
ಉಡುಪಿ ಪೇಜಾವರ ಮಠದ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರ 60ನೇ ಜನ್ಮವರ್ದಂತಿ ಸಂಭ್ರಮವು ಡಿ.3 ರಂದು ಮುಂಬೈಯಲ್ಲಿ ಜರಗಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ನ.23 ರಂದು ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸಭಾಗ್ರಹದಲ್ಲಿ ನಡೆಯಿತು.
ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ. ಎಸ್.ರಾವ್ ಪ್ರಸ್ತಾವಣೆಗೈದರು.
ಕಾರ್ಯದ್ಯಕ್ಷ ಡಾ.ಸುರೇಶ್ ಎಸ್.ರಾವ್, ಕಾರ್ಯದರ್ಶಿ ಬಿ.ಆರ್.ಗುರುಮೂರ್ತಿ, ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ ,ಡಾ ಎಂ.ಸೀತಾರಾಮ್ ಆಳ್ವ, ವಿದ್ವಾನ್ ಕೆ.ಕ್ರಷ್ಣರಾಜ್ ತಂತ್ರಿ, ಕೈರೆಬೆಟ್ಟು ವಿಶ್ವನಾಥ್ ಭಟ್ ,ಶ್ರೀ ಅದಮಾರು ಮಠ ಮುಂಬೈ ಶಾಖೆಯ ವ್ಯವಸ್ಥಾಪಕ ವಿ.ರಾಜೇಶ್ ರಾವ್, ಶ್ರೀ ಸುಬ್ರಹ್ಮಣ್ಯ ಮಠ ಮುಂಬೈ ಶಾಖೆಯ ವ್ಯವಸ್ಥಾಪಕ ವಿಷ್ಣು ಕಾರಂತ್ ,ಪರೇಲ್ ಶ್ರೀನಿವಾಸ ಭಟ್, ವಿಷ್ಣುತೀರ್ಥ ಸಾಲಿ ಉಪಯುಕ್ತ ಸಲಹೆ-ಸೂಚನೆ ನೀಡಿದರು.
ಈ ಸಂಧರ್ಭದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಮಿತಿಯೊಂದನ್ನು ರಚಿಸಲಾಯಿತು.ಸಮಿತಿಯ ಅಧ್ಯಕ್ಷರಾಗಿ ಡಾ.ಸೀತಾರಾಮ ಆಳ್ವ, ಕಾರ್ಯಧ್ಯಕ್ಷರಾಗಿ ಅರುಣಾ ನಾಗೇಂದ್ರ ಆಚಾರ್ಯ, ಕಾರ್ಯದರ್ಶಿಗಳಾಗಿ ಕೆ.ಕೃಷ್ಣರಾಜ ತಂತ್ರಿ, ವಿದ್ವಾನ್ ಪೇರ್ಣಂಕಿಲ ಹರಿದಾಸ ಭಟ್, ಡಾ.ರಾಮದಾಸ ಉಪಧ್ಯಾಯ ರೆಂಜಾಳ, ಜತೆ ಕಾರ್ಯದರ್ಶಿಯಾಗಿ ಭನೇಂದ್ರ ಧರ್ಮಗ್ನಿ ಇವರನ್ನು ಆಯ್ಕೆ ಮಾಡಲಾಯಿತು.
ರಾಘವೇಂದ್ರ ಆಚಾರ್ಯ, ಬಿ.ವಿವೇಕ್ ಶೆಟ್ಟಿ, ಆನಂದ ಎಂ.ಶೆಟ್ಟಿ, ಪದ್ಮನಾಬ ಪಯ್ಯಡೆ, ನಿತ್ಯಾನಂದ ಡಿ.ಕೋಟ್ಯಾನ್, ಎನ್. ಸಿ.ಶೆಟ್ಟಿ, ಡಾ.ಮನೋಜ್ ಹುನ್ನೂರು, ಡಾ.ಪಿ.ವಿ.ಶೆಟ್ಟಿ, ಬಡನಿಡಿಯೂರು ರಮಾನಂದ ರಾವ್, ಶೇಖರ ಜೆ.ಸಾಲ್ಯಾನ್, ಎನ್.ಬಿ.ಎಚ್.ಕುಲಕರ್ಣಿ, ಬಿ.ಕೆ.ಸಿಂಗ್, ಮಾಧವಿ ಕುಲಕರ್ಣಿ, ಟಿ ಎಸ್.ಉಪದ್ಯಾಯ, ಉಮೇಶ್ ರಾವ್, ಬಂಟ್ವಾಳ ಉಮೇಶ್ ಶೆಟ್ಟಿ, ಮಾಹುಲಿ ವಿದ್ಯಾಸಿಂಹಾಚಾರ್ಯ, ವಿದ್ವಾನ್ ಪ್ರಹ್ಲಾದಾಚಾರ್ಯ ನಾಗರ ಹಳ್ಳಿ, ಹಾಗೂ ಮುಂಬೈಯ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಮುಖ್ಯಸ್ಥರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ವಿದ್ವಾನ್ ವಿಶ್ವೇಶ್ವರ ಭಟ್ ಅವರನ್ನು ಯಾಜ್ಞಿಕ ಸಮಿತಿಯ ಮುಖ್ಯಸ್ಥರನ್ನಾಗಿ ಹಾಗೂ ಮುಂಬೈಯ ವಿವಿಧ ಮಠಗಳ ವ್ಯವಸ್ಥಾಪಕರನ್ನು ,ಪುರೋಹಿತರನ್ನು ಸಮಿತಿಯ ಸದಸ್ಯರಾಗಿ ನೇಮಿಸಲಾಯಿತು.
ಸಭೆಯಲ್ಲಿ ಕುಲಾಲ ಸಂಘ ಮುಂಬೈ ಯ ಅಧ್ಯಕ್ಷ ರಘು ಎ ಮೂಲ್ಯ, ವಿವಿಧ ಮಠ, ದೇವಸ್ಥಾನಗಳ ವ್ಯವಸ್ಥಾಪಕರು, ಮುಖ್ಯಸ್ಥರು, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿಯ ಸದಸ್ಯರು, ಪೇಜಾವರ ಮಠ ಮುಂಬೈ ಶಾಖೆಯ ಪ್ರಬಂಧಕ ನಿರಂಜನ ಗೋಗ್ತೆ, ಉಪಸ್ಥಿತರಿದ್ದರು. ಡಾ.ರಾಮದಾಸ ಉಪದ್ಯಾಯ ಸ್ವಾಗತಿಸಿ, ನಿರೂಪಣೆ ಮಾಡಿ, ವಂದಿಸಿದರು.