
ನಿಸ್ವಾರ್ಥ ಸೇವೆ ಮಾಡಿದಾಗ ಸಂಘ ಸಂಸ್ಥೆಗಳು ಗೌರವಿಸುತ್ತದೆ : ಸುಂದರ ಮೂಡಬಿದ್ರಿ
ಮುಂಬೈ ನ17. ಕುಲಾಲ ಸಂಘ ಮುಂಬೈಯ ಮುಖವಾಣಿ ಅಮೂಲ್ಯ ಪತ್ರಿಕೆ ಯ ಬೆಳ್ಳಿ ಹಬ್ಬದ ಈ ಸುಸಂಧರ್ಭದ್ಲಲಿ, ಲೇಖಕ,ಪ್ರಸಿದ್ಧ ರಂಗ ನಟ ಕಲಾವಿದರಾದ ಸುಂದರ ಮೂಡಬಿದ್ರಿ ಅವರನ್ನು ಸನ್ಮಾನಿಸಲು ವಿಶೇಷ ಸಿದ್ಧತೆ ಕೊಂಡಿತ್ತು ಆದರೆ ಅನಾರೋಗ್ಯದ ಕಾರಣದಿಂದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನಾನುಕೂಲ ವಾಗಿದ್ದರಿಂದ ಆದ್ದರಿಂದ ಅವರ ಮನೆಯಲ್ಲಿ ಕುಲಾಲ ಸಂಘದ ಅಧ್ಯಕ್ಷರಾದ ರಘು ಮೂಲ್ಯ, ಅಮೂಲ್ಯ ಪತ್ರಿಕೆ ಶಂಕರ್ ವೈ ಮೂಲ್ಯ ಮಾರ್ಗದರ್ಶನದಂತೆ ಸುಂದರ ಮೂಡಬಿದ್ರಿ ಯವರ ಸುಪುತಿ ಥಾಣಾ ನಿವೇಶನದಲ್ಲಿ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ಸುಂದರ ಮೂಡಬಿದ್ರೆಯವರು ನನ್ನ ಸೇವಾ ಕಾರ್ಯಗಳನ್ನು ಗುರುತಿಸಿ ಈ ಹಿಂದೆ ಕೂಡ ಕುಲಾಲ ಸಂಘ ಅಭಿಮಾನದಿಂದ ಗೌರವಿಸಿದೆ. ಇದೀಗ ನನ್ನ ಹಿರಿವಯಸ್ಸಿನಲ್ಲಿ ನನ್ನನ್ನು ಸಂತೋಷಗೊಳಿಸುವ ಈ ಸನ್ಮಾನ ನನಗೆ ಅತಿ ಆನಂದತಂದಿದೆ. ಯುವ ಸಮುದಾಯ ಸಾಧನೆಯನ್ನು ಮಾಡಬೇಕು. ಧೈರ್ಯದಿಂದ ಸಮಾಜದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೇವೆ ಮಾಡಬೇಕು ನಮ್ಮ ಸೇವ ಕಾರ್ಯಗಳನ್ನು ಸಂಘ ಸಂಸ್ಥೆಗಳು ಸದಾ ನೆನಪಿಸಿ ಗೌರವಿಸುತ್ತದೆ ಇದು ನನ್ನ ಬದುಕಿನ ಅನುಭವ ಎಂದು ನುಡಿದರು.
ಸನ್ಮಾನವನ್ನು ಕುಲಾಲ ಸಂಘದ ಅಧ್ಯಕ್ಷ ರಘು ಎ ಮೂಲ್ಯ. ಗೌರವಕೋಶಧಿಕಾರಿ ಜಯ ಅಂಚನ್. ಅಮೂಲ್ಯ ಪತ್ರಿಕೆಯ ಉಪಸಂಪಾದಕರಾದ ಆನಂದ್ ಬಿ. ಮೂಲ್ಯ ಪಾಲ್ಗೊಂಡಿದ್ದರು