23.5 C
Karnataka
April 4, 2025
ಕರಾವಳಿ

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ -ಕಂಪ್ಯೂಟರ್ ಕೊಡುಗೆ ನೀಡಿದ ರಮ್ಯಾಶ್ರೀ ಪುರಂದರ ಖಾರ್ವಿ




ಕೊಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಆನಂದ ಪೂಜಾರಿ ಕೊಡೇರಿ ನೇತೃತ್ವದಲ್ಲಿ ಕಾರ್ಯ ನಿರತವಾದ ಹಳೆ ವಿದ್ಯಾರ್ಥಿಗಳ ಸಂಘ ಸಾಕಷ್ಟು ಶ್ರಮಿಸುತ್ತಿದ್ದು ಇದೀಗ ಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವಲ್ಲಿ ಯಶಸ್ವಿಯಾದರು. ಶಾಲೆಯ ಹಳೆ ವಿದ್ಯಾರ್ಥಿ ಶ್ರೀಮತಿ ರಮ್ಯಾಶ್ರೀ ಪುರಂದರ ಖಾರ್ವಿ ಅವರು ಆರು ಕಂಪ್ಯೂಟರ್ ನೀಡುವ ಮೂಲಕ ತಾನು ಕಲಿತ ಶಾಲೆಗೆ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಲೆಗೆ 6 ಕಂಪ್ಯೂಟರ್ ಗಳನ್ನು ಹಸ್ತಾಂತರ ಮಾಡಿದರು


ಡಿಸೆಂಬರ್ 1 ರಂದು ಶಾಲೆಯಲ್ಲಿ ನೆಡೆದ ಸರಳ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಶ್ರೀಮತಿ ಶಾಂತಿ ಗೋವಿಂದರಾಜ್ ಹಾಗೂ ದಿವಂಗತ ಕೆ. ಸಿ. ಗೋವಿಂದರಾಜ್ ಅವರ ಸುಪುತ್ರಿ ಶ್ರೀಮತಿ ರಮ್ಯಾಶ್ರೀ ಪುರಂದರ ಅವರು ಶಾಲೆಗೆ ಕಂಪ್ಯೂಟರ್ಗಳನ್ನು ಹಸ್ತಾಂತರ ಮಾಡಿದರು
ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಆನಂದ ಪೂಜಾರಿ ಕೊಡೇರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಹಳೆ ವಿದ್ಯಾರ್ಥಿ ಸಂಘವು ನಮ್ಮ ಹಳೆ ವಿದ್ಯಾರ್ಥಿಗಳ ನೆರವಿನೊಂದಿಗೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಖಾಸಗಿ ಶಾಲೆಗಳಿಗೆ ಸರಿಸಾಟಿ ಎಂಬಂತೆ ಎಲ್ಲ ವಿಧದ ಸೌಲಭ್ಯಗಳನ್ನು ಒದಗಿಸಲು ವರ್ಷಕ್ಕೆ ಸುಮಾರು ಏಳು ಲಕ್ಷ ರೂಪಾಯಿಗೂ ಅಧಿಕ ಮೊತ್ತ ವ್ಯಯಿಸುತ್ತಿದ್ದು ಶಾಲಾ ಮಕ್ಕಳಿಗೆ ವಾಹನದ ವ್ಯವಸ್ಥೆ, ಅತಿಥಿ ಶಿಕ್ಷಕರ ನೇಮಕ, ಆಯಾ ವೇತನ, ಪುಸ್ತಕ ವಿತರಣೆ ಸಂಘದ ಸದಸ್ಯರ ವತಿಯಿಂದ ಸಾಕಾರ ಗೊಂಡಿದ್ದು ಹಾಗೇಯೇ ಇನ್ನೂ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಂಘ ಶ್ರಮಿಸುತ್ತಿದ್ದು ಹಳೆ ವಿದ್ಯಾರ್ಥಿಗಳನ್ನು ಒಟ್ಟು ಗೂಡಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿ ಇರುವ ಈ ಕಾಲದಲ್ಲಿ ಖಾಸಗಿ ಶಾಲೆಗೆ ಸರಿ ಸಮಾನವಾದ ವ್ಯವಸ್ಥೆ ಕಲ್ಪಿಸಿ ಕೊಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮ ಹಳೆ ವಿದ್ಯಾರ್ಥಿಗಳ ಮೇಲಿದೆ ಅದಕ್ಕಾಗಿ ಹಳೆ ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ಹೇಳಿದರು


