July 23, 2026
Mumbai News Kannada
ಕರ್ನಾಟಕ

ಜೆಸಿಐ ವಲಯ 15ರ ವಲಯಾಧ್ಯಕ್ಷರಾಗಿ ಗಿರೀಶ್ ಎಸ್ ಪಿ ಆಯ್ಕೆ







 ಜೆಸಿಐ ಭಾರತದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ವಲಯ 15ರ 2024ನೇ ಸಾಲಿನ ನೂತನ ವಲಯಾಧ್ಯಕ್ಷರಾಗಿ ಜೆಸಿಐ ಮುಂಡ್ಕೂರು ಭಾರ್ಗವದ ಪ್ರತಿನಿಧಿ, ಉಡುಪಿಯ ಯುವ ನ್ಯಾಯವಾದಿ ಗಿರೀಶ್ ಎಸ್ ಪಿ ಆಯ್ಕೆಯಾಗಿರುತ್ತಾರೆ.  ಇವರು ಜೆಸಿಐ ಮುಂಡ್ಕೂರು ಭಾರ್ಗವ ಘಟಕದ ಪೂರ್ವಾಧ್ಯಕ್ಷರಾಗಿದ್ದು, ತನ್ನ ಅಧ್ಯಕ್ಷೀಯ ಅವಧಿಯಲ್ಲಿ  ಹಲವು ಸಮಾಜಮುಖಿ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಿ ವಲಯದ ಹಲವಾರು  ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ವಲಯ ತರಬೇತುದಾರರಾಗಿ, ವಲಯಾಧಿಕಾರಿಯಾಗಿ, ವಲಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುತ್ತಾರೆ.  ವಲಯ ಹಾಗೂ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಲವು ಬಾರಿ ಭಾಗವಹಿಸಿರುತ್ತಾರೆ. ಕಳೆದ ವರ್ಷ ರಾಷ್ಟ್ರೀಯ ಸಂಯೋಜಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಜೆಸಿಐ ಪುತ್ತೂರು ಘಟಕದ ಆಶ್ರಯದಲ್ಲಿ ಎಬ್ರಾಡ್ ಮಲ್ಟಿಫ್ಲೆಕ್ಸ್ ಹಾಲ್ ನಲ್ಲಿ ಇತ್ತೀಚೆಗೆ  ನಡೆದ 2023ರ  ಸಂಭ್ರಮ ವಲಯ ಸಮ್ಮೇಳನದಲ್ಲಿ ಚುನಾವಣೆಯ ಮೂಲಕ 2024ನೇ ಸಾಲಿನ ನೂತನ ವಲಯಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

ದೀಪಾವಳಿ ಹಬ್ಬದ ಶುಭಾಶಯಗಳು

ದೀಪಾವಳಿ ಹಬ್ಬದ ಶುಭಾಶಯಗಳು

ದೀಪಾವಳಿ ಹಬ್ಬದ ಶುಭಾಶಯಗಳು



Related posts

ಧರ್ಮಸ್ಥಳ : ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ನವಂಬರ್ 12ರವರೆಗೆ ಮಧ್ಯಂತರ ತಡೆ.

Mumbai News Desk

ಬೆಳಗಾವಿ : ಸದನದಲ್ಲಿ ಗೃಹಲಕ್ಷ್ಮಿ ಗದ್ದಲ; ತಪ್ಪೊಪ್ಪಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Mumbai News Desk

ಶಿವಮೊಗ್ಗದಲ್ಲಿ 10ನೇ ತರಗತಿ ವಿದ್ಯಾರ್ಥಿಯ ಕೊಲೆ, ಇಬ್ಬರು ಅಪ್ರಾಪ್ತ ವಯಸ್ಕರ ಬಂಧನ

Mumbai News Desk

ಈಗ ಯಕ್ಷಗಾನದಲ್ಲಿ ಸಲಿಂಗಕಾಮ ಇಲ್ಲ, ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ: ಪುರುಷೋತ್ತಮ ಬಿಳಿಮಲೆ

Mumbai News Desk

ಬಿಲ್ಲವ, ಬಂಟ್ಸ್ ಸಮುದಾಯಗಳ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರೋಪಿ ಅನಿತಾ ಕಾಸರಗೋಡು ಬಂಧನ

Mumbai News Desk

ಎಸ್‌ಎಸ್‌ಎಲ್‌ಸಿ ಪರೀಕ್ಷೆ: 96% ಅಂಕ ಗಳಿಸಿ ಸಾಧನೆ ಮಾಡಿದ ಆಶ್ವಿ ಎಚ್. ಬಂಗೇರ

Mumbai News Desk