24.7 C
Karnataka
April 3, 2025
ಪ್ರಕಟಣೆ

ಡಿ. 3 : ಕುಲಾಲ ಸಂಘ ಮುಂಬಯಿ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ – ಸನ್ಮಾನ – ಯಕ್ಷಗಾನ-ಸಾಂಸ್ಕೃತಿಕ ಕಾರ್ಯಕ್ರಮ



ಮುಂಬಯಿ : ಪ್ರತಿಷ್ಠಿತ ಕುಲಾಲ ಸಂಘ ಮುಂಬಯಿ ಇದರ ಮೀರಾ ರೋಡ್ – ವಿರಾರ್ ಸ್ಥಳಿಯ ಸಮಿತಿ ಯ ೧೯ನೇ ವಾರ್ಷಿಕ ಸ್ನೇಹ ಸಮ್ಮಿಲನವು ಡಿ. ೩ ರವಿವಾರ ಬೆಳಿಗ್ಗೆ. ೯ರಿಂದ ಸಂಜೆ ೫.೩೦ರ ವರಗೆ `ಶೆನಾಯ್ ಬ್ಯಾಂಕ್ವೆಟ್ ಹಾಲ್’, ಬೈರವಿ ಕಾಂಪ್ಲೆಕ್ಸ್, ಕನಕ್ಯೀಯ ರೋಡ್, ಮೀರಾ ರೋಡ್ (ಪೂ) ಇಲ್ಲಿ ಕುಲಾಲ ಸಂಘ ಮುಂಬಯಿ ಅಧ್ಯಕ್ಷರಾದ ರಘು ಎ. ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ಹಾಗೂ ಸಂಘದ ಗೌರವ ಅಧ್ಯಕ್ಷರಾದ ಪಿ. ದೇವ್‌ದಾಸ್ ಎಲ್. ಕುಲಾಲ್ ಮತ್ತು ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರ ಉಪಸ್ಥಿತಿ ಹಾಗೂ ಸ್ಥಳೀಯ ಸಮಿತಿಯ ಕಾರ್ಯಕಾರಿ ಮಂಡಳಿಯ ಉಸ್ತುವಾರಿಯಲ್ಲಿ ಜರಗಲಿದೆ.

ಸಭಾಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಸುಂದರ್ ಕೆ. ಮೂಲ್ಯ ಮೀರಾ ರೋಡ್, (ಮಾಜಿ ಕಾರ್ಯಾಧ್ಯಕ್ಷರು, ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿ – ಕುಲಾಲ ಸಂಘ, ಮುಂಬಯಿ), ಆಶೋಕ ಆರ್. ಮೂಲ್ಯ, ಬ್ರಹ್ಮಾನಂದ ಥಾಣೆ (ಸಿ.ಎಮ್.ಡಿ., ಅಯ್ಯ ಪ್ಯಾಕರ್ಸ್ & ಮೋವರ್ಸ್), ಸಂಜಯ ರಾಜು ಕುಂದರ್, ವಿಕ್ರೋಲಿ (ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ – (ಲೀಗಲ್) & ಕಂಪೆನಿ ಸೆಕ್ರಟರಿ, ಅಪರ್ ಇಂಡಸ್ಟಿçÃಸ್ ಲಿ.), ಜಗದೀಶ್ ಆರ್. ಬಂಜನ್, ಅಂಬರ್‌ನಾಥ್ (ಜಯದೀಪ್ ಕನಸ್ಟೆçಕ್ಷನ್ಸ್, ಅಂಬರ್‌ನಾಥ್), ಸುನಿಲ್ ಆರ್. ಸಾಲ್ಯಾನ್, (ಉದ್ಯಮಿ, ಭಾಯ್ಕಲ, ಮುಂಬಯಿ), ಪದ್ಮನಾಭ ಬಂಗೇರ, ಮೀರಾ ರೋಡ್ (ಉದ್ಯಮಿ) ಇವರು ಆಗಮಿಸಲಿರುವರು. ಅಂದು ಪರಿಸರದ ಎಸ್.ಎಸ್.ಸಿ.ಯಿಂದ ಡಿಗ್ರಿ ವೃತ್ತಿಪರ ಶಿಕ್ಷಣದಲ್ಲಿ ಉತ್ತೀರ್ಣರಾದ ಪರಿಸರದ ಕುಲಾಲ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಿಸಲಾಗುವುದು. ಅಲ್ಲದೆ ಸಂಘದ ಹಿರಿಯ ಕಾರ್ಯಕರ್ತರಾದ ಗಿರೀಶ್ ಬಿ. ಸಾಲ್ಯಾನ್, ದಾದರ್ (ಚೆಯರ್‌ಮ್ಯಾನ್, ಜ್ಯೋತಿ ಕೋ-ಆಪ್. ಕ್ರೆಡಿಟ್ ಸೊಸೈಟಿ ಲಿ.) ಸುಂದರ್ ಕೆ. ಮೂಲ್ಯ (ಮಾಜಿ ಕಾರ್ಯಾಧ್ಯಕ್ಷರು, ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿ), ಚಂದು ಕೆ. ಮೂಲ್ಯ, ವಿರಾರ್ (ಮಾಜಿ ಉಪ ಕಾರ್ಯಾಧ್ಯಕ್ಷರು, ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿ ), ಇವರನ್ನು ಗಣ್ಯರ ಉಪಸ್ಥಿಯಲ್ಲಿ ಸನ್ಮಾನಿಸಲಾಗುವುದು.

