



ಕಲ್ಯಾಣ್ ಪಶ್ಚಿಮದ ಜಯರಾಮ ಮಾಲಿ ಕಾಂಪ್ಲೇಸ್ ಶಾಪ್ ನಂ. 6, 2ನೇ ಮಾಳಿಗೆ, ಕಮರ್ಶಿಯಲ್, ತಿಸ್ತಾಂವ್ ನಾಕ ಮಾರ್ಗ ದಲ್ಲಿರುವ ಕರ್ನಾಟಕ ಮಿತ್ರ ಮಂಡಳಿ (ರಿ) ಇದರ ವತಿಯಿಂದ ಸಾಮೂಹಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ ವು ಶನಿವಾರ ದಿನಾಂಕ 25-11-2023 ರಂದು ವಿಠಲ ಮಂದಿರ, ಚಿಕಿಪಾಡ ಮಾರ್ಗ, ಶಿವಾಜಿ ಕಾಲನಿ, ಕಲ್ಯಾಣ್ (ಪೂ) ದಲ್ಲಿ ಜರುಗಲಿದೆ.
.
ಆ ಪ್ರಯುಕ್ತ ಬೆಳಿಗ್ಗೆ 10.30 ಕ್ಕೆ ಸರಸ್ವತಿ ಪೂಜೆ ಹಾಗೂ ಮೆರವಣಿಗೆ, 11.30ಕ್ಕೆ ಶ್ರೀ ಚಿಕ್ಕಮ್ಮದೇವಿ ಪೂಜೆ ನಡೆಯಲಿದೆ.
ಅಪರಾಹ್ನ 2.00 ಕ್ಕೆ ಕಲಶ ಪ್ರತಿಷ್ಠ ನಡೆದು, 2.15 ಕ್ಕೆ ಶನಿಗ್ರಂಥ ಪಾರಾಯಣಕ್ಕೆ ಭಾರತ್ ಕೊ-ಆಪ್, ಬ್ಯಾಂಕ್ ಮುಂಬೈ ಲಿ. ನ ಕಾರ್ಯಾಧ್ಯಕ್ಷರಾದ ಶ್ರೀ ಸೂರ್ಯಕಾಂತ್ ಜಯ ಸುವರ್ಣ ಚಾಲನೆ ನೀಡಲಿರುವರು.
2.30 ಕ್ಕೆ : ವೆಸ್ಟನ್ ಇಂಡಿಯ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ, ಇವರಿಂದ ಗ್ರಂಥ ಪಾರಾಯಣ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ನಡೆಯಲಿದೆ. ರಾತ್ರಿ 8.00 ಕ್ಕೆ ಮಂಗಳ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆದು 9.00 ಕ್ಕೆ ಅನ್ನ ಸಂತರ್ಪಣೆಯು ದಿವಾಕರ ಸಾಲ್ಯಾನ್ ಹಾಗೂ ಕುಟುಂಬಸ್ತರು, ಮೋಹೋನೆ ಇವರ ವತಿಯಿಂದ, ನಡೆಯಲಿದೆ.
ಭಕ್ತಾಭಿಮಾನಿಗಳು ಈ ಸಂದರ್ಭದಲ್ಲಿ ರೂ. 501/- ನ್ನು ನೀಡಿ
ಶ್ರೀ ಶನಿ ದೇವರಿಗೆ ವಿಶೇಷ ಪೂಜೆಯನ್ನು ಅರ್ಪಿಸ ಬಹುದು,
ಎಲ್ಲಾ ಭಕ್ತಾಭಿಮಾನಿಗಳು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಶನೀಶ್ವರ ದೇವರ ದೇವರ ಕೃಪೆಗೆ ಪತ್ರರಾಗಬೇಕಾಗಿ ಗೌ, ಅಧ್ಯಕ್ಷರಾದ ಶ್ರೀ ಶ್ರೀಧರ ಪೂಜಾರಿ, ಅಧ್ಯಕ್ಷರಾದ ಶ್ರೀ ದಿವಾಕರ ಆರ್. ಸಾಲ್ಯಾನ್, ಗೌ. ಪ್ರ. ಕಾರ್ಯದರ್ಶಿ ಶ್ರೀ ಪುರುಷೋತ್ತಮ ಎಂ. ಪೂಜಾರಿ, ಗೌ. ಪ್ರ. ಕೋಶಾಧಿಕಾರಿ ಶ್ರೀ ಪ್ರಶಾಂತ್ ಎಸ್. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ದೇವಕಿ ಆರ್. ಪೂಜಾರಿ, ಕಾರ್ಯದರ್ಶಿ ಶ್ರೀಮತಿ ಪ್ರೀತಿ ಆರ್. ಪೂಜಾರಿ, ಕೋಶಾಧಿಕಾರಿ ಶ್ರೀಮತಿ ಸುಜಾತ ಕೋಟ್ಯಾನ್ ಹಾಗೂ ಕಾರ್ಯಕಾರಿ ಸಮಿತಿಯ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.