
ಥಾಣೆ, ಡಿ 4- ಥಾಣೆ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ನ.30 ರಂದು ಗುರುವಾರ , ನಿಶಿಗಂಧ, ಕೋ – ಆಪ್ ಹೌಸಿಂಗ್ ಸೊಸೈಟಿ, ಶ್ರೀನಗರ ಪೊಲೀಸ್ ಸ್ಟೇಶನ್, ವೈಶಾಲಿನಗರ, ಥಾಣೆ ಇಲ್ಲಿ ಜರಗಿತು.
ಅಂದು ಬೆಳಿಗ್ಗೆ ಮೆರವಣಿಗೆಯಲ್ಲಿ ಮಂತ್ರದೇವತೆಯ ಭಂಡಾರ ನೂತನ ಗೃಹಕ್ಕೆ ಆಗಮನ, ಸಂಜ ಶ್ರೀಕಾಂತ್ ಭಟ್ ಬಳಗದವರಿಂದ ಸುದರ್ಶನ ಹೋಮ, ವಾಸ್ತು ಬಲಿ, ವಾಸ್ತು ಪೂಜೆ ನಡೆಯಿತು.
ಮರುದಿನ ಡಿ.1 ರಂದು ಶುಕ್ರವಾರ ಬೆಳಿಗ್ಗೆ ಮಂತ್ರದೇವತೆಯ ಪುನಃಪ್ರತಿಷ್ಠೆ, ಬಳಿಕ ಗಣಹೋಮ, 1ಯ ನಂತರ ಶ್ರೀ ಸತ್ಯನಾರಾಯಣ ಪೂಜೆ ಮಹಾಪೂಜೆ, ಅಪರಾಹ್ನ ಮಂತ್ರದೇವತೆಯ ವಾರ್ಷಿಕ ದರ್ಶನ ಸೇವೆ ಯ ನಡೆಯಿತು.
ದೈವಪಾತ್ರಿಯಾಗಿ ಕಟಪಾಡಿ ಸನ್ನಿದ್ ಪೂಜಾರಿ, ಮಧ್ಯಸ್ಥರಾಗಿ ಊರಿನ ಮಂಗಲ್ಲಿ ಮಠ ಜಗದೀಶ್ ಮೂಲ್ಯರವರು ಸಹಕರಿಸಿದರು..
ಹರೀಶ ಪೂಜಾರಿ ಮತ್ತು ತಂಡದವರು ವಾಲಗ ಸೇವೆಯನ್ನು ನಡೆಸಿದರು.
ಈ ಪೂಜೆಯಲ್ಲಿ ಥಾಣೆ ಪರಿಸರದ ಉದ್ಯಮಿಗಳು ಸಮಾಜ ಸೇವಕರು . ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಾದಿಗಳಿಗೆ ದೈವದ ಸಿರಿಮುಡಿ ಗಂಧಪ್ರಸಾದವನ್ನು ದರೆಗುಡ್ಡೆ ಪ್ರಸಾದ್ ಪೂಜಾರಿ ಹಾಗೂ ಕುಟುಂಬಸ್ಥರು ಹಾಳೆಕಟ್ಟೆ ( ಕಲ್ಮಾ) ನೀಡಿದರು.
.
.