April 2, 2025
ಪ್ರಕಟಣೆ

ಶ್ರೀ ಮಹಾ ವಿಷ್ಣು ಮಂದಿರ – ಡೊಂಬಿವಲಿ, ತಾ.25 ಮತ್ತು 26 ನವೆಂಬರ್ ರಂದು ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮ.

ಶ್ರೀ ಮಹಾವಿಷ್ಣು ಮಂದಿರ , ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿ ಇದರ ವಾರ್ಷಿಕ ಭಜನಾ ಮಂಗಳೋತ್ಸವ ನವೆಂಬರ್ 25 ಮತ್ತು 26 ರಂದು ನಡೆಯಲಿದೆ. ಆ ಪ್ರಯುಕ್ತ ಏಕಹ ಭಜನ ಕಾರ್ಯಕ್ರಮವು ನವೆಂಬರ್ 25 ರ ಶನಿವಾರ ಬೆಳಗ್ಗೆ 6:30 ಕ್ಕೆ ಆರಂಭವಾಗಿ ನವೆಂಬರ್ 26 ರ ರವಿವಾರ ಬೆಳಿಗ್ಗೆ 6.30 ಕ್ಕೆ ಮಹಾ ಮಂಗಳಾರತಿ ಜರುಗಲಿದೆ. ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮದ ದೀಪ ಪ್ರಜ್ವಲನೆಗೆ ಅತಿಥಿಗಣ್ಯರಾಗಿ ಶ್ರೀ ರವೀಂದ್ರ ವೈ.ಶೆಟ್ಟಿ (ಕಾರ್ಯಾಧ್ಯಕ್ಷರು , ಬಂಟರ ಸಂಘ ಮುಂಬೈ, ಬಿವಾಂಡಿ ಬದ್ಲಾಪುರ್ ಪ್ರಾದೇಶಿಕ ಸಮಿತಿ ) ಶ್ರೀಧರ್ ಅಮೀನ್ (ಉಪ ಕಾರ್ಯಾಧ್ಯಎಕ್ಷರು , ಬಿಲ್ಲವರ ಅಸೋಸಿಯೇಷನ್ ಮುಂಬೈ , ಡೊಂಬಿವಲಿ ಸ್ಥಳೀಯ ಸಮಿತಿ ) , ಶ್ರೀ ಜಯಂತ್ ಶೆಟ್ಟಿ ( ಹೋಟೆಲ್ ಚಂದ್ರಹಾಸ್ , ಡೊಂಬಿವಲಿ) ಶ್ರೀ ಸತೀಶ್ ಕೋಟಿಯನ್ (ಸಮಾಜ ಸೇವಕರು , ಮಾಲಕರು , ಸೂಪ್ರ ಪ್ರಿಂಟರ್ಸ್ )

