September 6, 2026
Mumbai News Kannada
ಪ್ರಕಟಣೆ

ಬಂಟರ ಸಂಘ ಮುಂಬಯಿ ; ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿ  ಜೂ. 16 ರಂದು  ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ವಿದ್ಯಾರ್ಥಿವೇತನ , ದತ್ತು ಸ್ವೀಕಾರ, ವಿಧವಾವೇತನ ,ಅಂಗವಿಕಲರಿಗೆ ಆರ್ಥಿಕ ನೆರವು ವಿತರಣೆ





ಮುಂಬಯಿ, ಜೂ. 12 :  ಬಂಟರ ಸಂಘ ಮುಂಬಯಿ , ಮೀರಾ -ಭಾಯಂದರ್ ಪ್ರಾದೇಶಿಕ  ಸಮಿತಿ ವತಿಯಿಂದ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ, ದತ್ತು ಸ್ವೀಕಾರ , ವಿಧವಾವೇತನ ,ಅಂಗವಿಕಲರಿಗೆ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮವು ಜೂ. 16ರ ರವಿವಾರ ಬೆಳಿಗ್ಗೆ ಗಂಟೆ 11:30 ಕ್ಕೆ ಸರಿಯಾಗಿ  ಭಾರತ ರತ್ನ   ದಿ.  ಲತಾ ಮಂಗೇಶ್ಕರ್ ನಾಟ್ಯ ಸಭಾಗೃಹ, 588- ಮಹಾಜನ್ ವಾಡಿ, ಪ್ರಸಾದ್ ಇಂಟರ್ ನ್ಯಾಶನಲ್ ಹೊಟೇಲ್ ಸಮೀಪ, ಠಾಕೂರು ಮಾಲ್ ಬಳಿ, ಮೀರಾರೋಡ್ ಇಲ್ಲಿ ಆಯೋಜಿಸಲಾಗಿದೆ.

ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ   ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿಯವರ ನೇತೃತ್ವದಲ್ಲಿ , ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ , ಗೌರವ ಪ್ರದಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ ,ಗೌರವ ಕೋಶಾಧಿಕಾರಿ

ಸಿಎ ರಮೇಶ್ ಬಿ. ಶೆಟ್ಟಿ ,ಜೊತೆ ಕಾರ್ಯದರ್ಶಿ  ಗಿರೀಶ್ ಆರ್. ಶೆಟ್ಟಿ ತೆಳ್ಳಾರ್ , ಜೊತೆ ಕೋಶಾಧಿಕಾರಿ ಶಶಿಧರ್ ಕೆ. ಶೆಟ್ಟಿ ಇನ್ನಂಜೆ , ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ಡಾ. ದಿವಕರ ಶೆಟ್ಟಿ , ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ , ಕಾರ್ಯದರ್ಶಿ ಸಿ. ಎಫ್. ಉತ್ತಮ್ ಶೆಟ್ಟಿ , ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ , 

ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ಚಿತ್ರ ಆರ್. ಶೆಟ್ಟಿ , ಯುವ ವಿಭಾಗ ಕಾರ್ಯಧ್ಯಕ್ಷ  ಸವಿನ್ ಜೆ. ಶೆಟ್ಟಿ , ಪಶ್ಚಿಮ ವಲಯ ಸಮನ್ವಯಕ  ಭಾಸ್ಕರ್ ಶೆಟ್ಟಿ ಖಾಂದೇಶ್ ಭಾಗವಹಿಸಲಿದ್ದಾರೆ.

ಮೀರಾ – ಭಾಯಂದರ್ ಪರಿಸರದ ಬಂಟ ಸಮಾಜ ಬಾಂದವರಿಗೆ ಬಂಟರ ಸಂಘದ ಆರ್ಥಿಕ ಸಹಾಯವನ್ನು ಸಕಾಲದಲ್ಲಿ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು ಸದಸ್ಯರು ಸಮಾಜ ಬಾಂಧವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಸಮಿತಿಯ ಸಂಚಾಲಕ ಶಿವ ಪ್ರಸಾದ್ ಶೆಟ್ಟಿ ಮಾಣಿಗುತ್ತು ,

