
ಮೀರಾರೋಡ್ ನ 24. ಮೀರಾರೋಡ್ ಮೀರಾ ಗಾಂವ್ ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ವಾರ್ಷಿಕ ಶ್ರಿ ಅಯ್ಯಪ್ಪ ಮಹಾಪೂಜೆಯು ನ 27.ರ ಸೋಮವಾರ ಸಂಜೆ ಜರಗಲಿದೆ.
.
ಅಂದು ಸಂಜೆ 6.00 ರಿಂದ 7.00.ರ ವರೆಗೆ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಹಾಗೂ 7.00 ರಿಂದ 8 ರವರೆಗೆ ಶ್ರಿ ಜಯಶೀಲ ಗುರುಸ್ವಾಮಿಯವರ ನೇತೃತ್ವದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8 ಘಂಟೆಗೆ ಕಾರ್ತಿಕ ದೀಪೋತ್ಸವ ತದನಂತರ ಪಡಿಪೂಜೆ, , ತೀರ್ಥಪ್ರಸಾದ, ಅನ್ನದಾನ ಸೇವೆ ನಡೆಯಲಿರುವುದು.
ಭಕ್ತರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ಮಹಾಲಿಂಗೇಶ್ವರ ದೇವರ ಹಾಗೂ ಶ್ರಿ ಅಯ್ಯಪ್ಪನ ಕೃಪೆಗೆ ಪಾತ್ರರಾಗಬೇಕಾಗಿ ಬೇಕಾಗಿ ದೇವಸ್ಥಾನದ ಸ್ಥಾಪಕರು, ದಿ. ವಿಶ್ವನಾಥ್ ಪೂಂಜ ಪರಿವಾರಮತ್ತು ಕೃಷ್ಣ ಶೆಟ್ಟಿ ಮತ್ತು ಆಡಳಿತ ಟ್ರಸ್ಟಿ, ಶಿಮಂತೂರು ಮಜಲ ಗುತ್ತು
ಬಾಬಾ ರಂಜನ್ ಶೆಟ್ಟಿ, ಟ್ರಸ್ಟಿ, ಸಾಣೂರು ಸಾಂತಿಂಜ ಜನಾರ್ಧನ ಭಟ್ ,ಪ್ರಧಾನ ಅರ್ಚಕ ಮಾಧವ ಭಟ್,, ಹಾಗೂ ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ ನ ಪದಾಧಿಕಾರಿಗಳು, ಮೀರಾ ಸೊಸೈಟಿಯ ಸರ್ವ ಸದಸ್ಯರು. ವಿನಂತಿಸಿಕೊಂಡಿದ್ದಾರೆ.