———-

ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಚಿಣ್ಣರ ಬಿಂಬಕ್ಕಿಂತ ಮಿಗಿಲಾದ ವೇದಿಕೆ ಇನ್ನೊಂದು ಸಿಗಲಾರದು – ಗೋಪಾಲ್ ಪುತ್ರನ್
ಮುಂಬಯಿ ಡಿ 2. ಚಿಣ್ಣರ ಬಿಂಬ ಮುಂಬೈ ,ನೈರುತ್ಯ ವಲಯ ಮಟ್ಟದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ನವೆಂಬರ್ 26 ರವಿವಾರದಂದು ಮಧ್ಯಾಹ್ನ 4:30ಕ್ಕೆ ಸಂತಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ನಡೆಯಿತು.
ಚಿಣ್ಣರಬಿಂಬ ನೈರುತ್ಯ ವಲಯದ ಮಕ್ಕಳ ಪ್ರತಿಭಾ ಸ್ಪರ್ಧೆಯ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಕಾಂಧಿವಲಿ ಶಿಬಿರದ ಚಿಣ್ಣರ ಪ್ರಾರ್ಥನೆ ಯೊಂದಿಗೆ ಬಂಟ್ಸ್ ಸಂಘ ಮುಂಬೈ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಆಗಿರುವ ಶ್ರೀಮತಿ ಲತಾ ಜಯರಾಮ ಶೆಟ್ಟಿಯವರು ಉದ್ಘಾಟಿಸಿ ಮಾತನಾಡಿ, ನಮ್ಮ ನಾಡಿನ ಭಾಷೆ, ಸಂಸ್ಕೃತಿ ಎಲ್ಲಿಯೂ ಮಕ್ಕಳಿಗೆ ಕಲಿಯ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಚಿಣ್ಣರ ಬಿಂಬ ಸಂಸ್ಥೆಯು ಅದರ ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿದೆ. ವಿವಿಧ ಶಾಖೆಗಳನ್ನು ಹೊಂದಿ ಅದೆಷ್ಟೋ ಚಿಣ್ಣರನ್ನು ಒಗ್ಗೂಡಿಸಿಕೊಂಡು ನಮ್ಮ ನಾಡಿನ ಭಾಷೆ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದೆ. ನಮ್ಮತನವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿರುವ ಈ ಚಿಣ್ಣರ ಬಿಂಬ ಸಂಸ್ಥೆಗೆ ನಾನು ಚಿರಋಣಿಯಾಗಿದ್ದೇನೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸ್ವಾಗತ ಹೋಟೆಲ್ನ ಮಾಲಕರಾದ ಶ್ರೀಯುತ ಮಹೇಶ್ ಶೆಟ್ಟಿಯವರು ಮಾತನಾಡಿ ಮಕ್ಕಳೆಲ್ಲರೂ ಉತ್ತಮವಾಗಿ ಸ್ಪರ್ಧಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. ಮಕ್ಕಳಿಗೆ ಇಲ್ಲಿ ಉತ್ತಮ ಭವಿಷ್ಯವಿದೆ ಎಂದು ನುಡಿದರು.
ಚಿಣ್ಣರ ಬಿಂಬದ ರೂವಾರಿ ಶ್ರೀಯುತ ಪ್ರಕಾಶ್ ಭಂಡಾರಿ ಅವರು ಮಾತನಾಡಿ ಉತ್ತಮವಾಗಿ ಸ್ಪರ್ಧಿಸಿದ ಮಕ್ಕಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಚಿಣ್ಣರ ಬಿಂಬ ಸಂಸ್ಥೆಯ ಬಗ್ಗೆ, ” ಈ ಸಂಸ್ಥೆಯು ಮಕ್ಕಳು ನಿರ್ಭೀತಿಯಿಂದ ತಮ್ಮ ಪ್ರತಿಭೆಯನ್ನು ಹೊರಹೊಮ್ಮಲು ವೇದಿಕೆಯನ್ನು ಕಲ್ಪಿಸಿದೆ. ಕಿರು ಪ್ರಹಸನದ ಮೂಲಕ ಮಕ್ಕಳು ನೈಜ, ಅಭಿನಯವನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರ ರಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ, ಭವಿಷ್ಯದಲ್ಲಿ ನಟ ನಟಿಯರಾಗುವ ಅವಕಾಶವಿದೆ ಎಂದು