ಬೆಳಿಗ್ಗೆ ಗಂಟೆ ೯ ರಿಂದ ೧೦ ಭಜನೆ – ಗುರುವಂದನಾ ಭಜನಾ ಮಂಡಳಿಯ ಸದಸ್ಯರಿಂದ, ಸೋಲೋ ನೃತ್ಯ ಹಾಗೂ ಫ್ಯಾನ್ಸಿಡ್ರೆಸ್, ಪುಟಾಣಿ ಮಕ್ಕಳಿಂದ, ೧೧ ರಿಂದ ಸಭಾ ಕಾರ್ಯಕ್ರಮ, ಮಧ್ಯಾಹ್ನ ೧.೦೦ ರಿಂದ ಪ್ರೀತಿ ಭೋಜನ, ಅಪರಾಹ್ನ ೨.೦೦ ರಿಂದ ಸದಸ್ಯರ ಬಾಲಕಲಾವಿದರಿಂದ ನಾಗೇಶ್ ಪೊಳಲಿಯವರ ನಿರ್ದೇಶನದಲ್ಲಿ ಯಕ್ಷಗಾನ : ಅಗ್ರ ಪೂಜೆ (ಪೌರಾಣಿಕ ಪ್ರಸಂಗ) ಭಾಗವತರು : ನಾದಲೋಲ ಶ್ರೀ ಲಕ್ಷ್ಮೀನಾರಾಯಣ ಶೆಟ್ಟಿ ಚೆಂಡೆ: ಶ್ರೀ ಪ್ರವೀನ್ ಶೆಟ್ಟ, ಕಟೀಲು, ಮದ್ದಲೆ : ಹರೀಶ್ ಸಾಲ್ಯಾನ್ ಚಕ್ರತಾಳ : ಶ್ರೀ ಪ್ರೀತೇಶ್ ಬಿ. ಮೂಲ್ಯ.

