
ಜೆಸಿಐ ಭಾರತದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ವಲಯ 15ರ 2024ನೇ ಸಾಲಿನ ನೂತನ ವಲಯಾಧ್ಯಕ್ಷರಾಗಿ ಜೆಸಿಐ ಮುಂಡ್ಕೂರು ಭಾರ್ಗವದ ಪ್ರತಿನಿಧಿ, ಉಡುಪಿಯ ಯುವ ನ್ಯಾಯವಾದಿ ಗಿರೀಶ್ ಎಸ್ ಪಿ ಆಯ್ಕೆಯಾಗಿರುತ್ತಾರೆ. ಇವರು ಜೆಸಿಐ ಮುಂಡ್ಕೂರು ಭಾರ್ಗವ ಘಟಕದ ಪೂರ್ವಾಧ್ಯಕ್ಷರಾಗಿದ್ದು, ತನ್ನ ಅಧ್ಯಕ್ಷೀಯ ಅವಧಿಯಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಿ ವಲಯದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ವಲಯ ತರಬೇತುದಾರರಾಗಿ, ವಲಯಾಧಿಕಾರಿಯಾಗಿ, ವಲಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುತ್ತಾರೆ. ವಲಯ ಹಾಗೂ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಲವು ಬಾರಿ ಭಾಗವಹಿಸಿರುತ್ತಾರೆ. ಕಳೆದ ವರ್ಷ ರಾಷ್ಟ್ರೀಯ ಸಂಯೋಜಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಜೆಸಿಐ ಪುತ್ತೂರು ಘಟಕದ ಆಶ್ರಯದಲ್ಲಿ ಎಬ್ರಾಡ್ ಮಲ್ಟಿಫ್ಲೆಕ್ಸ್ ಹಾಲ್ ನಲ್ಲಿ ಇತ್ತೀಚೆಗೆ ನಡೆದ 2023ರ ಸಂಭ್ರಮ ವಲಯ ಸಮ್ಮೇಳನದಲ್ಲಿ ಚುನಾವಣೆಯ ಮೂಲಕ 2024ನೇ ಸಾಲಿನ ನೂತನ ವಲಯಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
ದೀಪಾವಳಿ ಹಬ್ಬದ ಶುಭಾಶಯಗಳು
ದೀಪಾವಳಿ ಹಬ್ಬದ ಶುಭಾಶಯಗಳು
ದೀಪಾವಳಿ ಹಬ್ಬದ ಶುಭಾಶಯಗಳು