ನುಡಿಯುತ್ತ, ಅವರನ್ನು ಉತ್ತಮವಾಗಿ ತಯಾರು ಗೊಳಿಸುತ್ತಿರುವ ಪಾಲಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಚಿಣ್ಣರ ಬಿಂಬ ಸಂಸ್ಥೆಯಲ್ಲಿ ಸದಸ್ಯರೆಲ್ಲರೂ ಒಂದೇ ಪರಿವಾರದವರಂತೆ ಒಗ್ಗಟ್ಟಾಗಿ ಶ್ರಮಿಸುತ್ತಿದ್ದಾರೆ. ಎಂದು ಚಿಣ್ಣರ ಬಿಂಬ ಸಂಸ್ಥೆಯ ಸಮನ್ವಯಕಿ ಗೀತಾ ಹೇರಳ ಅವರು ನುಡಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ ಇಕ್ವಿಟಿ ಹೋಟೆಲ್ ಪ್ರವೇಟ್ ಲಿಮಿಟೆಡ್ನ ನಿರ್ದೇಶಕರಾಗಿರುವ ಶ್ರೀ ಗೋಪಾಲ್ ಪುತ್ರನ್ ಇವರು ಮಾತನಾಡಿ 21 ವರ್ಷಗಳಿಂದ ಬೆಳೆಯುತ್ತಾ ಬಂದಿರುವ ಈ ಚಿಣ್ಣರ ಬಿಂಬವು ಇಂದು ಹೆಮ್ಮರವಾಗಿದೆ. ಚಿಣ್ಣರ ಬಿಂಬಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕೆಂದು ಅಪೇಕ್ಷಿಸಿದ್ದೆ ಅದು ಇಂದು ನಿಜವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಚಿಣ್ಣರ ಬಿಂಬ ದಿಂದಾಗಿ ಮುಂಬೈಯಲ್ಲಿ ಮಕ್ಕಳಿಗೆ ಪ್ರತಿಭೆಗೆ ಸಿಗುವಷ್ಟು ವೇದಿಕೆ ಬೇರೆ ಎಲ್ಲೂ ಸಿಗುತ್ತಿಲ್ಲ ಎಂದು ನುಡಿದ ಅವರು ಚಿಣ್ಣರ ಬಿಂಬ ಸಂಸ್ಥೆಯೊಂದಿಗೆ ಅವರ ನಂಟು ಇಪ್ಪತ್ತು ವರ್ಷಗಳಿಂದ ಬೆಳೆದುಕೊಂಡು ಬಂದಿದೆ ಎಂದು ನುಡಿದರು.
ವಲಯ ಮುಖ್ಯಸ್ಥೆ ಶ್ರೀಮತಿ ಆಶಾಲತಾ ದಿನಕರ ಕೊಠಾರಿ ಎಲ್ಲರನ್ನು ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು.
ಹತ್ತನೇ ಹಾಗೂ 12ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ಮಕ್ಕಳನ್ನೂ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ಮಲ್ಲಿಕಾ ಶೆಟ್ಟಿ ನಡೆಸಿಕೊಟ್ಟರು

ವಲಯ ಮುಖ್ಯಸ್ಥರು,ಪ್ರಾದೇಶಿಕ ಮುಖ್ಯಸ್ಥರು,ಶಿಬಿರ ಮುಖ್ಯಸ್ಥರು ಹಾಗೂ ಸಾಂಸ್ಕೃತಿಕ ಮುಖ್ಯಸ್ಥರನ್ನು, ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಸುಮಿತ್ರ ದೇವಾಡಿಗ ನಿರ್ವಹಿಸಿದರು.
ವೇದಿಕೆಯಲ್ಲಿ ರೇಣುಕಾ ಪ್ರಕಾಶ್ ಭಂಡಾರಿ, ಶ್ರೀ ಭಾಸ್ಕರ್ ಶೆಟ್ಟಿ ತಾಳಿಪಾಡಿ ಗುತ್ತು ,,ಶ್ರೀಮತಿ ರತ್ನ ಪ್ರಭಾಕರ್ ಶೆಟ್ಟಿ ಕೇಂದ್ರ ಸಮಿತಿಯ ಶ್ರೀ ರಮೇಶ್ ರೈ, ಶ್ರೀಮತಿ ವನಿತಾ ನೊಂಡ , ಶ್ರೀ ವಿಜಯ್ ಕೋಟ್ಯಾನ್, ಉಪಸ್ಥಿತರಿದ್ದರು.
ಪ್ರತಿಭಾ ಸ್ಫರ್ಧೆ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಶ್ರೀ ಅಮರೇಶ್ ಪಾಟೀಲ್, ಶ್ರೀಮತಿ ಕಲಾ ಭಾಗ್ವತ್, ಶ್ರೀಮತಿ ಸುಶೀಲಾ ದೇವಾಡಿಗ, ಶ್ರೀಮತಿ ದೃಶ್ಯ ಶೆಟ್ಟಿ, ಶ್ರೀಮತಿ ಚೈತ್ರ ಶೆಟ್ಟಿ, ಶ್ರೀಮತಿ ರೇಖಾ ರಾವ್, ಶ್ರೀ ಕರುಣಾಕರ್ ಶೆಟ್ಟಿ, ಶ್ರೀ ಭಾಸ್ಕರ್ ಸುವರ್ಣ, ಶ್ರೀ ರಹೀಂ ಸಚ್ಚೆರಿಪೇಟೆ ಇವರು ಆಗಮಿಸಿದ್ದರು.
