July 23, 2026
Mumbai News Kannada
ಪ್ರಕಟಣೆ

ಸೆ.20 : ಮಾತೃಭೂಮಿ ಕೋ -ಆಪರೇಟಿವ್ ಕ್ರೆಡಿಟ್ ಸೊಸೈಟಿ ಇದರ 37ನೇ ವಾರ್ಷಿಕ ಮಹಾಸಭೆ







ಮುಂಬೈ, ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಇದರ 37ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 20 ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ಕುರ್ಲಾ ಪೂರ್ವದ ಬಂಟರ ಭವನ ರಾಧಾಬಾಯಿ ಭಂಡಾರ ಸಭಾಗೃಹದಲ್ಲಿ ಮಾತೃಭೂಮಿ ಸೊಸೈಟಿ ಕಾರ್ಯಾಧ್ಯಕ್ಷರಾಗಿರುವ ಉಳ್ತೂರು ಮೋಹನದಾಸ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಅಂದಿನ ಮಹಾಸಭೆಯಲ್ಲಿ ಬಂಟರ ಸಂಘದ ಅಧ್ಯಕ್ಷ ಹಾಗೂ ಮಾತೃಭೂಮಿ ಸೊಸೈಟಿ ನಿರ್ದೇಶಕರಾದ ಪ್ರವೀಣ್ ಭೋಜ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಅಡ್ವೊಕೇಟ್ ಡಿ. ಕೆ. ಶೆಟ್ಟಿ, ಮಾತೃಭೂಮಿಯ ಉಪಕಾರ್ಯಾಧ್ಯಕ್ಷರಾದ ಡಾ. ಆರ್.ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರು, ಗೌರವ ಖಜಾಂಚಿ ಸಿಎ ಹರೀಶ್ ಡಿ. ಶೆಟ್ಟಿ, ನಿರ್ದೇಶಕರಾದ ಮಹೇಶ್ ಎಸ್. ಶೆಟ್ಟಿ, ಶಶಿಧರ್ ಕೆ. ಶೆಟ್ಟಿ ಇನ್ನಂಜೆ, ಸಿಎ, ಜಗದೀಶ್ ಬಿ. ಶೆಟ್ಟಿ, ಸುನಂದಾ ಡಿ. ಶೆಟ್ಟಿ, ಸಿಎ, ರಾಜೇಶ್ ಜಿ. ಶೆಟ್ಟಿ, ಮಾತೃಭೂಮಿಯ ಸಲಹಾ ಸಮಿತಿ ಸದಸ್ಯರು, ಮಾಜಿ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಮಾತೃಭೂಮಿ ಸಂಸ್ಥೆಯು ಮುಂಬೈಯ ಆರ್ಥಿಕ ಕೋ-ಆಪರೇಟಿವ್ ಸೊಸೈಟಿಗಳಲ್ಲಿ ತಾನು ಸಾಧಿಸಿದ ಸ್ಥಾನಮಾನದಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗುತ್ತ ಜನಮನ ಗೆದ್ದಿದೆ. ಸಂಸ್ಥೆಯನ್ನು ಆರ್ಥಿಕವಾಗಿ ಶಕ್ತಿಗೊಳಿಸಿ, ಅದರ ಅಭಿವೃದ್ದಿಗೆ ಕಾರಣರಾದ ಸಂಸ್ಥೆಯ ಸ್ಥಾಪನೆಯಿಂದ ಇಂದಿನವರೆಗಿನ ಕಾರ್ಯಾಧ್ಯಕ್ಷರು, ಆಡಳಿತ ನಿರ್ದೇಶಕರು ಹಾಗೂ ಸಲಹಾ ಸಮಿತಿಯ ಸದಸ್ಯರ ಸೇವೆ ಮರೆಯುವಂತಿಲ್ಲ.