ಶಾಲೆಗೆ ಕಂಪ್ಯೂಟರ್ಗಳನ್ನು ಹಸ್ತಾಂತರ ಮಾಡಿದ ಶ್ರೀಮತಿ ರಮ್ಯಾಶ್ರೀ ಅವರ ಪತಿ ಪುರಂದರ ಖಾರ್ವಿ ಮಾತನಾಡುತ್ತಾ ಹಿಂದೆ ವಿದ್ಯಾಭ್ಯಾಸದ ಸಲುವಾಗಿ ಸಾಕಷ್ಟು ಕಷ್ಟ ಪಡಬೇಕಾಗಿತ್ತು ನಾವು ಅನುಭವಿಸಿದ ತೊಂದರೆ ಇಂದಿನ ವಿದ್ಯಾರ್ಥಿಗಳು ಅನುಭವಿಸಬಾರದು ಎಂಬ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು ಸಾಕಷ್ಟು ಹಣ ಖರ್ಚು ಮಾಡಿ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲು ಪ್ರಯಾಸ ಪಡುತ್ತಿದ್ದಾರೆ ಅದಕ್ಕಾಗಿ ನಮ್ಮಿಂದಾದ ಅಳಿಲು ಸೇವೆ ಮಾಡಿ ಅವರ ಸರ್ಕಾರಿ ಶಾಲೆ ಉಳಿಸುವ ಹೋರಾಟಕ್ಕೆ ಅವರೊಂದಿಗೆ ಕೈ ಜೋಡಿಸಿದ್ದೇವೆ ಮುಂಬರುವ ದಿನಗಳಲ್ಲಿ ಕೂಡ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದರು


ಹಿರಿಯರಾದ ವಾಸುದೇವ ಕಾರಂತ ಮತ್ತು ನಾರಾಯಣ ಎಮ್. ಕೊಡೇರಿ ಮಾತನಾಡುತ್ತಾ ದಾನಿಗಳು ನೀಡಿದ ಕೊಡುಗೆಯನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು ಅವರು ಸಾಕಷ್ಟು ಪರಿಶ್ರಮದಿಂದ ನಮಗೆ ಕೊಡುಗೆ ನೀಡಿದ್ದಾರೆ ಅದರ ಉಪಯೋಗ ವಿದ್ಯಾರ್ಥಿಗಳಿಗೆ ಲಭಿಸಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಹಾಗೇಯೇ ವಿದ್ಯಾರ್ಥಿಗಳು ಸಹ ತಮಗೆ ದೊರೆತ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು


ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಪೂಜಾರಿ ಕೊಡೇರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಖಾರ್ವಿ, ಕೊಡುಗೈದಾನಿಗಳಾದ ಶ್ರೀಮತಿ ರಮ್ಯಾಶ್ರೀ ಪುರಂದರ ಖಾರ್ವಿ ದಂಪತಿ, ನಿವೃತ್ತ ಮುಖ್ಯೋಪಾಧ್ಯಾಯ ಸದಾಶಿವ ಶಾನಭಾಗ್, ನಿವೃತ್ತ ಉಪನ್ಯಾಸಕ ವಾಸುದೇವ ಕಾರಂತ, ನಿವೃತ್ತ ಅಧಿಕಾರಿ ನಾರಾಯಣ ಎಮ್. ಕೊಡೇರಿ, ಚಂದ್ರ ಪೂಜಾರಿ, ಕೆ. ಶಿವರಾಂ ಖಾರ್ವಿ,
ಚೆನ್ನಕೇಶವ ಕಾರಂತ,ಪ್ರದ್ಯುಮ್ನ ಹೆಬ್ಬಾರ್,ರಾಮ ಪೂಜಾರಿ ಆಳೊಳ್ಳಿ, ರಾಮ ಖಾರ್ವಿ ಸೇರಿದಂತೆ ಹಳೆ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು, SDMC ಸದಸ್ಯರು,ಮತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು ಶಾಲಾ ಮುಖ್ಯೋಪಾಧ್ಯಾಯಿನಿ ಶ್ಯಾಮಲಾ ರಾವ್ ನಿರೂಪಿಸಿ ಕೊನೆಯಲ್ಲಿ ವಂದಿಸಿದರು

Related posts

ನ.21ರಂದು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನ

Mumbai News Desk

ಉಳಿಯ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ50,000 ರೂ. ದೇಣಿಗೆ ಘೋಷಣೆ

Mumbai News Desk

ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಂದ ಕಾಪುವಿನ ಕರಸೇವಕರಿಗೆ ಗೌರವ

Mumbai News Desk

ಇಷ್ಟಾರ್ಥ ಸಿದ್ಧಿಯಿಂದ ಕಾಪು ಮಾರಿಯಮ್ಮನಿಗೆ ಶಿಲಾಸೇವೆ ಅರ್ಪಣೆ ಮಾಡಿದ ಪೌರಕಾರ್ಮಿಕರು ಮತ್ತು ಚಾಲಕರು

Mumbai News Desk

ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದ ಮನವಿ ಬಿಡುಗಡೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿರುದ್ಧ ಕೀಳು ಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟವರ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Mumbai News Desk