ಚಿಣ್ಣರ ಬಿಂಬದ ಮಕ್ಕಳ ಪ್ರಬುದ್ಧ ಅಭಿನಯ ನೋಡಿ ಮೂಕವಿಸ್ಮಿತರಾದೆವು. ನಮ್ಮ ಕಾಲದಲ್ಲಿ ಇಂತಹ ವೇದಿಕೆಗಳು ಸಿಗುತ್ತಿರಲಿಲ್ಲ, ಇಂತಹ ಪ್ರತಿಭೆಗಳು ಇರಲಿಲ್ಲ
ಇಲ್ಲಿಯ ಮಕ್ಕಳು ಅರಳು ಹುರಿದಂತೆ ಮಾತನಾಡುವುದನ್ನು ಕಂಡು ತುಂಬಾ ಸಂತೋಷವಾಯಿತು.
ತೀರ್ಪು ನೀಡಲೆಂದು ಬಂದಿರುವ ನಮಗೆ ಕೆಲವೊಂದು ವಿಷಯಗಳನ್ನು ಈ ಮಕ್ಕಳಿಂದಲೇ ಕಲಿಯುವಂತಾಯ್ತು.
ಹೀಗೆ ಅನೇಕ ಮೆಚ್ಚುಗೆಯ ಮಾತುಗಳು ಈ ಪ್ರತಿಭಾ ಸ್ಪರ್ಧೆಗೆ ತೀರ್ಪುಗಾರರಾಗಿ ಬಂದಿದ್ದವರ ಭಾಷಣದಲ್ಲಿ ಕೇಳಿ ಬಂದವು.
ಬಹುಮಾನ ವಿತರಣೆ ಕಾರ್ಯಕ್ರಮವನ್ನು ಜಗದೀಶ್ ರಾವ್ ನಡೆಸಿಕೊಟ್ಟರು
ತನ್ವೀ ಶೆಟ್ಟಿ, ವೈಷ್ಣವಿ ಸಪಲಿಗ, ಆಶ್ನಾ ಶೆಟ್ಟಿ , ಪವಿತ್ರ ದೇವಾಡಿಗ, ಆರ್ನೈಶ ಶೆಟ್ಟಿ , ಪ್ರತೀಕ್ಷಾ ಪೂಜಾರಿ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಅತಿಥಿಗಳ ಪರಿಚಯವನ್ನು ಚಿಣ್ಣರು ಮತ್ತು ತೀರ್ಪುಗಾರರ ಗೌರವ ಹಾಗೂ ಪರಿಚಯವನ್ನು ಕೇಂದ್ರ ಸಮಿತಿ ಸದಸ್ಯರು ಮಾಡಿದರು.
ಕೇಂದ್ರ ಸಮಿತಿಯ ಸದಸ್ಯರು, ಪೇಜಾವರ ಪ್ರಾದೇಶಿಕ ಸಮಿತಿ ಮತ್ತು ಮತ್ತು ಮೀರಾ -ಭಯಂದರ್ ಪ್ರಾದೇಶಿಕ ಸಮಿತಿಯ ಪಾಲಕರ ಸಹಕಾರದಿಂದಾಗಿ ಕಾರ್ಯಕ್ರಮವು ಸುಂದರವಾಗಿ ಮೂಡಿ ಬಂತು.
ಕನ್ನಡ ಶಿಕ್ಷಕಿಯಾಗಿರುವ ಶ್ರೀಮತಿ ಸುರೇಖಾ ಮೈಲಿ ಅವರು ಧನ್ಯವಾದ ಸಮರ್ಪಿಸಿದರು.