ನಂತರ ಮಹಿಳಾ ವಿಭಾಗದ ಸದಸ್ಯೆಯವರಿಂದ, ಸದಸ್ಯರಿಂದ ಹಾಗೂ ಯುವ ವಿಭಾಗದವರಿಂದÀ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿರುವುದು ಎಂದು ಸಮಿತಿಯ ಕಾರ್ಯಾಧ್ಯಕ್ಷ ಶಂಕರ್ ವೈ. ಮೂಲ್ಯ, ಉಪಕಾರ್ಯಾಧ್ಯಕ್ಷ ಮೋಹನ್ ಬಂಜನ್, ಕಾರ್ಯದರ್ಶಿ ನ್ಯಾ| ಉಮನಾಥ್ ಮೂಲ್ಯ, ಕೋಶಾಧಿಕಾರಿ ಸತೀಶ್ ಬಂಗೇರ, ಜೊತೆ ಕಾರ್ಯದಶಿಗಳಾದ ಉಮೇಶ್ ಎಂ. ಬಂಗೇರ, ಸದಾನಂದ ಪಿ. ಸಾಲ್ಯಾನ್, ಜೊತೆ ಕೋಶಾಧಿಕಾರಿ ಚಂದ್ರಹಾಸ್ ಮೂಲ್ಯ, ಉಮೇಶ್ ಬಂಗೇರ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣ ಎಸ್. ಮೂಲ್ಯ, ಯೋಗಿಶ್ ಬಂಗೇರÀ, ಸಮಿತಿ ಸದಸ್ಯರಾದ ರಘು ಸಿ. ಮೂಲ್ಯ, ರಾಜೀವ್ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಂದ್ರಾವತಿ ಎಸ್. ಸಾಲ್ಯಾನ್, ಉಪ ಕಾರ್ಯಾಧ್ಯಕ್ಷೆ ರೇಣುಕಾ. ಸಾಲ್ಯಾನ್, ಕಾರ್ಯದರ್ಶಿ, ಪ್ರಮೀಳಾ ಬಂಜನ್, ಕೋಶಾಧಿಕಾರಿ ಜಯಂತಿ ಯು. ಬಂಗೇರ, ಜೊತೆ ಕಾರ್ಯದರ್ಶಿ ಸುಜಾತ ಆರ್. ಸಾಲ್ಯಾನ್, ಜೊತೆ ಕೋಶಾಧಿಕಾರಿ ಅರ್ಚನಾ ಎಸ್. ಕುಲಾಲ್, ಜೊತೆ ಕಾರ್ಯದರ್ಶಿ ನಳಿನಿ ವಿ. ಬಂಜನ್, ಯುವ ವಿಭಾಗದ ಮಯೂರ್ ವೈ. ಸಾಲ್ಯಾನ್, ಮೇಘಾ ಎಂ. ಬಂಜನ್, ನಿಶ್ಚಿತಾ ಆರ್. ಬಂಗೇರ ಹಾಗೂ ಗುರುವಂದನಾ ಭಜನಾ ಮಂಡಳಿಯ ಕಾರ್ಯಾಧ್ಯಕ್ಷ , ಅರ್ಚಕ ಯಶೋಧರ ಬಂಗೇರ, ಕಾರ್ಯದರ್ಶಿ ಅದ್ಯಪಾಡಿ ವಾಮನ್ ಡಿ. ಮೂಲ್ಯ, ಕೋಶಾಧಿಕಾರಿ ರೋಹಿತ್ ಕೆ. ಬಂಜನ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕರುನಾಡ ಸಿರಿ – ಏಪ್ರಿಲ್ 14ಕ್ಕೆ ವಾರ್ಷಿಕ ಕ್ರೀಡಾಕೂಟ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿ ಡೊಂಬಿವಲಿ ಜ.4 ರಂದು  ಸಾಮೂಹಿಕ ಶ್ರೀ ಶನೀಶ್ವರ ಪೂಜೆ

Mumbai News Desk

ಇಂದು :ನ್ಯೂ ಪನ್ವೇಲ್ ನ ಶ್ರೀ ಜೈ ಅಂಬೇ ಮಾತಾ ಮಂದಿರ ದ ಲ್ಲಿ ಶ್ರೀ ರಾಮ ಮಹೋತ್ಸವ ಕಾರ್ಯಕ್ರಮ.

Mumbai News Desk

ಫೆ.25 : ಗೋರೆಗಾಂವ್ ಕರ್ನಾಟಕ ಸಂಘ 63ನೇ ನಾಡಹಬ್ಬ, ವಿಚಾರ ಗೋಷ್ಠಿ.

Mumbai News Desk

ಮಲಾಡ್ ಕನ್ನಡ ಸಂಘದ ಆಶ್ರಯದಲ್ಲಿ ಡಿ. 29 ರಂದು ಸದಸ್ಯ ಬಾಂಧವರಿಗೆ ಮತ್ತು ಮಕ್ಕಳಿಗಾಗಿ ಒಳಾಂಗಣ ಕ್ರೀಡಾಕೂಟ

Mumbai News Desk

ಜ.6 ರಂದು ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಶಂಕರಪುರ ಇದರ 38ನೇ ವರ್ಷದ ವಾರ್ಷಿಕ ಮಹಾಪೂಜೆ

Mumbai News Desk