July 23, 2026
Mumbai News Kannada
ಮಹಾರಾಷ್ಟ್ರ

ಮಹಾರಾಷ್ಟ್ರ: ಸಚಿವ ಸ್ಥಾನಕ್ಕೆ ಮಾಣಿಕ್ರಾವ್ ಕೊಕಾಟೆ ರಾಜೀನಾಮೆ!







ನಾಸಿಕ್‌ ಅಪಾರ್ಟ್‌ಮೆಂಟ್ ಹಗರಣದಿಂದ ಮಹಾರಾಷ್ಟ್ರ ರಾಜ್ಯ ಕ್ರೀಡಾ ಸಚಿವ ಮಾಣಿಕ್​ರಾವ್ ಕೊಕಾಟೆ ಸಂಕಷ್ಟಕ್ಕೆ ಸಿಲುಕಿದ್ದು ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಪ್ರಕರಣ ಸಂಬಂಧ ನಾಸಿಕ್ ಸೆಷನ್ಸ್ ನ್ಯಾಯಾಲಯವು ಸಚಿವ ಮಾಣಿಕ್​ರಾವ್ ಕೊಕಾಟೆ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. 1995ರಲ್ಲಿ ನಡೆದಿದ್ದ ಪ್ರಕರಣ ಇದಾಗಿದೆ. ಈ ಪ್ರಕರಣದಲ್ಲಿ ಕೊಕಾಟೆಗೆ ಎರಡು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಅದರ ನಂತರ ನಾಸಿಕ್ ಸೆಷನ್ಸ್ ನ್ಯಾಯಾಲಯವು ಈಗ ಮಾಣಿಕ್​ರಾವ್ ಕೊಕಾಟೆ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.

ನಾಸಿಕ್‌ನಲ್ಲಿ 1995ರ ಜುನ್ಯಾ ಸದನಿಕಾ ಹಗರಣ ಪ್ರಕರಣವು ಮಾಣಿಕ್ರಾವ್ ಕೊಕಾಟೆ ಅವರಿಗೆ ದೊಡ್ಡ ಹೊಡೆತ ನೀಡಿತ್ತು. ನಾಸಿಕ್ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಕೊಕಾಟೆ ವಿರುದ್ಧ ವಾರಂಟ್ ಹೊರಡಿಸಿತ್ತು. ಕೊಕಾಟೆ ಕಥೆ ಸುಮಾರು 30 ವರ್ಷಗಳಿಂದ ನಡೆಯುತ್ತಿದ್ದು ಯಾವುದೇ ಕ್ಷಣದಲ್ಲಾದರೂ ಅವರ ಬಂಧನವಾಗಬಹುದು.

ಏತನ್ಮಧ್ಯೆ, ಮಾಣಿಕ್​ರಾವ್ ಕೊಕಾಟೆ ತಮ್ಮ ರಾಜೀನಾಮೆ ಪತ್ರವನ್ನು ಅಜಿತ್ ಪವಾರ್ ಅವರಿಗೆ ಸಲ್ಲಿಸಿದ್ದಾರೆ. ಸದ್ಯ ನಾಸಿಕ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನೀಡಿದ ಆದೇಶಗಳ ವಿರುದ್ಧ ಕೊಕಾಟೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಹೈಕೋರ್ಟ್ ಶುಕ್ರವಾರ ತನ್ನ ನಿರ್ಧಾರವನ್ನು ನೀಡಲಿದೆ. ಆದ್ದರಿಂದ, ಹೈಕೋರ್ಟ್ ಆದೇಶದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.



Related posts

ಮಹಾರಾಷ್ಟ್ರ: ಫಡ್ನವಿಸ್ ಮಹಾರಾಷ್ಟ್ರದ ನೂತನ ಸಿಎಂ, ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ.

Mumbai News Desk

ವಸಾಯಿ ತಾಲೂಕ ಮೊಗವೀರ ಸಂಘದ ನೂತನ ಅಧ್ಯಕ್ಷರಾಗಿ ಯಶೋಧರ ವಿ ಕೋಟ್ಯಾನ್ ಕಾಪು ಆಯ್ಕೆ.

Mumbai News Desk

ಬೊಯಿಸರ್   ಶ್ರೀ ಸೋಮೇಶ್ವರ ಮಂದಿರದಲ್ಲಿ 15ನೇ ವಾರ್ಷಿಕ ಮಹಾಪೂಜೆ, ಸಂಪನ್ನ,

Mumbai News Desk

ಆಸ್ತಿ ಮತ್ತು ಬಾಡಿಗೆ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದ ಮಹಾರಾಷ್ಟ್ರ ಸರ್ಕಾರ

Mumbai News Desk

ಮಹಾರಾಷ್ಟ್ರ : ಸುನೇತ್ರಾ ಪವಾರ್ ಇಂದು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

Mumbai News Desk

ಮಾಹಾರಾಷ್ಟ್ರ ವಿಧಾನ ಸಭಾ ಚುನಾವಣೆ : “ಎಣ್ಣೆ” ಪ್ರಿಯರಿಗೆ ವಿಶೇಷ ಮಾಹಿತಿ.

Mumbai News Desk