April 2, 2025
ಕ್ರೀಡೆ

ಸ್ಕೇಟಿಂಗ್ : ಅನಘಾ ಮತ್ತು ಆರ್ನಾ ಸಾಧನೆ

ಮಂಗಳೂರು: ದಕ್ಷಿಣ ಕನ್ನಡ ರೋಲರ್ ಸ್ಪೋಟ್ಸ್ ಅಸೋಸಿಯೇಶನ್ ಮಂಗಳೂರು ನೇತೃತ್ವದಲ್ಲಿ ನ. 9ರಿಂದ 12ರ ವರೆಗೆ ಮಂಗಳೂರಿನಲ್ಲಿ ನಡೆದ 11ರಿಂದ 14 ವಯೋಮಿತಿಯ 39ನೇ ಕರ್ನಾಟಕ ಸ್ಟೇಟ್ ಸೆಲೆಕ್ಷನ್ ಟ್ರೇಲ್ಸ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅನಘಾ ರಾಜೇಶ್ ಅವರು 3,000 ಮೀ ರೋಡ್ ರೇಸ್ ಹಾಗೂ 1000 ಮೀ. ರಿಂಕ್ ರೇಸ್‌ನಲ್ಲಿ 2 ಬೆಳ್ಳಿ, 5000ಮೀ. ರಿಂಕ್ ಎಲಿಮಿನೇಶನ್ ರೇಸ್‌ನಲ್ಲಿ 1 ಕಂಚು ಪದಕ ಗೆದ್ದಿದ್ದಾರೆ. ಅನಘಾ ಅವರು ಮಂಗಳೂರು ಬಿಜೈಯ ಲೋರ್ಡ್ಸ್ ಸೆಂಟ್ರಲ್ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿ. 

ಇದೇ ಸ್ಪರ್ಧೆಯಲ್ಲಿ 7ರಿಂದ 9 ವರ್ಷ ವಯೋಮಿತಿಯ ವಿಭಾಗದಲ್ಲಿ ಆರ್ನಾ ರಾಜೇಶ್ 1,000 ಮೀ. ರಿಂಕ್ ರೇಸ್‌ನಲ್ಲಿ 1 ಬೆಳ್ಳಿ ಪದಕ ಗೆದ್ದಿದ್ದಾರೆ. ಈಕೆ ಬಿಜೈಯ ಲೋರ್ಡ್ಸ್ ಸೆಂಟ್ರಲ್ ಸ್ಕೂಲ್‌ನ 3ನೇ ತರಗತಿ ವಿದ್ಯಾರ್ಥಿನಿ.

ಇವರಿಬ್ಬರೂ ಕುಡ್ಲ ರೋಲರ್ ಸ್ಕೇಟಿಂಗ್ ಕ್ಲಬ್‌ನಿಂದ ತರಬೇತಿ ಪಡೆದಿದ್ದು, ಡಾ. ರಾಜೇಶ್ ಹುಕ್ಕೇರಿ ಮತ್ತು ಡಾ. ಅನಿತಾ ರಾಜೇಶ್ ದಂಪತಿಯ ಪುತ್ರಿ.

ದೀಪಾವಳಿಹಬ್ಬದ ಶುಭಾಶಯಗಳು.

Related posts

ಸಿಂಹ ಘರ್ಜನೆ 2025 : ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಮಂಗಳಾದೇವಿ ಕ್ಲಬ್

Mumbai News Desk

ಬಹುಮುಖ ಪ್ರತಿಭೆಯ ಬಾಲ ಪ್ರತಿಭೆ ಬೆಳ್ತಂಗಂಡಿಯ ಶ್ರೇಯಸ್ ಯೋಗೇಶ್ ಪೂಜಾರಿ.

Mumbai News Desk

ಬಿ ಎಸ್ ಕೆ ಬಿ ಎಸ್ಸೋಸಿಯೇಷನ್ ಮುಂಬಯಿ; ಗೋಕುಲ ಶತಮಾನೋತ್ಸವ ಆಚರಣೆಯ ನಿಮಿತ್ತ ತುಳು ಕನ್ನಡಿಗ ಗೇಮ್ಸ್ 2025,

Mumbai News Desk

ವಿಶ್ವ ಬಂಟರ  ಕ್ರೀಡಾಕೂಟದಲ್ಲಿ ಮುಂಬೈ ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಗೆ ಸಮಗ್ರ ಚಾಂಪಿಯನ್

Mumbai News Desk

ಸಿದ್ಧಕಟ್ಟೆ: ಕೊಡಂಗೆ ವೀರವಿಕ್ರಮ ಜೋಡುಕರೆ ಕಂಬಳ :166 ಜೋಡಿ ಭಾಗಿ

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವ

Mumbai News Desk