*ವಿಜೇತರಾದ ಮಕ್ಕಳ ಪಟ್ಟಿ*
*2023-2024 ನೇ ಸಾಲಿನ ನೈರುತ್ಯ ವಲಯದ ಮಕ್ಕಳ ಪ್ರತಿಭಾ ಸ್ಪರ್ಧೆಯ ಫಲಿತಾಂಶ*
ದಿನಾಂಕ-26/11/23
*ಚರ್ಚಾಸ್ಪರ್ಧೆ (ಸೀನಿಯರ್)*
ಪ್ರಥಮ – ಸಮನ್ವಿ ಭಟ್ (ಕಾಂದಿವಲಿ)
ದ್ವಿತೀಯ -ತ್ರಿಶಾ ಪೂಜಾರಿ (ಮಲಾಡ್)
ತೃತೀಯ -ತನಿಷಾ ಶೆಟ್ಟಿಗಾರ್( ಪೇಜಾವರ)
*ಭಾಷಣ ಸ್ಪರ್ಧೆ (ಜೂನಿಯರ್)*
ಪ್ರಥಮ – ವಿಸ್ಮಯ್ ಪಾಟ್ಕರ್( ಮಲಾಡ್)
ದ್ವಿತೀಯ -ವೃತಿಕಾ ವಾಘ ಶೆಟ್ಟಿ (ಮಲಾಡ್)
ತೃತೀಯ -ಬಾನ್ವಿ ಭಂಡಾರಿ (ಮೀರಾ ರೋಡ್)
*ಭಾವಗೀತೆ ಸ್ಪರ್ಧೆ (ಸೀನಿಯರ್)*
ಪ್ರಥಮ -ಆರಾಧ್ಯ ಪಿ ಶೆಟ್ಟಿ (ಭಯಂದರ್)
ದ್ವಿತೀಯ -ತನ್ವಿ ಶೆಟ್ಟಿ (ಪೇಜಾವರ)
ತೃತೀಯ -ಸಿಂಚನ ಸುವರ್ಣ(ಮೀರಾ ರೋಡ್)
*ಜಾನಪದ ಗೀತೆ (ಜೂನಿಯರ್)*
ಪ್ರಥಮ -ಅರೋಹಿ ಶೆಟ್ಟಿ (ಭಯಂದರ್)
ದ್ವಿತೀಯ -ವಿಸ್ಮಯ್ ಪಾಟ್ಕರ್( ಮಲಾಡ್)
ತೃತೀಯ -ಪೂರ್ವಿ ಕುಲಾಲ್ (ಗೋರೇಗಾವ್)
*ಭಜನೆ ಸ್ಪರ್ಧೆ*
ಪ್ರಥಮ -ಭಯಂದರ್ ಶಿಬಿರ
ದ್ವಿತೀಯ – ಮೀರಾ ರೋಡ್ ಶಿಬಿರ
ತೃತೀಯ -ಕಾಂಧಿವಲಿ ಶಿಬಿರ
*ಕಿರು ಪ್ರಹಾಸನ*
ಪ್ರಥಮ -ಭಯಂದರ್ ಶಿಬಿರ
ದ್ವಿತೀಯ -ಮೀರಾ ರೋಡ್ ಶಿಬಿರ
*ಪಾಲಕರ ಸಮೂಹ ಗೀತೆ*
ಪ್ರಥಮ -ಕಾಂದಿವಲಿ ಶಿಬಿರ
ದ್ವಿತೀಯ -ಭಯಂದರ್ ಶಿಬಿರ
ತೃತೀಯ -ಮಲಾಡ್ ಶಿಬಿರ
*ಜಾನಪದ ನೃತ್ಯ ಸ್ಪರ್ಧೆ*
ಪ್ರಥಮ -ಮೀರಾ ರೋಡ್ ಶಿಬಿರ
ದ್ವಿತೀಯ -ಮಲಾಡ್ ಶಿಬಿರ
ತೃತೀಯ – ಕಾಂದಿವಲಿಶಿಬಿರ
,,,,,,,,,,———–
ಚಿನ್ನದ ಬಿಂಬದ ಮೂಲಕ ಚಿನ್ನರಲ್ಲಿ ಹೊಸ ಸ್ಪೂರ್ತಿ ತುಂಬಿದೆ,,:
ಮಂಜುನಾಥ್ ಶೆಟ್ಟಿ ಕೊಡ್ಲಾಡಿ
ಗೌರವಾನ್ವಿತ ಅತಿಥಿಯಾದ ವಸಯಿ ದಾಹಣು ಪ್ರಾದೇಶಿಕ ಸಮಿತಿ ಬಂಟ್ಸ್ ಸಂಘ ಮುಂಬೈ ಇದರ ಉಪಾಧ್ಯಕ್ಷರಾಗಿರುವ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಇವರು ಮಾತನಾಡುತ್ತಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವ ಈ ಶುಭ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಮಕ್ಕಳು , ಪಾಲಕರು ಮತ್ತು ಪದಾಧಿಕಾರಿಗಳ ಶ್ರಮ ಈ ಕಾರ್ಯಕ್ರಮದಲ್ಲಿ ಕಂಡು ಬರುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಅತ್ಯಂತ ಸಂತೋಷ ವಿಷಯ ಎಂದು ನುಡಿದರು. ವಸಯಿ ಯಲ್ಲಿ ಚಿಣ್ಣರ ಬಿಂಬ ಶಾಖೆಯನ್ನು ಮತ್ತೆ ಪ್ರಾರಂಭಿಸ ಬೇಕೆಂದು ವಿನಂತಿಸಿದರು.
.
.
.
.