
ನಮ್ಮ ಮದರ್ ಇಂಡಿಯಾ ಕನ್ನಡ ರಾತ್ರಿ ಶಾಲೆಯು ವಿದ್ಯಾರ್ಥಿಗಳ ಕೊರತೆಯಿಂದ ರದ್ದಾಗಿದ್ದರೂ ನಮ್ಮ ಶಾಲೆಯ 19 th east ಬಾಂಬೆ ಸ್ಕೌಟ್ ಚತುಟುವಟಿಕೆ ನಿರಂತರವಾಗಿ ಜರಗುವುದು ನೋಡಿದರೆ ತುಂಬಾ ಸಂತೋಷವಾಗುತ್ತಿದೆ . ಈ ರೀತಿಯ ಸ್ಕೌಟ್ ಕಾರ್ಯಕ್ರಮಕ್ಕೆ ಬಾರದೆ ಇರುತ್ತಿದ್ದರೆ ತುಂಬಾ ಪಶ್ಚಾತಾಪವಾಗುತಿತ್ತು . ಕೆಲವರು ಊರಿನಿಂದ, ಪುಣೆಯಿಂದ , ದೆಹಲಿಯಿಂದ , ಹಮುದಾಬಾದುನಿಂದ , ಪ್ರತಿ ವರ್ಷ ಸ್ಕೌಟ್ ನ ಕಾರ್ಯಕ್ರಮಕ್ಕೆ ಬರುತ್ತಿರುವುದು ನೀವು ರಾತ್ರಿ ಶಾಲೆಯಲ್ಲಿ ಕಲಿತು ಈ ಶಾಲೆಯ ಇಟ್ಟ ಪ್ರೀತಿ ನೋಡಿದರೆ ತುಂಬಾ ಸಂತೋಷವಾಗುತ್ತಿದೆ . ಎಂದು ಮದರ್ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಹಾಗೂ ಪ್ರೇಷಿಡೆಂಟ್ ಸ್ಕೌಟ್ ಆಗಿರುವ ಸುರೇಂದ್ರ ಎ ಪೂಜಾರಿ ಯವರು ನುಡಿದರು .
ಅವರು ನವೆಂಬರ್ 18 ರಂದು ಶನಿವಾರದಂದು ಗೋರಾಯಿಯ ಫಾರ್ಮ್ ರೆಜೆನ್ಸಿಯಲ್ಲಿ ಮದರ್ ಇಂಡಿಯಾದ 19th east ಬಾಂಬೆ ಹಳೆ ವಿದ್ಯಾರ್ಥಿ ಸ್ಕೌಟ್ ಬಳಗದ ನಾಲ್ಕನೇ ವರ್ಷದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ದ್ವೀಪ ಪ್ರಜ್ವಲನೆ ಮಾಡಿ ಮಾತನಾಡಿದರು . ಬಳಿಕ ಅಗಲಿದ ಶಾಲೆಯ ಹಳೆ ವಿದ್ಯಾರ್ಥಿ ಶಂಕರ ಶೆಟ್ಟಿಯವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು . ಕಮಲಾಕ್ಷ ಬೆಲ್ಚಡ ರ ತಾಯಿಯ ಸ್ಮರಣಿಕೆಯ ಸಮವಸ್ತ್ರ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಅಧ್ಯಕ್ಷರು ಚಾಲನೆ ನೀಡಿದರು . ಟ್ರೂಪ್ ಲೀಡರ್ ಸ್ಕೌಟ್ ಯಶವಂತ ಎನ್ ಪೂಜಾರಿ ಹಾಗೂ ಕಮಲಾಕ್ಷರವರೊಂದಿಗೆ ಪ್ರಾರ್ಥನೆ ನಡೆಯಿತು . ಕಾರ್ಯಕ್ರಮದ ಆರಂಭದ ವೇದಿಕೆಯಲ್ಲಿ ಶಿಕ್ಸಕರಾದ ರಾಮದಾಸ್ ಎಚ್ ನಾಯ್ಕ್ ಜಗನ್ನಾಥ ಡಿ ಶೆಟ್ಟಿ ನಾಲಾಸೋಪಾರಾ ಜಯರಾಮ ಪೂಜಾರಿ ನೇವ್ ಮುಂಬೈ ಪ್ರೇಷಿಡೆಂಟ್ ಸ್ಕೌಟ್ ಚಂದ್ರಾಸ್ ಶೆಟ್ಟಿ (ಪುಣೆ ) ಶಾಲೆಯ ಫೌಂಡೇಶನ್ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಮೈಂದನ್ , ಕೋಶಾಧಿಕಾರಿ ಟಿ ವಿ ಪೂಜಾರಿ (ತುಂಗಾಯ ಪೂಜಾರಿ ) ಗಣೇಶ್ ಕುಂದರ್ , ಭಾಸ್ಕರ್ ಜತ್ತನ್ , ಉಪಸ್ಥಿತರಿದ್ದರು .

ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಸಮಯಗಳಲ್ಲಿ ಅನೇಕ ಸ್ಕೌಟ್ ಬ್ಯಾಜ್ ಮಾಡಿದ ಸಾಧಕರಾದ ಕೃಷ್ಣ ಎಂ ಶೆಟ್ಟಿ (ಕಾರುಗರ್ ) ಸುರೇಶ ಭಂಡಾರಿ (ಮೀರಾರೋಡ್ ) ರಮೇಶ್ ಕೆ ಪೂಜಾರಿ ( ನಾಲಾಸೋಪಾರಾ ) ಕಮಲಾಕ್ಷ ಬಿ ಬೆಲ್ಚಡ (ಹಮದಾಬಾದ್ ) ಉದಯ ಆರ್ ಶೆಟ್ಟಿ (ಶಾನುಪಾಡ) ಶ್ರೀಕಾಂತ ಬಿ ಪೂಜಾರಿ (ಮೀರಾರೋಡ್ ) ಇವರಿಗೆಲ್ಲಾ ಶಾಲು ಹೊದಿಸಿ ಪೇಟ ತೊಡಿಸಿ ಪುಷ್ಪ ಹಾಗೂ ಗುರುವಂದನಾ ಪತ್ರ ನೀಡಿ ಸನ್ಮಾನಿಸಲಾಯಿತು .






ಮಾರನೇ ದಿನ 19 ರಂದು ಆದಿತ್ಯವಾರ ನಾಲ್ಕು ಪೆಟ್ರೋಲ್ ತಂಡಗಳಾದ ಲಯನ್ ಟೈಗರ್ ಪಿಕೋಕ್ ವೂಲ್ಫ್ ತಂಡಗಳ ಮದ್ಯೆ ಸ್ಕೌಟ್ ಸ್ಪರ್ಧೆಗಳು ಜರಗಿ ಅಂತಿಮ ಹಂತಕ್ಕೆ ಕರುಣಾಕರ ಎಂ ಪೂಜಾರಿಯವರ ಪಿಕೋಕ್ ತಂಡ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿ ಪ್ರಶಸ್ತಿ ಪಡೆದು ಶ್ರೀಕಾಂತ್ ಪೂಜಾರಿಯವರ ಟೈಗರ್ ತಂಡವು ಮೂರನೇ ವರ್ಷದ ಹ್ಯಾಟ್ರಿಕ್ ಪಡೆಯುವಲ್ಲಿ ಪಿಕೋಕ್ ತಂಡ ಆಡಗಾಲಿಟ್ಟು ಟೈಗರ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆಯಿತು . ಉದಯ ಶೆಟ್ಟಿಯವರ ವೂಲ್ಫ್ ಪೆಟ್ರೋಲ್ ತಂಡ ತೃತೀಯ ಸ್ಥಾನ ಊರಿನಿಂದ ಬಂದ ರಮೇಶ್ ಶೆಟ್ಟಿಯವರ ಲಯನ್ ಪೆಟ್ರೋಲ್ ತಂಡ ಶಿಸ್ತು ಬದ್ದ ತಂಡವಾಗಿ ಹೊರಹೊಮ್ಮಿ ಪ್ರಶಸ್ತಿ ಪಡೆಯಿತು .
