
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ 60ನೇ ಷಷ್ಠಿಯಬ್ದ ಶಾಂತಿ ಕಾರ್ಯಕ್ರಮವು ಡಿ.3 ರಂದು ಆದಿತ್ಯವಾರ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.
ಷಷ್ಠಿಯಬ್ದ ಮಹೋತ್ಸವ ಸಮಿತಿ, ಮುಂಬಯಿ ಹಾಗೂ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ,ಪೇಜಾವರ ಮಠ ಮುಂಬೈ , ಇದರ ಜಂಟಿ ಅಯೋಜನೆಯಲ್ಲಿ ನಡೆಯಲಿರುವ ಸ್ವಾಮೀಜಿ ಅವರ ಜನ್ಮವರ್ದಂತಿ ಆಚರಣೆಯು ಬೆಳ್ಳಿಗ್ಗೆ 8 ಗಂಟೆಗೆ ವಿಷ್ಣುಯಾಗದ ಮೂಲಕ ಆರಂಭವಾಗಲಿದೆ.
ಅ ಬಳಿಕ 11.45ಕ್ಕೆ ಸ್ವಾಮೀಜಿ ಅವರಿಂದ ಸಂಸ್ಥಾನ ಪೂಜೆ ಜರಗಲಿದೆ.
12.30ಕ್ಜೆ ತೀರ್ಥ ಪ್ರಸಾದ ವಿತರಣೆಯಾದ ಬಳಿಕ ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ.
ಸಂಜೆ 4 ಗಂಟೆಗೆ ಭವ್ಯ ಮೆರವಣಿಗೆ ನಡೆಯಲಿದೆ .
6 ಗಂಟೆಗೆ ಸ್ವಾಮೀಜಿ ಅವರ ಸನ್ಮಾನ ಕಾರ್ಯಕ್ರಮ ಆರಂಭವಾಗಲಿದೆ.
ತದನಂತರ ಶಾಸ್ತ್ರೀಯ ಸಂಗೀತ, ನ್ರತ್ಯ ಪ್ರಸ್ತುತಗೊಳ್ಳಲಿದೆ.
ರಾತ್ರಿ 8.30 ಕ್ಕೆ ಪ್ರೀತಿ ಭೋಜನದೊಂದಿಗೆ ಒಟ್ಟು ಕಾರ್ಯಕ್ರಮ ಸಮಾಪನಗೊಳ್ಳಲಿದೆ.

ಮುಂಬೈಯ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಂದು ನಡೆಯಲಿರುವ ಎಲ್ಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತ್ತೆ ,ಷಷ್ಠಿಯಬ್ದ ಮಹೋತ್ಸವ ಸಮಿತಿಯ ಕಾರ್ಯದ್ಯಕ್ಷ ಡಾ ಎಂ.ಎಸ್.ಆಳ್ವ, ಕಾರ್ಯಧ್ಯಕ್ಷೆ ಶ್ರೀಮತಿ ಅರುಣಾ ಎನ್. ಆಚಾರ್ಯ, ಅಧ್ಯಕ್ಷ ಡಾ.ಎ ಎಸ್.ರಾವ್, ಕಾರ್ಯಧ್ಯಕ್ಷ ಡಾ.ಸುರೇಶ್ ರಾವ್, ಉಪಾಧ್ಯಕ್ಷರುಗಳು,ಪದಾಧಿಕಾರಿಗಳು, ಕಾಯದರ್ಶಿಗಳಾದ ಕೆ.ಕೆ.ಕೃಷ್ಣರಾಜ ತಂತ್ರಿ, ಪಿ.ಹರಿದಾಸ ಭಟ್, ರಾಮದಾಸ ಉಪದ್ಯಾಯ ಹಾಗೂ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಪೇಜಾವರ ಮಠ ಮುಂಬೈಯ ಎಲ್ಲಾ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : 022 26126614/022 26193648/9892697670 ಸಂಪರ್ಕಿಸಬಹುದು.
.
.