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮಂಡಳಿಯೊಂದಿಗೆ ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಡೊಂಬಿವಲಿ, ಶ್ರೀ ಜಗದಂಬ ಮಂದಿರ ಡೊಂಬಿವಲಿ, ತುಳು ವೆಲ್ಫೇರ್ ಅಸೋಸಿಯೇಷನ್ ಸಂಚಾಲಕತ್ವದ ಶ್ರೀ ಲಕ್ಷ್ಮಿ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜೆಪಾಡ ಡೊಂಬಿವಲಿ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಐರೋಲಿ, ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ, ಶ್ರೀ ವಿಠ್ಠಲ ಭಜನಾ ಮಂಡಳಿ ಮೀರಾ ರೋಡ್, , ಬಿಲ್ಲವರ ಅಸ್ಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿ, ಶ್ರೀ ವರದ ಸಿದ್ಧಿ ವಿನಾಯಕ ಭಜನಾ ಮಂಡಳಿ ಡೊಂಬಿವಲಿ ಪೂರ್ವ, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ, ಶ್ರೀ ದುರ್ಗಾಪರಮೇಶ್ವರಿ ಮಂದಿರ ನವಿ ಮುಂಬೈ, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿ ಮೀರಾ ರೋಡ್, ಶ್ರೀ ಕಲ್ಕಿ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಭ್ರಮರಾಂಬಿಕಾ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಪೋರ್ಟ್, ಶ್ರೀ ಶನೀಶ್ವರ ದೇವಸ್ಥಾನ ನೆರೋಲ್ , ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಡೊಂಬಿವಲಿ, ಯಶಶ್ವಿ ಭಜನಾ ಮಂಡಳಿ , ಡೊಂಬಿವಲಿ, ಅಮ್ರಿತಾನಂದಮಯಿ ಭಜನಾ ಮಂಡಳಿ, ಡೊಂಬಿವಲಿ , ಅಯ್ಯಪ ಭಕ್ತ ಭಜನಾ ಮಂಡಳಿ, ಡೊಂಬಿವಲಿ , ಶಬರಿ ಭಜನಾ ಮಂಡಳಿ , ಡೊಂಬಿವಲಿ, ಸದ್ಗುರು ಕೃಷ್ಣ ಭಜನಾ ಮಂಡಳಿ, ವಿಲೇ ಪಾರ್ಲೆ, ನಿತ್ಯಾನಂದ ಚಾಮುಂಡೇಶೆಯೇರಿ ಭಜನಾ ಮಂಡಳಿ, ಸಾಕಿನಾಕಾ ಮುಂತಾದ ಭಜನಾ ಮಂಡಳಿಗಳು ಭಜನಾ ಸೇವೆಯನ್ನು ನೀಡಲಿರುವರು.

ಈ ವಾರ್ಷಿಕ ಭಜನಾ ಮಂಗಳೋತ್ಸವಕ್ಕೆ ತಾವೆಲ್ಲರೂ ಬಂದು ಮಿತ್ರರೊಡಗೂಡಿ ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿ, ತನು ಮನ ಧನ ದಿಂದ ಸಹಕರಿಸಬೇಕಾಗಿ ಮಂಡಳಿಯ ಗೌರವಾಧ್ಯಕ್ಷ ನಿತಿನ್ ಪ್ರಕಾಶ್ ಪುತ್ರನ್, ಅಧ್ಯಕ್ಷ ಇಂದುಶೇಖರ್ ಸುವರ್ಣ, ಕಾರ್ಯದರ್ಶಿ ಸಚಿನ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಭೂವಾಜಿಗಳು, ಮಹಿಳಾ ವಿಭಾಗ, ಪೂಜಾ ಸಮಿತಿ, ಅರ್ಚಕರು ಹಾಗೂ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


__________

Related posts

ದಹಿಸರ್ ಪೂರ್ವ. ರಾವಲ್ಪಾಡ   ಶ್ರೀ ದುರ್ಗಾಪರಮೇಶ್ವರಿ -ಶನೀಶ್ವರ ದೇವಸ್ಥಾನ, ಜೂ 6 ರಂದು ಶ್ರೀ ಶನಿ ಜಯಂತಿ ಆಚರಣೆ.

Mumbai News Desk

 ವರ್ಲಿ :ಅಪ್ಪಾಜಿ ಬೀಡು ಫೌಂಡೇಶನ್  ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಜು 28:ಆಟಿದ ಕೂಟ.

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಫೆ. 6ರಂದು ವಾರ್ಷಿಕ ಉತ್ಸವ.

Mumbai News Desk

ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬೊರಿವಿಲಿ 35ನೇ ವಾರ್ಷಿಕ ಶರನ್ನವರಾತ್ರಿ ಉತ್ಸವ.

Mumbai News Desk

ಮಕರ ಜ್ಯೋತಿ ಫೌಂಡೇಶನ್ ಸಾಯನ್ ಕೋಲಿವಾಡ : ಅಗಸ್ಟ್ 23 ರಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಮತ್ತು ಹಳದಿ ಕುಂಕುಮ

Mumbai News Desk

ಬಂಟರ ಸಂಘ ಮುಂಬಯಿ ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿ ಮಾ 30: ಮಾತಾ ಕಿ ಚೌಕಿ ಕಾರ್ಯಕ್ರಮ.

Mumbai News Desk