸಾಲಿಯಾನ್ ರವರು ಹಾಗೂ ಬಿಲ್ಲವರ ಅಸೋಸಿಯೇಶನ್ ಕಾಂದಿವಲಿ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ರಾದ ಯೋಗೇಶ್ ಕೆ ಹೆಜ್ಮಾಡಿ ಯವರು ಅಂಬಿಕಾ ಮಂದಿರದ ಪರವಾಗಿ ಸಾಲು ಹೊದಿಸಿ ಪುಷ್ಪಗುಚ್ಚವನ್ನೀಡಿ ಸನ್ಮಾನಿಸಿದರು..
ಈ ಸಂದರ್ಭದಲ್ಲಿ ಬಾರತ್ ಬ್ಯಾಂಕ್ ನ ನೂತನ ನಿರ್ಧೇಶಕರಾದ ಸಂತೋಷ್ ಪೂಜಾರಿ, ಮೋಹನದಾಸ್ ಪೂಜಾರಿ , ಹಾಗೂ ಬಿಲ್ಲವರ ಅಸೋಸಿಯೇಶನ್ ಜಿ ಒ ಸಿ ಗಣೇಶ್ ಪೂಜಾರಿ, ಕಾಂದಿವಲಿ ಸ್ಥಳೀಯ ಕಚೇರಿಯ ಉಪ ಕಾರ್ಯಧ್ಯಕ್ಷ ಜಗನ್ನಾಥ್ ಡಿ ಕುಕ್ಯಾನ್, ಕಾರ್ಯಕರ್ತರಾದ ನಾರಾಯಣ ಸುವರ್ಣ , ಅಂಬಿಕ ಮಂದಿರದ ಕಾರ್ಯಕರ್ತೆ ಉದಯ ಎನ್ ಕುಕ್ಯಾನ್ ಇನ್ನಿತರರು ಉಪಸ್ಥಿತರಿದ್ದರು