July 23, 2026
Mumbai News Kannada
ಪ್ರಕಟಣೆ

ಡಿ. 03. ಥಾಣೆಯಲ್ಲಿ ಪ್ರಸಾದ್ ಪೂಜಾರಿ ಕಲ್ಯಾ ಇವರ ಸೇವೆಯಲ್ಲಿ ಮಂತ್ರ ದೇವತೆಯ 6ನೇ ವಾರ್ಷಿಕ ಪೂಜೆ ಹಾಗೂ ನೇಮೋತ್ಸವ







​ಮುಂಬಯಿಯ ಹೋಟೆಲ್ ಉದ್ಯಮಿ, ಸಮಾಜ ಸೇವಕ ಮತ್ತು ಥಾಣೆ ವೈಶಾಲಿ ನಗರದ ನಿವಾಸಿಗಳಾದ ಪ್ರಸಾದ್ ಪೂಜಾರಿ ಕಲ್ಯಾ ಹಾಳೆಕಟ್ಟೆ ಹಾಗೂ ಪ್ರಮೀಳಾ ಪೂಜಾರಿ ಇವರ ಸೇವೆಯಲ್ಲಿ, ಮಂತ್ರ ದೇವತೆಯ 6ನೇ ವರ್ಷದ ವಾರ್ಷಿಕ ಪೂಜೆ ಹಾಗೂ ನೇಮೋತ್ಸವವು ಡಿ. 03, ಬುಧವಾರದಂದು ವೈಶಾಲಿ ನಗರದಲ್ಲಿ ನಡೆಯಲಿದೆ.

​ಈ ಧಾರ್ಮಿಕ ಕಾರ್ಯಕ್ರಮವು ಶ್ರೀನಗರ ಪೊಲೀಸ್‌ ಸ್ಟೇಷನ್ ಹತ್ತಿರದ ನಿಶಿಗಂಧ ಕೋ.ಆಪ್. ಹೌಸಿಂಗ್ ಸೊಸೈಟಿಯಲ್ಲಿ ನೆರವೇರಲಿದೆ.

ಕಾರ್ಯಕ್ರಮಗಳ ವಿವರ:

​ದೇವತಾ ಕಾರ್ಯಕ್ರಮಗಳು ಬೆಳಿಗ್ಗೆ 6.00 ಗಂಟೆಗೆ ಕಲಶಾಭಿಷೇಕದೊಂದಿಗೆ ಪ್ರಾರಂಭವಾಗಲಿವೆ. ನಂತರ 8.00 ಗಂಟೆಗೆ ಗಣಹೋಮ ಮತ್ತು 10.00 ಗಂಟೆಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಪೂಜೆ ಜರುಗಲಿದೆ. ಮಧ್ಯಾಹ್ನ 1.00 ಗಂಟೆಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.

​ಮಧ್ಯಾಹ್ನ 2.00 ಗಂಟೆಯಿಂದ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5.00 ಗಂಟೆಗೆ ಮಂತ್ರದೇವತೆಯ ಬಾಲು ಭಂಡಾರ ಮೆರವಣಿಗೆ ನಡೆಯಲಿದೆ. ರಾತ್ರಿ 6.00 ಗಂಟೆಗೆ ಕುಣಿತ ಭಜನೆ ಹಾಗೂ 7.00 ಗಂಟೆಗೆ ಮಂತ್ರದೇವತೆಯ ಗಗ್ಗರ ಸೇವೆಯೊಂದಿಗೆ ಪೂಜಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

​ಕಾರ್ಯಕ್ರಮದ ದರ್ಶನ ಸೇವೆಯನ್ನು ದೈವಪಾತ್ರಿಯಾಗಿ ಕಟಪಾಡಿ ಸನ್ನಿದ್ ಪೂಜಾರಿಯವರು ನೆರವೇರಿಸಲಿದ್ದಾರೆ. ಬೋಳ ಜಗ್ಗು ಬಳಗದವರಿಂದ ನರತನ ಸೇವೆ, ಮಂಗಲದಿ ಮಠದ ಜಗದೀಶ್ ಮೂಲ್ಯಯವರು ಮಧ್ಯಸ್ಥರಾಗಿ, ಮತ್ತು ಹರೀಶ ಪೂಜಾರಿ ಹಾಗೂ ತಂಡದಿಂದ ವಾಲಗದ ಸೇವೆ ನಡೆಯಲಿದೆ. ಗಣಹೋಮ ಮತ್ತು ಸತ್ಯನಾರಾಯಣ ಪೂಜೆಯನ್ನು ಶ್ರೀಕಾಂತ್ ಭಟ್ ಬಳಗದವರು ನಡೆಸಿಕೊಡಲಿದ್ದಾರೆ.

​ಪ್ರಸಾದ್ ಪೂಜಾರಿ ಕಲ್ಯಾ ಹಾಳೆಕಟ್ಟೆ ಮತ್ತು ಪ್ರಮೀಳಾ ಪೂಜಾರಿಯವರು ಸಮಸ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ, ದೈವ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9930247335.



Related posts

ಶ್ರೀ ಮಹಾವಿಷ್ಣು ಮಂದಿರ – ಡೊಂಬಿವಲಿ, ತಾ.26 ಮತ್ತು 27 ಅಕ್ಟೋಬರ್ ರಂದು 47ನೇ ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮ

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾಗೇಟ್ ಶಹಾಡ್ : ಎ. 12ರಿಂದ ಎ. 21ರ ತನಕ 63ನೇ ವಾರ್ಷಿಕೋತ್ಸವ, 10ನೇ ಪ್ರತಿಷ್ಠ ವರ್ಧಂತಿ ಉತ್ಸವ.

Mumbai News Desk

ಆಗಸ್ಟ್ 9 ರಂದು ಶ್ರೀ ಜಗದಂಬ ಮಂದಿರ(ರಿ), ದಲ್ಲಿ ನಾಗರ ಪಂಚಮಿ ಉತ್ಸವ

Mumbai News Desk

ಆ. 3 ರಿಂದ ಶ್ರೀ ಜಗದಂಬಾ ಮಂದಿರ, ಡೊಂಬಿವಲಿಯಲ್ಲಿಶರನ್ನವರಾತ್ರಿ ಮಹೋತ್ಸವ.

Mumbai News Desk

ಎ. 5 : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿವತಿಯಿಂದ ಹಸಿರುವಾಣಿ ಹೊರೆಕಾಣಿಕೆ ಪೂರ್ವಭಾವಿ ಸಮಾಲೋಚನಾ ಸಭೆ

Mumbai News Desk

ಶ್ರೀ ವಿಠೋಬ ಗೋಪಾಲಕ್ರಷ್ಣ ಭಜನಾ ಮಂದಿರ ಹೆಜಮಾಡಿ : ಎ. 21(ಇಂದು) ರಂದು ವಾರ್ಷಿಕ ಮಂಗಳೋತ್ಸವ, ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ

Mumbai News Desk