30.9 C
Mumbai
June 8, 2026
Mumbai News Kannada
ಮುಂಬಯಿ

ಬಂಟ್ಸ್ ಫೋರಮ್ ಮೀರಾ ಭಾಯಂದರಿನ ಬಂಟರಕೂಟ-2026 ಕಾರ್ಯಕ್ರಮದ ಪೂರ್ವಭಾವಿ ಸಭೆ.






ಕಾರ್ಯಕ್ರಮದ ಯಶಸ್ಸಿಗೆ ಸಮಾಜ ಬಾಂಧವರ ಸಹಕಾರ ಅಗತ್ಯ….. ಉದಯ್ ಎಮ್.ಶೆಟ್ಟಿ ಮಲಾರ್ ಬೀಡು.

ಚಿತ್ರ, ವರದಿ: ಉಮೇಶ್ ಕೆ. ಅಂಚನ್

ಮುಂಬಯಿ, ಡಿ.19:ಮೀರಾಭಾಯಂದರ್ ಪರಿಸರದಲ್ಲಿ ಕಳೆದ 24 ವರ್ಷಗಳಿಂದ ಬಂಟ ಬಾಂಧವರನ್ನು ಒಗ್ಗೂಡಿಸಿ ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಹಾಗೂ ಇನ್ನಿತರ ಸಮಾಜಪರ ಸೇವೆಯನ್ನು ಮಾಡುತ್ತಾ ಬಂದಿರುವ ಬಂಟ್ಸ್ ಫೋರಮ್ ಮೀರಾಬಾಯಂಧರ್ ಇದರ ವತಿಯಿಂದ ಬಂಟರಕೂಟ-2026 ಸಮಾರಂಭವು ಜ.24ರಂದು ಅದ್ಧೂರಿಯಾಗಿ ನಡೆಯಲಿದೆ. ಕಾರ್ಯಕ್ರಮಕ್ಕೆ ಇಸ್ಸಾರ್ ಫೈನಾನ್ಶಿಯಲ್ ಕಂಪನಿಯ ಮುಖ್ಯ ಆಡಳಿತ ನಿರ್ದೇಶಕ ಆರ್.ಕೆ.ಶೆಟ್ಟಿಯವರು ಸಂಪೂರ್ಣ ಸಹಕಾರ ನೀಡಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಸಮಾಜ ಬಾಂಧವರ ಸಹಕಾರ ಅಗತ್ಯ ಎಂದು ಬಂಟ್ಸ್ ಫೋರಮ್ ಮೀರಾಭಾಯಂದರ್ ಇದರ ಅಧ್ಯಕ್ಷ ಉದಯ ಎಮ್. ಶೆಟ್ಟಿ ಮಲಾರ್ ಬೀಡು ಹೇಳಿದರು.
ಅವರು ಡಿ.15ರಂದು ಮೀರಾ ರೋಡ್ ಪೂರ್ವದ ಸಾಯಿಬಾಬಾ ನಗರದ ಸಮಾಜ ಮಂದಿರ ಸಭಾಗ್ರಹದಲ್ಲಿ ಬಂಟರಕೂಟ-2026 ಕಾರ್ಯಕ್ರಮ ಆಯೋಜನೆಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಕಾರ್ಯಕ್ರಮವು ಜ.24ರ ಮದ್ಯಾಹ್ನ ಗಂಟೆ 12.30ರಿಂದ ಬಂಟ್ಸ್ ಫೋರಮ್ ಭಜನಾ ಮಂಡಳಿಯ ಸದಸ್ಯರು ಭಜನೆಯೊಂದಿಗೆ ಮೀರಾ ರೋಡ್ ಪೂರ್ವದ ಎಸ್.ಕೆ.ಸ್ಟೋನ್ ಪೋಲೀಸ್ ಸ್ಟೇಶನ್ ಸಮೀಪದ ಸೆಂಟ್ರಲ್ ಪಾರ್ಕ್ (ಎ.ಸಿ) ಲಾನ್ ನಲ್ಲಿ ಆರಂಭಗೊಳ್ಳಲಿದೆ. ಕಾರ್ಯಕ್ರಮವು ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ದೀಪಪ್ರಜ್ವಲನೆಯೊಂದಿಗೆ ಉದ್ಘಾಟನೆ ಗೊಳ್ಳಲಿದೆ. ತದನಂತರ ಸಾಂಸ್ಕೃತಿಕ ನೃತ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು ಗಂಟೆ 3ರಿಂದ ಕೀರ್ತಿಶೇಷ ಯಜಮಾನ ಮಹಾಬಲ ಶೆಟ್ಟಿ ಮಲಾರ್ ಬೀಡು ಸ್ಮರಣಾರ್ಥ ವೇದಿಕೆಯಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಬಂಟ ಸಮಾಜದ ಸಾಧಕರಿಗೆ ಗೌರವಪೂರ್ವಕ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಷ್ಠಿತ ಉದ್ಯಮಿಗಳು, ರಾಜಕೀಯ ಗಣ್ಯರು ಉಪಸ್ಥಿತರಿರುವರು. ಕೊನೆಯಲ್ಲಿ ಬಂಟ್ಸ್ ಫೋರಮ್ ಸದಸ್ಯರು ನಟಿಸಿರುವ ‘ಪನರೆ ಪೋವೊಡ್ಚಿ-ದಾಲಾ ಆವಡ್’ ಎಂಬ ತುಳು ಸಾಮಾಜಿಕ ನಾಟಕವು ಜಗದೀಶ್ ಶೆಟ್ಟಿ ಕೆಂಚನಕೆರೆಯವರ ದಕ್ಷ ನಿರ್ದೇಶನದಲ್ಲಿ ಸಾದರ ಗೊಳ್ಳಲಿದೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿಭೋಜನದ ವ್ಯವಸ್ಥೆ ಮಾಡಲಾಗುವುದು.
ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ಅನಿಲ್ ಆರ್.ಶೆಟ್ಟಿ, ಉಪಾಧ್ಯಕ್ಷರುಗಳಾದ ದಿವಾಕರ ಶೆಟ್ಟಿ ಶಿರ್ಲಾಲ್, ಹರ್ಷಕುಮಾರ್ ಡಿ.ಶೆಟ್ಟಿ, ಕೋಶಾಧಿಕಾರಿ ಹರೀಶ್ ಶೆಟ್ಟಿ ಕಾಪು, ಜೊತೆ ಕಾರ್ಯದರ್ಶಿ ಶರ್ಮಿಳಾ ಕೆ.ಶೆಟ್ಟಿ,ಜೊತೆ ಕೋಶಾಧಿಕಾರಿ ಮಧುಕರ್ ಎಸ್.ಶೆಟ್ಟಿ ಅಜೆಕಾರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಖವಾಣಿ ಡಿ.ಶೆಟ್ಟಿ ಉಪಸ್ಥಿತರಿದ್ದರು.
ಸಂತೋಷ್ ರೈ ಬೆಳ್ಳಿಪಾಡಿ, ಚಂದ್ರಹಾಸ್ ಕೆ.ಶೆಟ್ಟಿ ಇನ್ನ, ಆನಂದ್ ಶೆಟ್ಟಿ ಕುಕ್ಕುಂದೂರು, ಶೈಲೇಶ್ ಶೆಟ್ಟಿ ಸೂಡ, ರವೀಂದ್ರ ಶೆಟ್ಟಿ ದೇರಳಕಟ್ಟೆ, ಪ್ರವೀಣ್ ಶೆಟ್ಟಿ, ಧೀರಜ್ ಶೆಟ್ಟಿ, ಸುಜಾತಾ ಶೆಟ್ಟಿ, ದಿವ್ಯಾ ಶೆಟ್ಟಿ, ಸುನಿತಾ ಶೆಟ್ಟಿ, ಸುಮತಿ ಶೆಟ್ಟಿ,ದಿವ್ಯಾ ಹೆಗ್ಡೆ, ಶುಭಲತಾ ಶೆಟ್ಟಿ, ಯೋಗಿನಿ ಶೆಟ್ಟಿ, ಪ್ರತಿಭಾ ಶೆಟ್ಟಿ, ಮಲ್ಲಿಕಾ ಶೆಟ್ಟಿ,ವಿಜಯಲಕ್ಷ್ಮಿ ಡಿ.ಶೆಟ್ಟಿ, ಶೈಲಾ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.