ಸಂಜೆ ಸಮಾರೋಪ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿ ಹಿರಿಯ ಸ್ಕೌಟ್ ಗರಾದ ಸದಾಶಿವ ಸಿ ಪೂಜಾರಿ, ಉಮೇಶ್ ಶೆಟ್ಟಿ , ಜಯರಾಮ ಪೂಜಾರಿ (ನೀವಿಮುಂಬಯಿ ) ಶಿಕ್ಸಕರಾದ ರಾಮದಾಸ್ ಎಚ್ ನಾಯ್ಕ್, ಮಂದಾರ ಎನ್ ಹೆಗ್ಡೆ ,ಜಯ ಸಿ ಪೂಜಾರಿ ಉಪಸ್ಥಿತರಿದ್ದು ಸ್ಕೌಟ್ ವಿದ್ಯಾರ್ಥಿಗಳ ಶಿಸ್ತಿನ ಬಗ್ಗೆ ಪ್ರತಿಯೊಬ್ಬರೂ ಮಾತನಾಡಿದರು .
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಕೃಷ್ಣ ಎಂ ಶೆಟ್ಟಿ ಕಮಲಾಕ್ಷ ಬಿ ಬೆಲ್ಚಡ ಸನ್ಮಾನ ಪಡೆದು ಸಂತೋತ್ಸವದ ಬಗ್ಗೆ ಮಾತನಾಡಿದರು . ಮತ್ತು ಸ್ಕೌಟ್ ನ ಕಾರ್ಯಕ್ರಮಕ್ಕೆ ಸಹಕರಿಸಿದ ಜಗನ್ನಾಥ ಡಿ ಶೆಟ್ಟಿ ,(ನಾಲಾಸೋಪಾರಾ ) ಮಂಜುನಾಥ ದೇವಾಡಿಗ, (ಮಲಾಡ್ ) ಸುರೇಶ ಎಸ್ ಭಂಡಾರಿ , ಮಂಜುನಾಥ್ ಕೆ ಪೂಜಾರಿ ,ಉದಯ ಆರ್ ಶೆಟ್ಟಿ , ಯಶವಂತ ಎನ್ ಪೂಜಾರಿ ಸದಾಶಿವ ಸಿ ಪೂಜಾರಿ , ಶ್ರೀಕಾಂತ್ ಪೂಜಾರಿ ಹಾಗೂ ವೆಂಕಟೇಶ್ ಎಚ್ ನಾಯ್ಕ್ ಇವರಿಗೆಲ್ಲ ಗೌರವಿಸಲಾಯಿತು .
ಕಾರ್ಯಕ್ರಮದ ಆರಂಭದಲ್ಲಿ ಶಿಕ್ಸಕ ಜಗನ್ನಾಥ ಡಿ ಶೆಟ್ಟಿ ಸ್ವಾಗತಿಸಿದರೆ ಮಂದಾರ ಎನ್ ಹೆಗ್ಡೆ ಹಳೆ ಸ್ಕೌಟ್ ಗರನ್ನು ಪರಿಚಯಿಸಿದರು . ಸನ್ಮಾನಿತರ ಸನ್ಮಾನ ಪತ್ರವನ್ನು ಜಯ ಸಿ ಪೂಜಾರಿ ಕರುಣಾಕರ ಎಂ ಪೂಜಾರಿ ಸತೀಶ್ ಬೆಲ್ಚಡ ಜಯರಾಮ ಪೂಜಾರಿ (ನೀವಿಮುಂಬಯಿ ) ಯೋಗೇಶ್ ಕೊಠಾರಿ ಓದಿದರು. ಅಮೂಲ್ ರಾಣೆ ಸುನಿಲ್ ಶೆಟ್ಟಿ (ರೆಜೆನ್ಸಿ ) ಕಾರ್ಯಕ್ರಮದ ವೆವಸ್ತೆಗಳನ್ನು ನೋಡಿಕೊಂಡರೆ ಜೈರಾಮ್ ಕೆ ಪೂಜಾರಿ ವಂದಿಸಿದರು .ಕಾರ್ಯಕ್ರಮವನ್ನು ಜಯ ಸಿ ಪೂಜಾರಿ ಯಶವಂತ ಎನ್ ಪೂಜಾರಿ ಜೈರಾಮ್ ಕೆ ಪೂಜಾರಿ ನಿರೂಪಿಸಿದರು.
ಜಯ ಸಿ ಪೂಜಾರಿ.