
ಪಾಂಗಾಳ ಗ್ರಾಮದವರಾದ ರಾಮಣ್ಣ ಪೂಜಾರಿ (86)ಸ್ವಲ್ಪ ಕಾಲದ ಅಸೌಖ್ಯದಿಂದ ಪಾಂಗಾಳದ ಸ್ವಗೃಹ ದಲ್ಲಿ ನಿಧನ ಹೊಂದಿದರು, ಮೃತರ ಪತ್ನಿ ಓರ್ವ ಪುತ್ರ ಈ ಹಿಂದೆಯೇ ಮೃತರಾಗಿದ್ದು, ಮೂವರು ಪುತ್ರರು ಹಾಗೂ ಒಬ್ಬರು ಪುತ್ರಿಯನ್ನು ಅಗಲಿದ್ದಾರೆ, ಶಂಕರಪುರ ಪೇಟೆಯಲ್ಲಿ ಸುಮಾರು 60ವರುಷಗಳ ಸುದೀರ್ಘ ಟೈಲರ್ ವೃತ್ತಿಯೊಂದಿಗೆ ರಾಮಣ್ಣ ಟೈಲರ್ ಎಂದೇ ಪ್ರಸಿದ್ದಿ ಪಡೆದು ನಲವತ್ತು ವರುಷಗಳ ಹಿಂದೆ ಅಶ್ವತ್ತಕಟ್ಟೆ ಸ್ಥಾಪಿಸಿ ನಿತ್ಯ ನಿರಂತರ ಪೂಜೆ ಕೈಂಕರ್ಯದೊಂದಿಗೆ ಗಂಟೆ ಬಾರಿಸಿ ಪಕ್ಷಿಗಳಿಗೆ ಆಹಾರ ನೀಡುವುದು ಅವರ ದಿನಚರಿ ಆಗಿತ್ತು, ಹಲವು ವರ್ಷ ಸ್ವತ: ಶ್ರೀ ಅಯ್ಯಪ್ಪ ಮಾಲಾಧಾರಣೆ ಮಾಡಿ ಶಿಬಿರದಲ್ಲಿ ಸೇವೆ ನೀಡಿರುವುದಲ್ಲದೆ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಕೂಡ ಸಕ್ರಿಯರಾಗಿದ್ದರು, ಪೇಟೆ ಯಲ್ಲಿ ಯಾರಾದರೂ ಅನಾಥರು ಸಿಕ್ಕಿದಲ್ಲಿ, ತನ್ನಲ್ಲಿ ಇದ್ದುದರಲ್ಲಿ ಅವರಿಗೆ ನೀಡಿ ಉಪಚರಿಸುತಿದ್ದರು,
ಅವರ ನಿಧನಕ್ಕೆ ಅಯ್ಯಪ್ಪ ಭಕ್ತ ವೃಂದ ಮುಂಬಯಿಯ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಹಾಗೂ ಶಿಷ್ಯಂದಿರು, ಹಾಗೂ ಇನ್ನಂಜೆ, ಪಾಂಗಳ, ಶಂಕರಪುರ ಪರಿಸರದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.