
ಬಿಲ್ಲವ ಸಮಾಜ ಸೇವಾ ಸಂಘ (ರಿ) ಕೊಡೇರಿ ಇದರ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ ವಾರ್ಷಿಕ ಕಂಬಳೋತ್ಸವವು ನವೆಂಬರ್ ೨೧ ರಂದು ಕೊಡೇರಿಯಲ್ಲಿ ಬಲು ವಿಜೃಂಭಣೆಯಿoದ ಜರಗಿತು. ಸಾಂಪ್ರದಾಯಕವಾಗಿ ನೆಡೆದು ಬಂದ ಈ ಕಂಬಳಕ್ಕೆ ಬಿಲ್ಲವ ಸಮಾಜ ಸೇವಾ ಸಂಘವು ಊರ ಹಾಗೂ ಪರವೂರ ದಾನಿಗಳ ನೆರವಿನಿಂದ ಆಕರ್ಷಕ ಬಹುಮಾನಗಳನ್ನು ನೀಡಿ ಕೋಣಗಳ ಮಾಲಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಪ್ರತಿ ವರ್ಷ ಸುಮಾರು ೬೦ ಜೋಡಿ ಕೋಣಗಳು ಈ ಕಂಬಳೋತ್ಸವದಲ್ಲಿ ಬಾಗಿಯಾಗುತ್ತಿದ್ದು ಕನಿಷ್ಠ ಅವಧಿಯಲ್ಲಿ ನಿಗದಿತ ಗುರಿ ತಲುಪಿದ ಕೋಣಗಳ ಮಾಲಕರಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಲಾಗುತ್ತಿದ್ದು ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಮುಂಬೈ ಉದ್ಯಮಿ ಮಹಾದೇವ ಪೂಜಾರಿಯವರು ಸಂಘದ ಪದಾಧಿಕಾರಿಗಳು ಹಾಗೂ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ೭೭ನೇ ವರ್ಷದ ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ ವಾರ್ಷಿಕ ಕಂಬಳೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಬಳಿಕ ಕೋಣಗಳ ವಯೋಮಿತಿಗೆ ಅನುಗುಣವಾಗಿ ಸಬ್ ಜ್ಯೂನಿಯರ್, ಹಗ್ಗ ಕಿರಿಯ, ಹಗ್ಗ ಹಿರಿಯ ಮತ್ತು ಹಲಗೆ (ಮುಕ್ತ) ಹೀಗೆ ನಾಲ್ಕು ವಿಭಾಗಗಳಿಗೆ ಸ್ಪರ್ಧಾ ಓಟ ಆರಂಭಿಸಲಾಯಿತು
ಕೋಣಗಳ ಓಟದ ಸಮಯ ಗುರುತಿಸಲು ಸೆನ್ಸಾರ್ ಅಳವಡಿಸಲಾಗಿದ್ದು ತನ್ನ ಸವಾರನೊಂದಿಗೆ ನಿಗದಿತ ಗುರಿ ತಲುಪಿದ ಕೋಣಗಳ ಮಾಲಕರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

೭೭ ನೇ ವರ್ಷದ ಕಂಬಳದ ಫಲಿತಾಂಶ :
ಹಲಗೆ ವಿಭಾಗ :
ಪ್ರಥಮ – ಶ್ರೀ ರಾಮ್ ಚೈತ್ರಾ ಪರಮೇಶ್ವರ ಭಟ್ ಬೋಳಂಬಳ್ಳಿ
ದ್ವಿತೀಯ – ಆನಂದ ದೇವಾಡಿಗ ಮೇಲ್‌ಗುಡ್ಡೆ ಮನೆ ತೆಕ್ಕಟ್ಟೆ
ಹಗ್ಗ ಹಿರಿಯ ವಿಭಾಗ :
ಪ್ರಥಮ – ಪುಷ್ಟಿ ಪನ್ನಗ ಪ್ರಥ್ವೀಶ್ ಹೆಬ್ಬಾರ್ ಭಟ್ಕಳ
ದ್ವಿತೀಯ– ದಿಶಾ ಶ್ರೇಯಸ್ ನಾರಾಯಣ ದೇವಾಡಿಗ ಮಿಯ್ಯಾಣಿ
ಹಗ್ಗ ಕಿರಿಯ ವಿಭಾಗ :
ಪ್ರಥಮ – ಹೆಚ್.ಎನ್.ನಿವಾಸ ಫಿನ್ನುಪಾಲ್ ಭಟ್ಕಳ
ದ್ವಿತೀಯ– ದುರ್ಗಾ ಫ್ರೆಂಡ್ಸ್ ಚಾರ್ವಿನ್ ಚಿನ್ಮಯ ಪೂಜಾರಿ ನಾಗೂರು
ಸಬ್ ಜ್ಯೂನಿಯರ್ ವಿಭಾಗ :
ಪ್ರಥಮ – ವಿಶ್ವನಾಥ ದೇವಾಡಿಗ ನರಿಗುಡಿ
ದ್ವಿತೀಯ– ರಿಜ್ವಾನ್ ಬ್ಯಾರಿ ಕೋಟ
ಕೊಡೇರಿ ಹಕ್ರೆಮಠ ಕಂಬಳೋತ್ಸವಕ್ಕೆ ತಮ್ಮ ಬಾಬ್ತು ಓಟದ ಕೋಣಗಳೊಂದಿಗೆ ಆಗಮಿಸಿದ ಕೋಣಗಳ ಮಾಲಕರನ್ನು ಸಾಂಪ್ರದಾಯಕವಾಗಿ ವೀಳ್ಯ ನೀಡಿ ಸ್ವಾಗತಿಸಲಾಯಿತು.
