
ವರದಿ: ಉಮೇಶ್ ಕೆ.ಅಂಚನ್.
ಮುಂಬಯಿ, ಡಿ.5: ಅನಿರುದ್ಧ ಉಪಾಸನಾ ಟ್ರಸ್ಟಿನ ಮೀರಾರೋಡ್ ಕನ್ನಡ ಮತ್ತು ಮರಾಠಿ ಉಪಾಸನಾ ಕೇಂದ್ರದ ವತಿಯಿಂದ ಡಿ.3ರಂದು ಮೀರಾರೋಡ್ ಪೂರ್ವದ ಪೆಣ್ಕರ್ವಾಡಾ ಸಾಯಿಬಾಬಾ ಮಂದಿರದ ವಠಾರದಲ್ಲಿ ರಕ್ತ ದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರವು
ಮೀರಾರೋಡ್ ರಾಜೀವ್ ಗಾಂಧಿ ಬ್ಲಡ್ ಬ್ಯಾಂಕಿನ ಸುಮಾರು 12 ಮಂದಿ ಸಿಬ್ಬಂದಿಗಳೊಂದಿಗೆ ಡಾ.ಉಮೇಶ್ ಶಿರೋಡ್ಕರ್ ರವರ ಮೇಲ್ವಿಚಾರಣೆಯಲ್ಲಿ ಬೆಳಿಗ್ಗೆ ಗಂಟೆ 9ರಿಂದ ಸಾಯಂಕಾಲ 5 ಗಂಟೆಯ ತನಕ ನಡೆಯಿತು. ಈ ಶಿಬಿರದಲ್ಲಿ ಸುಮಾರು 150 ಮಂದಿ ರಕ್ತ ದಾನ ಮಾಡಿ 113 ಯೂನಿಟ್ ರಕ್ತ ಸಂಗ್ರಹವಾಗಿತ್ತು. ಇದೇ ರೀತಿ ಮುಂಬಯಿ ಆಸಪಾಸಿನ ಒಟ್ಟು 25 ಉಪಾಸನಾ ಕೇಂದ್ರಗಳಲ್ಲಿ ಶಿಬಿರವು ನಡೆದಿದ್ದು ಸುಮಾರು 2739 ಯೂನಿಟ್ ರಕ್ತವು ಸಂಗ್ರಹಣೆ ಆಗಿದೆ ಎಂದು ಸಂಸ್ಥೆಯ ಮೂಲದಿಂದ ತಿಳಿದು ಬಂದಿದೆ.


.
.
.
.
.