
ಮುಂಬಯಿ : ಕುಲಾಲ ಪ್ರತಿಷ್ಠಾನ ರಿ. ಮಂಗಳೂರು ಇದರ ಆಶ್ರಯದಲ್ಲಿ ಕುಲಾಲ ಸಂಘ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿ, ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ, ಮುಂಡ್ಕೂರು, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್, ಶ್ರೀ ವೀರನಾರಾಯಣ ದೇವಸ್ಥಾನ ಮುಂಬಯಿ ಭಕ್ತರು ಇವರ ಸಂಪೂರ್ಣ ಸಹಕಾರದೊಂದಿಗೆ ಡಿ. 10ರಂದು ರವಿವಾರ ಬೆಳಿಗ್ಗೆ 10:30 ಕ್ಕೆ ಸಂತಾಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ವಿಜಯ ಕಲಾವಿದರು ಕಿನ್ನಿಗೋಳಿ ಇವರ ಈ ವರ್ಷದ ಸೂಪರ್ ಹಿಟ್ ತುಳು ನಾಟಕ “ಪಿರಾವುಡು ಒರಿ ಉಲ್ಲೆ . ಜಾಗ್ರತೆ” ಪ್ರದರ್ಶಿಸಲಾಗುತ್ತದೆ.
ಸಭಾಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಖ್ಯಾತ ಪುರೋಹಿತರೂ, ಸಯಾನ್ ಕರ್ನಾಟಕ ಸಂಘದ ಅಧ್ಯಕ್ಷರೂ ಆದ ಡಾ. ಎಂ ಜೆ ಪ್ರವೀಣ್ ಭಟ್ , ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಇದರ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ, ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ರಘು ಎ ಮೂಲ್ಯ ಪಾದೆಬೆಟ್ಟು, ಅಭ್ಯುದಯ ಬ್ಯಾಂಕಿನ ಎಂ. ಡಿ. ಪ್ರೇಮನಾಥ್ ಸಾಲ್ಯಾನ್, ಹೋಟೆಲ್ ಉದ್ಯಮಿ ಪದ್ಮನಾಭ ಬಂಗೇರ, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ ಅಧ್ಯಕ್ಷರಾದ ಹರೀಶ್ ಮೂಲ್ಯ, ಗಣೇಶ್ ಎಂಟರ್ ಪ್ರೈಸಸ್, ಗೋರೆಗಾಂವ್ ನ ಮಾಲಕರು ಅಶೋಕ್ ಸಾಲ್ಯಾನ್,, ಸುರೇಖಾ ರತನ್ ಕುಲಾಲ್ ಉದ್ಯಮಿ, ಉಮೇಶ್ ಬಂಗೇರ, ಕಾರ್ಯದರ್ಶಿ ಕಟ್ಟಡ ನಿರ್ಮಾಣ ಸಮಿತಿ ಕುಲಾಲ ಸಂಘ ಮುಂಬಯಿ, ಆನಂದ ಬಿ. ಮೂಲ್ಯ,ಕಾರ್ಯದರ್ಶಿ ಶ್ರೀ ವೀರನಾರಾಯಣ ದೇವಸ್ಥಾನ ಮುಂಬಯಿ ಸಮಿತಿ, ಯಕ್ಷ ಗುರುನಾಗೇಶ್ ಪೂಳಲಿ ಸ್ಥಾಪಕರು ಯಕ್ಷ ಪ್ರಿಯ ಬಳಗ ಮೀರಾ ರೋಡ್ .ಮಲಾಡ್ ಉಡುಪಿ ಕ್ಯಾಟರ್ಸ್ ಮಾಲಕ ದಿನೇಶ್ ಕಾಮತ್ ಪಾಲ್ಗೊಳ್ಳಲಿದ್ದಾರೆ ಈ ಸಂದರ್ಭದಲ್ಲಿ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಇರಾನಿ ಚಾಲ್ ಮಲಾಡ್ ಪೂರ್ವ ಇದರ ಅಧ್ಯಕ್ಷರಾದ ಮೋಹನ್ ಬಂಗೇರ ಸನ್ಮಾನಿಸಲಾಗುವುದು ಹಾಗೂ ಊರಿನಿಂದ ಆಗಮಿಸಿದ ನಾಟಕ ತಂಡದ ಕುಲಾಲ ಸಮಾಜದ ಪ್ರಭುದ್ದ ಕಲಾವಿದರದ. ಸುರೇಶ್ ಕುಲಾಲ್ ಸಾಣೂರ್. ಸುಧಾಕರ್ ಸಾಲಿಯಾನ್ . ಭಾಸ್ಕರ್ ಕುಲಾಲ್ ಪಕ್ಷಿಗೆರೆ. ನಿತೀಶ್ ಕುಲಾಲ್. ಕೀರ್ತಿಕಾ ಕುಲಾಲ್ ಇವರನ್ನು ಗೌರವಿಸಲಾಗುವುದು.
ಕಲಾಭಿಮಾನಿಗಳಿಗೆ ಉಚಿತ ಪ್ರವೇಶವಿದ್ದು ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಬೇಕಾಗಿ ಕುಲಾಲ ಪ್ರತಿಷ್ಠಾನ ರಿ. ಮಂಗಳೂರು ಇದರ ಅಧ್ಯಕ್ಷ ಬಿ. ಸುರೇಶ್ ಕುಲಾಲ್ ಮಂಗಳಾದೇವಿ, ಮತ್ತು ಟ್ರಷ್ಟಿಗಳು ವಿನಂತಿಸಿದ್ದಾರೆ.
.
.
.
.
.
.