
ನಾಯ್ಗಾಂವ್ ,ವಸಾಯಿ, ನಾಲಸೋಪರ ,ವಿರಾರ್ ಪರಿಸರದ ಮೊಗವೀರ ಬಂಧುಗಳ ಸಂಘಟನೆ ವಸಾಯಿ ತಾಲೂಕ ಮೊಗವೀರ ಸಂಘದ ನೂತನ ಅಧ್ಯಕ್ಷರಾಗಿ ಸಂಘಟಕ, ಉದ್ಯಮಿ ಯಶೋಧರ ವಿ.ಕೋಟ್ಯಾನ್ ಕಾಪು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಂಘದ ಕಚೇರಿ , ವಸಾಯಿ ಪಶ್ಚಿಮದ ಆನಂದ ನಗರದ ನ್ಯೂ ವರ್ಷಾ ಅಪಾರ್ಟ್ಮೆಂಟ್ನಲ್ಲಿ ನಡೆದಿತ್ತು.
ಸಂಘದ ಕಾರ್ಯದರ್ಶಿಯಾಗಿ ಶೇಖರ ಕರ್ಕೇರ, ಕೋಶಾಧಿಕಾರಿಯಾಗಿ ವಿಶ್ವನಾಥ ಬಂಗೇರ, ಮುಖ್ಯ ಸಲಹೆಗಾರರಾಗಿ ಮೋಹನ್ ಪುತ್ರನ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಪ್ರೇಮ ಎಸ್.ನಾಯ್ಕ್, ಮಹಿಳಾ ವಿಭಾಗದ ಸಲಹಾ ಸಮಿತಿಯ ಕಾರ್ಯಧ್ಯಕ್ಷೆ ಮೋಹಿನಿ ಮಲ್ಪೆ, ಕಾರ್ಯಕ್ರಮ ಸಮಿತಿಯ ಕಾರ್ಯಧ್ಯಕ್ಷರಾಗಿ ಪ್ರತೀಕ್ ಶ್ರೀಯಾನ್, ಸಂಚಾಲಕರಾಗಿ ಪ್ರದೀಪ್ ಪುತ್ರನ್ ಆಯ್ಜೆಯಾಗಿದ್ದಾರೆ.

ಯಶೋಧರ ವಿ ಕೋಟ್ಯಾನ್ :
ವಸಾಯಿ ತಾಲೂಕಿನಲ್ಲಿ ಹೋಟೆಲ್ ಉದ್ಯಮಿಯಾಗುರುವ ಇವರು ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿರುವರು. ಮಣಿಕಂಠ ಸೇವಾ ಸಮಿತಿ ವಸಾಯಿ ಇದರ ಅಧ್ಯಕ್ಷರಾಗಿ, ವಸಾಯಿ ಕರ್ನಾಟಕ ಸಂಘ ಹಾಗೂ ತುಳುಕೂಟ ಫೌಂಡೇಶನ್ ನಾಲಾಸೋಪರ ಇದರ ಸಕ್ರಿಯ ಕಾರ್ಯಕರ್ತರಾಗಿರುವರು.ವಸಾಯಿ,ನಾಲಾಸೋಪರ, ವಿರಾರ್ ಪರಿಸರದ ತುಳು-ಕನ್ನಡಿಗರೊಂದಿಗೆ ಉತ್ತಮ ಭಾಂದ್ಯವ್ಯ ಹೊಂದಿ ,ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ .ಕಲಾ ಪೋಷಕರೂ ಆಗಿರುವ ಯಶೋಧರ ಕೋಟ್ಯಾನ್ ಕಾಪು ಹೊಸಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯದಲ್ಲೂ ಸಹಕರಿಸುತ್ತಿರುವರು.
ಸಂಘದ ಸ್ಥಾಪನೆಯ ದಿನದಿಂದ ಯಶೋಧರ ಕೋಟ್ಯಾನ್ ಸಕ್ರಿಯವಾಗಿ ಕಾರ್ಯವೆಸಗುತ್ತಿದ್ದು, ಇದೀಗ 2ನೇ ಬಾರಿ ಸಂಘದ ಚುಕ್ಕಾಣಿ ಹಿಡಿದಿರುವರು.
ಇವರ ಕಾರ್ಯವಧಿಯಲ್ಲಿ ವಸಾಯಿ ತಾಲೂಕ ಮೊಗವೀರ ಸಂಘ ನಿರಂತರ ಕಾರ್ಯ-ಚಟುವಟಿಕೆಗಳನ್ನು ಹಮ್ಮಿಕೊಂಡು , ಸಮಾಜ ಭಾಂದವರ ಆಶೋತ್ತರಗಳಿಗೆ ಸ್ಪಂದಿಸಲಿ ಎಂದು ಮುಂಬೈ ನ್ಯೂಸ್ ಶುಭ ಕೋರುತದೆ.