ಸಂಘದ ಆಶ್ರಯದಲ್ಲಿ ದಿನವಿಡಿ ಜರಗಿದ ಕಂಬಳೋತ್ಸವ ಸಂಜೆ ಸಂಪನ್ನಗೊAಡ ಬಳಿಕ ಸಮಾರೋಪ ಸಮಾರಂಭ ಆಯೋಜಿಸಿ ವಿಜೇತ ಕೋಣಗಳ ಮಾಲಕರಿಗೆ ಬಹುಮಾನ ವಿತರಿಸಲಾಯಿತು
ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಮಹಾದೇವ ಪೂಜಾರಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರೆ ಮುಖ್ಯ ಅತಿಥಿಗಳಾಗಿ ಕಿರಿಮಂಜೇಶ್ವರ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಶೇಖರ ಖಾರ್ವಿ, ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷರಾದ ವೆಂಕಟ್ ಪೂಜಾರಿ ಸಸಿಹಿತ್ಲು, ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ತಾಲೂಕು ಪಂಚಾಯಿತ್ ಮಾಜಿ ಅಧ್ಯಕ್ಷರಾದ ಮಹೇಂದ್ರ ಪೂಜಾರಿ, ಮೂರ್ತೆದಾರರ ಸೇವಾ ಸಹÀಕಾರಿ ಸಂಘ ಉಪ್ಪುಂದ ಅಧ್ಯಕ್ಷರಾದ ಮೋಹನ ಪೂಜಾರಿ, ಕ್ರಷಿ ಅಧಿಕಾರಿ ಪರಶುರಾಮ್, ಬೆಂಗಳೂರು ಉದ್ಯಮಿ ಮಂಜುನಾಥ ಕಾರಂತ ಆಗಮಿಸಿದ್ದರು. ಮುಂಬೈ ಉದ್ಯಮಿ ರಾಜೇಶ್ ಪೂಜಾರಿ, ಮೀನುಗಾರಿಕಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಸಿ. ಎಸ್. ಖಾರ್ವಿ, ಹಾಲು ಉತ್ಪಾದಕರ ಸಹಕಾರಿ ಸಂಘ ಕಿರಿಮಂಜೇಶ್ವರದ ಅಧ್ಯಕ್ಷರಾದ ಸುಬ್ಬಣ್ಣ ಶೆಟ್ಟಿ, ಕೊಡೇರಿ ಬಂದರು ಮೀನುಗಾರರ ಸೇವಾ ಸಮಿತಿ ಅಧ್ಯಕ್ಷರಾದ ಡಿ. ಚಂದ್ರ ಖಾರ್ವಿ, ಬಿಲ್ಲವ ಸಂಘದ ಅಧ್ಯಕ್ಷರಾದ ರಾಘವೇಂದ್ರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಪೂಜಾರಿ ಕಾಡ್ಕೇರಿ, ಕೋಶಾಧಿಕಾರಿ ರಾಘವೇಂದ್ರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಸಂಘದ ಅಧ್ಯಕ್ಷರಾದ ರಾಘವೇಂದ್ರ ಪೂಜಾರಿ ಸರ್ವರನ್ನು ಸ್ವಾಗತಿಸಿದರೆ ಗ್ರಾಮ ಪಂಚಾಯಿತ್ ಸದಸ್ಯರಾದ ಆನಂದ ಪೂಜಾರಿ ಕೊಡೇರಿ ನಿರೂಪಿಸಿದರು ಪ್ರಧಾನ ಕಾರ್ಯದರ್ಶಿ ಸುಧೀರ್ ಪೂಜಾರಿ ಕಾಡ್ಕೇರಿ ವಂದನಾರ್ಪಣೆಗೈದರು
ಕೃಷ್ಣ ಪೂಜಾರಿ ಹೊಸ್ಮನೆ, ಗಜ್ನಾರ ಭಾಸ್ಕರ ಪೂಜಾರಿ, ಹೊಸ್ಮನೆ ಭಾಸ್ಕರ ಪೂಜಾರಿ, ವಿಜಯ್ ಪೂಜಾರಿ, ಮಂಜುನಾಥ ಪೂಜಾರಿ, ಶೇಖರ ಪೂಜಾರಿ, ರವಿರಾಜ್ ಪೂಜಾರಿ, ನಾಗರಾಜ್ ಪೂಜಾರಿ, ಗಣೇಶ ಪೂಜಾರಿ, ಸಂಜೀವ ಪೂಜಾರಿ ಮತ್ತಿತರರು ಕಂಬಳೋತ್ಸವದ ಪೂರ್ವ ತಯಾರಿಗಾಗಿ ಸಹಕರಿಸಿದರು
ಹೊಸ್ಮನೆ, ಮೇಲ್ ಮೊಳೆಬೈಲು, ಕೆಳಾ ಮೊಳೆಬೈಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮತ್ತು ಸಂಘದ ಸದಸ್ಯರ ಸಹಕಾರದಿಂದ ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ ೭೭ನೇ ವರ್ಷದ ವಾರ್ಷಿಕ ಕಂಬಳೋತ್ಸವವು ಬಲು ವಿಜೃಂಭಣೆಯಿoದ ಜರಗಿತು.