Related posts

ಗೋರೆಗಾಂವ್ ಪೂರ್ವ   ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ  59ನೇ ವಾರ್ಷಿಕ ಮಹೋತ್ಸವ, ಗುರು ಮೂರ್ತಿ ಅಭಿಷೇಕ ಯಕ್ಷಗಾನ ಬಯಲಾಟ,

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಬಿಂದಿಯಾ ಉದಯ ಮೂಲ್ಯ ಗೆ ಶೇ 94.80 ಅಂಕ.

Mumbai News Desk

ಚಿಣ್ಣರಬಿಂಬ ಮುಂಬಯಿ : 22ನೇ ವಾರ್ಷಿಕ ಮಕ್ಕಳ ಉತ್ಸವದ ನಾಟಕೋತ್ಸವ ಸಮಾರೋಪ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಸಮಾಜದ ಮಹಿಳೆಯರಿಗಾಗಿ ಆಯೋಜಿಸಿದ ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ :-

Mumbai News Desk

ಕರ್ನಾಟಕ ಸಂಘ ಡೊಂಬಿವಲಿ : ಲಲಿತ ಕಲಾ ಹಾಗೂ ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ನಾಡಹಬ್ಬ.

Mumbai News Desk

ಬಹುಮುಖ ಪ್ರತಿಭೆ ಕು. ಪ್ರಿಷಾ ಜಿತೇಂದ್ರ ಕೋಟ್ಯಾನ್ ಅವರ ಭರತನಾಟ್ಯ ರಂಗಪ್ರವೇಶ

Mumbai News Desk