23.5 C
Karnataka
April 4, 2025
ಪ್ರಕಟಣೆ

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿಡಿ. 3 ರಂದು 35 ನೇ ವಾರ್ಷಿಕ ಮಹಾಸಭೆ



ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಸರ್ವ ಸದಸ್ಯರ 35 ನೇ ವರ್ಷದ ವಾರ್ಷಿಕ ಮಹಾಸಭೆಯು ಡಿಸೆಂಬರ್ 3 ರವಿವಾರದಂದು ಅಪರಾಹ್ನ 3-30ಕ್ಕೆ ಸರಿಯಾಗಿ ಸಂಘದ ನೂತನ ಕಾರ್ಯಾಲಯ “9 ಮಾನಸಿ ” ಪ್ರಥಮ ಮಹಡಿ, ಮುಕುಂದ ನಾಥು ಪಥ್, ಗಾಂವ್ದೇವಿ ಮೈದಾನದ ಸಮೀಪ, ನೌಪಾಡಾ, ಥಾಣೆ (ಪಶ್ಚಿಮ) ಇಲ್ಲಿ ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಅಂದು ಗತ ಮಹಾಸಭೆಯ ವರದಿ ವಾಚನ ಮತ್ತು ಅಂಗೀಕಾರ ಹಾಗೂ ಆಡಳಿತ ಮಂಡಳಿ ಒಪ್ಪಿಸುವ 2022 – 23ರ ಅವಧಿಯ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲ್ಪಟ್ಟ ಲೆಕ್ಕ ಪತ್ರಗಳ ಅಂಗೀಕರಿಸುವುದಲ್ಲದೆ ಸದಸ್ಯರ ಸಲಹೆ ಸೂಚನೆ ಸಭಾಧ್ಯಕ್ಷರ ಭಾಷಣ ಸೇರಿದಂತೆ ಮಹಾಸಭೆಯ ಕಾರ್ಯಕಲಾಪಗಳು ಜರಗಲಿವೆ ಎಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ ತಿಳಿಸಿದ್ದಾರೆ.
ಮುಂಬಯಿ ಮಹಾನಗರ ಮತ್ತು ಉಪನಗರಗಳ ಶಾಲಾ-ಕಾಲೇಜುಗಳಲ್ಲಿ ಅಥವಾ ಯಾವುದೇ ವಿಶ್ವ ವಿದ್ಯಾಲಯಗಳಲ್ಲಿ 2022 – 23ನೇ ಶೈಕ್ಷಣಿಕ ವರ್ಷಾಂತಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪರಸ್ಕಾರ ಮತ್ತು ಅಸಹಾಯಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ನಿಟ್ಟಿನಲ್ಲಿ ಅರ್ಜಿ ಅಹ್ವಾನಿಸಲಾಗಿದ್ದು ಮತ್ತು ಸಂಘದ ವಾರ್ಷಿಕೋತ್ಸವದಂದು ಸದಸ್ಯರು ಹಾಗೂ ಸದಸ್ಯರ ಮಕ್ಕಳಿಗಾಗಿ ಗಾನ-ನೃತ್ಯ ವೈಭವದ ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡಿದ್ದು ಅದಕ್ಕಾಗಿ ಅರ್ಹ ವಿದ್ಯಾರ್ಥಿಗಳು ಪ್ರತಿಭಾ ಪರಸ್ಕಾರ ಮತ್ತು ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಲು ಹಾಗೂ ಗಾನ-ನೃತ್ಯ ವೈಭವದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಆಸಕ್ತಿ ಇರುವ ಪ್ರತಿಭಾವಂತರು ಹೆಸರು ನೋಂದಾಯಿಸಲು ಡಿಸೆಂಬರ್ 3 ಅಂತಿಮ ದಿನವಾಗಿದ್ದು ಆಮೇಲೆ ಬಂದ ಅರ್ಜಿ ಮತ್ತು ಹೆಸರನ್ನು ಸ್ವೀಕರಿಸಲಾಗುವುದಿಲ್ಲ. ಇದು ಕೇವಲ ಸಂಘದ ಸದಸ್ಯರು ಮತ್ತು ಸದಸ್ಯರ ಮಕ್ಕಳಿಗೆ ಸೀಮಿತವಾಗಿರುತ್ತದೆ.
ಈ ಕುರಿತು ವಿವರವಾದ ಮಾಹಿತಿ ಒಳಗೊಂಡ ಸಂಘದ ವಾರ್ಷಿಕ ವರದಿಯನ್ನು ಸದಸ್ಯರಿಗೆ ಈಗಾಗಲೇ ಅಂಚೆಯ ಮುಖಾಂತರ ಕಳುಹಿಸಲಾಗಿದ್ದು ವರದಿಯ ಪ್ರತಿ ಸಿಗದೆ ಇರುವ ಸದಸ್ಯರು ಮತ್ತು ವಿಳಾಸ ಬದಲಾಯಿಸಿದ ಸದಸ್ಯರು ಸಂಘದ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದೆಂದು ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಮತ್ತು ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್ ತಿಳಿಸಿದ್ದಾರೆ.
ಸದಸ್ಯರೆಲ್ಲರೂ ಸಕಾಲದಲ್ಲಿ ಆಗಮಿಸಿ ಮಹಾಸಭೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದರೊಂದಿಗೆ ಮಹಾಸಭೆಯನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಗೌರವಾಧ್ಯಕ್ಷರಾದ ಸುರೇಶ ಎಸ್. ಪೂಜಾರಿ, ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ, ಉಪಾಧ್ಯಕ್ಷರುಗಳಾದ ನರಸಿಂಹ ಎಂ. ಬಿಲ್ಲವ, ಆನಂದ ಕೆ. ಪೂಜಾರಿ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಗೌರವ ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಜೊತೆ ಕಾರ್ಯದರ್ಶಿಗಳಾದ ಸುಶೀಲಾ ಆರ್. ಪೂಜಾರಿ, ಹರೀಶ ಎನ್. ಪೂಜಾರಿ, ಜೊತೆ ಕೋಶಾಧಿಕಾರಿಗಳಾದ ರಮೇಶ ಜಿ. ಬಿಲ್ಲವ, ರತ್ನಾಕರ ಎಸ್. ಪೂಜಾರಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.