ಮಾತೃಭೂಮಿಯ ಸ್ಥಾಪಕ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಕೆ. ಶೆಟ್ಟಿ, ಆನಂತರ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಭಜಂಗ ಎಂ. ಶೆಟ್ಟಿ, ದಿವಂಗತ ಸತ್ಯರಾಮ ಶೆಟ್ಟಿ ಕಡಂದಲೆ, ಶರತ್ ರಾಮ್ ಜಿ. ಶೆಟ್ಟಿ, ಕೆ.ಡಿ. ಶೆಟ್ಟಿ, ಸಿಎ ಶಂಕರ್ ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡೆಕಾರು, ಪ್ರಸ್ತುತ ಕಾರ್ಯಾಧ್ಯಕ್ಷರಾಗಿರುವ ಉಳ್ತೂರು ಮೋಹನದಾಸ್ ಶೆಟ್ಟಿ ಇವರ ಅದೆಮಾತು ಉತ್ಸಾಹ, ಪರಿಶ್ರಮದಿಂದ ಅಂದು ಸ್ಥಾಪಿಸಲಾದ ಈ ಸಂಸ್ಥೆಯು 1.19 ಲಕ್ಷದ ಸ್ಥಿರ ಷೇರು ಬಂಡವಾಳ ಮತ್ತು 612 ಸದಸ್ಯರಿಂದ ಪ್ರಾರಂಭಗೊಂಡು 2025 ಮಾರ್ಚ್ 31ರ ಲೆಕ್ಕಪರಿಶೋಧಕರ ವರದಿಯಂತೆ ಶೇರು ಬಂಡವಾಳ 25.61 ಕೋಟಿ, ಒಟ್ಟು ಸಂಗ್ರಹ ರೂ. 37.71 ಕೋಟಿ, ಒಟ್ಟು ಠೇವಣಿ ರೂ. 170.20 ಕೋಟಿ, ಒಟ್ಟು ಸ್ಥಾವರ ಹಾಗೂ ಮುಂಗಡ ರೂ. 189.93 ಕೋಟಿ, ನಿವ್ವಳ ಮೌಲ್ಯ ರೂ. 60.13 ಕೋಟಿಗೆ ತಲುಪಿದೆ. ಮಾತೃಭೂಮಿ ಸಂಸ್ಥೆಯ ಕಾರ್ಯವ್ಯಾಪ್ತಿ ಮುಂಬೈ ಮಹಾನಗರ ಹಾಗೂ ಉಪನಗರದ ಸಕಿನಾಕಾ, ಥಾಣೆ, ಸ್ಥಾಯಿ, ವಾಶಿ, ಕುರ್ಲಾ (ಪೂ), ಪುಣೆ, ನಾಸಿಕ್, ರಾಯಗಡ ಜಿಲ್ಲೆಗಳಿಗೂ ವಿಸ್ತರಿಸಿದೆ.

ಆಡಳಿತ ಮಂಡಳಿಯ ನಿರ್ಧಾರದ ಪ್ರಕಾರ, ಡಿವಿಡೆಂಡ್ ಅನ್ನು ಷೇರುದಾರರ ವಿಳಾಸಕ್ಕೆ ಕಳುಹಿಸದೆ ನೇರವಾಗಿ ಷೇರುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಡಿವಿಡೆಂಡ್ ಪಡೆಯಲು ಷೇರುದಾರರು ತಮ್ಮ KYC ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಕಡ್ಡಾಯವಾಗಿ ನವೀಕರಿಸಲು ವೆಬ್‌ಸೈಟ್: www.matrubhumisociety.com ಮೂಲಕ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಮೊಬೈಲ್ ಸಂಖ್ಯೆ 7400187906 / 8828800735ನ್ನು ಸಂಪರ್ಕಿಸಲು ಕೋರಲಾಗಿದೆ.



Related posts

ದೊಡ್ಡಣ್ಣ ಗುಡ್ಡೆ  ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ , ಮೇ 2 :: ಶ್ರೀ ಕುಬೇರ ಲಕ್ಷ್ಮಿ ಪ್ರತಿಷ್ಠಾವರ್ಧಂತಿ 

Mumbai News Desk

ಎ. 25ರಂದು ಮೂಡುಶೆಡ್ಡೆಯಲ್ಲಿ ಕಟೀಲು ಮೇಳದಿಂದ 44ನೇ ವರ್ಷದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಸೇವೆ

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನ: ಏಪ್ರಿಲ್ 10 ಮತ್ತು 11 ರಂದು ವರ್ಧಂತಿ ಪಲ್ಲಕ್ಕಿ ಉತ್ಸವ, ನೇಮೋತ್ಸವ

Mumbai News Desk

ಮೀರಾರೋಡ್, ಜ: 11: ಬಂಟ್ಸ್ ಫೋರಂ ಮೀರಾ-ಬಾಯಂಧರ್ ಇದರ ಮಹಿಳಾ ಸಮಿತಿಯ ವಾರ್ಷಿಕ ಭಜನಾಮಂಗಳೋತ್ಸವ ಕಾರ್ಯಕ್ರಮ

Mumbai News Desk

ಫೆ. 04 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣಾ ಶಿಬಿರ.

Mumbai News Desk

ಕಲ್ಯಾಣ್‌ನಲ್ಲಿ ಇಂದು ಮಹಿಳಾ ದಿನಾಚರಣೆ ಮತ್ತು ಸಾಂಸ್ಕೃತಿಕ ಸಂಭ್ರಮ

Mumbai News Desk