 ಉಪ ಕಾರ್ಯಧ್ಯಕ್ಷ : ಅರವಿಂದ ಎ. ಶೆಟ್ಟಿ ,ಕಾರ್ಯದರ್ಶಿ: ಬಾಬಾ ಪ್ರಸಾದ್ ಅರಸ ಕುತ್ಯಾರು , ಕೋಶಾಧಿಕಾರಿ: ಶಂಕರ್ ಶೆಟ್ಟಿ ಬೋಳ ,ಜೊತೆ ಕಾರ್ಯದರ್ಶಿ: ರಮೇಶ್ ಶೆಟ್ಟಿ ಸಿದ್ದಕಟ್ಟೆ , ಜೊತೆ ಕೋಶಾಧಿಕಾರಿ: ಜಗದೀಶ್ ಶೆಟ್ಟಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ವಸಂತಿ ಎಸ್. ಶೆಟ್ಟಿ , ಯುವ ವಿಭಾಗ ಕಾರ್ಯಧ್ಯಕ್ಷ ವರ್ಷಭ್ ಶೆಟ್ಟಿ , ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದ ಗುತ್ತು , ಸಂಚಾಲಕ ರವಿಕಾಂತ್ ಶೆಟ್ಟಿ ಇನ್ನ ,ಉಪ ಕಾರ್ಯಧ್ಯಕ್ಷ  ದಾಮೋದರ ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ಶೆಟ್ಟಿ , ಕೋಶಾಧಿಕಾರಿ  ಅಮಿತ ಬಿ. ಶೆಟ್ಟಿ ಹಾಗೂ ಸಮಿತಿಯ ಸಹಕಾರದೊಂದಿಗೆ ಜರಗಲಿದೆ. 

ಕಾರ್ಯಕ್ರಮದಲ್ಲಿ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು , ವಿಧವೆಯರು ಹಾಗೂ ಅಂಗವಿಕಲರು ಧನ ಸಹಾಯ ಪಡೆಯಲಿದ್ದಾರೆ . ಈ ಎಲ್ಲಾ ಫಲಾನುಭವಿಗಳ ಸಂಪೂರ್ಣ ವಿವರಗಳು ಪ್ರಾದೇಶಿಕ ಸಮಿತಿಯಲ್ಲಿ ಹಾಗೂ ಬಂಟರ ಸಂಘದಲ್ಲಿ ಲಭ್ಯವಿದ್ದು , ದೂರವಾಣಿಯ ಮೂಲಕ ಅವರೆಲ್ಲರನ್ನೂ  ಈಗಾಗಲೇ ಸಂಪರ್ಕಿಸಿ ಕಾರ್ಯಕ್ರಮದ ಮಾಹಿತಿ ನೀಡಲಾಗಿದೆ . ಈ ಸವಲತ್ತುಗಳನ್ನು ಸ್ವೀಕರಿಸಲಿರುವ 18 ವರ್ಷದ ಮೇಲ್ಪಟ ವಿದ್ಯಾರ್ಥಿಗಳು ಸ್ವತಃ ಹಾಗೂ 18 ವರ್ಷಕ್ಕಿಂತ ಕಿರಿಯ ಮಕ್ಕಳ ಪಾಲಕರು ಬಂಟರ ಸಂಘದ ಸದಸ್ಯರಾಗಿದ್ದು , ಕಡ್ಡಾಯವಾಗಿ ಸದಸ್ಯತ್ವ ಕಾರ್ಡನ್ನು  ಮತ್ತು ಅರ್ಜಿಯ ಪ್ರತಿರೂಪ (Application number) ತೋರಿಸಿ ತಮ್ಮ ಚೆಕ್ ಅನ್ನು ಪಡೆಯ ಬಹುದು.  ಸಮಾಜ ಬಾಂಧವರು  ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

——-



Related posts

ಆಗಸ್ಟ್ 10 : ಬಿಲ್ಲವ ಘಾಟ್ಕೋಪರ್ ಹಾಗೂ ತುಳು ಕೂಟ ಅಸಲ್ಪಾ, ಇದರ ಆಶ್ರಯದಲ್ಲಿ ‘ಘಾಟ್ಕೋಪರ್ ದ ಆಟಿದ ಒಂಜಿ ದಿನ’

Mumbai News Desk

ಸೆ.7 ರಂದು ಕಲ್ಯಾಣ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಭವ್ಯ ಸಮಾರಂಭ

Mumbai News Desk

ಓಂ ಶ್ರೀ ಜಗದೀಶ್ವರಿ ದೇವಸ್ಥಾನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬೊರಿವಲಿಜ.20ಕ್ಕೆ ಸುವರ್ಣ ಮಹೋತ್ಸವದ ನಿಮ್ಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ.

Mumbai News Desk

ಸೆ. 15 ರಂದು ಕನ್ನಡಿಗರ ಸ್ನೇಹ ಬಳಗ ಟ್ರಸ್ಟ್ ಡೊಂಬಿವಲಿಯ ಉದ್ಘಾಟನಾ ಕಾರ್ಯಕ್ರಮ.

Mumbai News Desk

ವಜ್ರ ಮಹೋತ್ಸವದ ಸಂಭ್ರಮದಲ್ಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ,

Mumbai News Desk

ಶಹಾಡ್‌ನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ 64ನೇ ವಾರ್ಷಿಕೋತ್ಸವ: ಏ. 12ರಿಂದ ಧಾರ್ಮಿಕ ಸಂಭ್ರಮ

Mumbai News Desk