.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಅಥವಾ ಸದಸ್ಯರನ್ನು (9869071413/9867811733/9820718785) ಸಂಪರ್ಕಿಸುವಂತೆ ಸಂಘದ ಪ್ರಕಟಣೆ ತಿಳಿಸಿದೆ.

Related posts

ಫೆ. 25 : ಗೋರೆಗಾಂವ್ ಕರ್ನಾಟಕ ಸಂಘದ 63ನೇ ನಾಡಹಬ್ಬ, ವಿಚಾರಗೋಷ್ಠಿ, ಕೃತಿ ಬಿಡುಗಡೆ

Mumbai News Desk

ಗೊರೆಗಾಂವ್‌ ಪೂರ್ವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಜು21: ಗುರುಪೂರ್ಣಿಮಾ  ಆಚರಣೆ,

Mumbai News Desk

ಶ್ರೀ ಶನೀಶ್ವರ ಮಹತೋಭಾರ ದೇವಸ್ಥಾನ ಮಲಾಡ್ ಪೂರ್ವ ಕುರಾರ್ ವಿಲೇಜ್. ಶನಿ ಕಥೆ ಪ್ರವಚನ ಮತ್ತು  ಗ್ರಂಥ ವಾಚನ ಶಿಕ್ಷಣ ತರಬೇತಿ – 

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ : ದೀಪಾವಳಿ ಹಬ್ಬದ ಪ್ರಯುಕ್ತ ಭಜನಾ ಸಂಕೀರ್ತನೆ

Mumbai News Desk

ಹವ್ಯಕ ವೆಲ್ಫೇರ್ ಟ್ರಸ್ಟ್ ನ ಸಂಯೋಜನೆಯಲ್ಲಿ ಜು. 28ಕ್ಕೆ ಯಕ್ಷಗಾನ ಪ್ರದರ್ಶನ

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಅ.17ಕ್ಕೆ 66ನೇ ಮಂಗಲೋತ್ಸವ.

Mumbai News Desk