
ಥಾಣೆ ಪಶ್ಚಿಮ ಕಿಸನ್ ನಗರ, ಒಧವ್ ಬಾಗ್ ಸಮೀಪ ಕಳೆದ 23 ವರ್ಷಗಳಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಮಂದಿರವನ್ನು ಸ್ಥಾಪಿಸಿ ,ಆರಾದಿಸಿಕೊಂಡು ಬರುತ್ತಿರುವ ಶ್ರೀ ಅಯ್ಯಪ್ಪ ಸೇವ ಸಮಿತಿಯ 23ನೇ ವಾರ್ಷಿಕ ಮಹಾಪೂಜೆಯು ಡಿ.17 ರಂದು ಕಿಸನ್ ನಗರದ ಒಧವ್ ಬಾಗ್ ಮೈದಾನದಲ್ಲಿ ಜರಗಲಿದೆ.
ಕಾರ್ಯಕ್ರಮದ ವಿವರ :
ಡಿ.16 ರಂದು ಸಂಜೆ 6.15 ಗಂಟೆಗೆ ಶ್ರೀ ಸತ್ಯನಾರಾಯಣ ಮಹಾಪೂಜೆ.
ರಾತ್ರಿ 8 ಗಂಟೆಗೆ, ಪ್ರತಿಭಾ ಪುರಸ್ಕಾರ
8.30ಕ್ಕೆ ತೀರ್ಥ ಪ್ರಸಾದ ವಿತರಣೆ.
9.ಗಂಟೆಗೆ ಬಿಲ್ಲವರ ಎಸೋಸಿಯೇಶನ್ ಥಾಣೆ ಸ್ಥಳೀಯ ಕಚೇರಿ ಹಾಗೂ ನವೋದಯ ಕನ್ನಡ ಸೇವ ಸಂಘದ ಸದಸ್ಯರಿಂದ ಭಜನೆ.
ಆದಿತ್ಯವಾರ, ಡಿ.17 ರಂದು ಬೆಳ್ಳಿಗ್ಗೆ 4.30 ಗಂಟೆಗೆ ನಿತ್ಯ ಶರಣು ಘೋಷ
ಬೆಳ್ಳಿಗ್ಗೆ 8 ಗಂಟೆಗೆ ಪಂಚ್ ಪರಮೇಶ್ವರ ದೇವಸ್ಥಾನದಿಂದ ಡಿಸೋಜ ನಗರ ಮುಖೇನ ಶಿವಾಜಿ ನಗರ ,ಅಲ್ಲಿಂದ ಪೂಜೆ ನಡೆಯುವ ಮೈದಾನಕ್ಕೆ ಮೆರವಣಿಗೆ.
10.30ಕ್ಕೆ ಸಹಸ್ರ ನಾಮಾರ್ಚನೆ
11.30ಕ್ಕೆ ಹೂವಿನ ಪೂಜೆ
12.30ಕ್ಕೆ ಕರ್ಪುರ ಆರತಿ, ಮಹಾ ಆರತಿ.
1 ಗಂಟೆಗೆ ಪ್ರಸಾದ ವಿತರಣೆ ಹಾಗೂ ಮಹಾ ಅನ್ನ ಸಂತರ್ಪಣೆ.
ಡಿ.16 ರಂದು ನಡೆಯುವ ಶ್ರೀ ಸತ್ಯನಾರಾಯಣ ಮಹಾಪೂಜೆ, ಮತ್ತು ಡಿ.17 ರಂದು ಜರಗಲಿರುವ ಶ್ರೀ ಅಯ್ಯಪ್ಪ ಮಹಾಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ,ಶ್ರೀ ಅಯ್ಯಪ್ಪ ಸ್ವಾಮಿಯ ಪ್ರಸಾದ ಸ್ವೀಕರಿಸುವಂತ್ತೆ ,ಸಮಿತಿಯ ಅಧ್ಯಕ್ಷರಾದ ಜಯರಾಮ ಎಸ್.ಪೂಜಾರಿ, ಉಪಾಧ್ಯಕ್ಷ ರಾಜೇಶ್ ರೈ, ಕಾರ್ಯದರ್ಶಿ ರಮೇಶ್ ಎಸ್.ಕೋಟ್ಯಾನ್, ಜತೆ ಕಾರ್ಯದರ್ಶಿ ವಿನಯ ಪಿ.ಸನಿಲ್, ಕೋಶಾಧಿಕಾರಿ ನರೇಶ್ ಬಿ.ಪೂಜಾರಿ, ಜತೆ ಕೋಶಾಧಿಕಾರಿ ಪ್ರಶಾಂತ್ ಕೆ.ಶೆಟ್ಟಿ, ಸಲಹೆಗಾರರಾದ ರಾಜು ಸಫಲಿಗ, ಉತ್ತಮ್ ಎ. ಗಾಂವ್ಕರ್ ,ಸಮಿತಿಯ ಸದಸ್ಯರು, ಪೂಜಾ ಸಮಿತಿಯ ಸದಸ್ಯರು, ಶಿಬಿರದ ಸ್ವಾಮಿಗಳು ವಿನಂತಿಸಿಕೊಂಡಿದ್ದಾರೆ.
.
.
.
.
.
.