23.5 C
Karnataka
April 4, 2025
ಪ್ರಕಟಣೆ

ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ ಗೋರೆಗಾಂವ್, ಬ್ರಹ್ಮಕಲಶೋತ್ಸವ. ಡಿ.10 ರಂದು  ನೂತನ ಬಿಂಬದ ವೈಭವೋಪೇತ ಮೆರವಣಿಗೆ.



 ಮುಂಬಯಿ ಡಿ.8  . ಗೋರೆಗಾಂವ್ ಪಶ್ಚಿಮದ ಮೋತಿಲಾಲ್ ನಗರ-1 ರಲ್ಲಿ  1973 ನೆಯ ಇಸವಿಯಲ್ಲಿ ಕೈವಲ್ಯ ಶ್ರೀ ಶ್ಯಾಮಾನಂದ ಸ್ವಾಮೀಜಿಯವರಿಂದ ಸಂಸ್ಥಾಪಿಸಲ್ಪಟ್ಟು. ಶ್ರೀ ಶಾಂತದುರ್ಗಾ ದೇವಿಯ ದೇವಸ್ಥಾನವು ಈ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸಲು ಸಜ್ಜಾಗಿ ನಿಂತಿದೆ. ಈ ದೇಗುಲವು ಕಳೆದ ಐವತ್ತು ವರ್ಷಗಳಲ್ಲಿ, ದಿನದಿಂದ ದಿನಕ್ಕೆ ಪ್ರಗತಿಯನ್ನು ಹೊಂದಿ, ಅಸಂಖ್ಯಾತ ಭಕ್ತಾಧಿಗಳನ್ನು ಆಕರ್ಷಿಸಿ,ಒಂದು ದೊಡ್ಡ ಆಸ್ಥಿಕ ಕೇಂದ್ರವಾಗಿ ಬೆಳೆದು ಬಂದಿದೆ. ಇಲ್ಲಿ ಶ್ರೀ ಶಾಂತ ದುರ್ಗಾ ಮಾತೆಗೆ  ತ್ರಿಕಾಲ ಪೂಜೆಯಿದ್ದು ಪ್ರತೀ ಮಂಗಳವಾರದಂದು ಶ್ರೀ ಮಾತೆಯ ಆವೇಶದರ್ಶನದೊಂದಿಗೆ ವಿಶೇಷ ಪೂಜೆಯಿರುತ್ತದೆ. ಇದರೊಂದಿಗೆ ವರ್ಷಂಪ್ರತಿ ವಿಜ್ರಂಭಣೆಯ ನವರಾತ್ರಿ ಉತ್ಸವ, ಪರಿವಾರ ದೈವಗಳಿಗೆ ಅಗೆಲು/ಪನಿಯಾರ ಸೇವೆ ಇತ್ಯಾದಿ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು ಭಕ್ತಾದಿಗಳ ಶ್ರದ್ದಾ ಕೇಂದ್ರವಾಗಿರುತ್ತದೆ.

ಈ ದೇವಸ್ಥಾನದ ಸುವರ್ಣಮಹೋತ್ಸವ ಸಂಭ್ರಮದ ನಿಮಿತ್ತವಾಗಿ 2023 ನೇ ಇಸವಿಯಲ್ಲಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವುಗಳಲ್ಲಿ ಒಂದಾದ ಪ್ರತೀ ಮಂಗಳವಾರದ ಮಂಡಲ ಭಜನೆಯ ಮಂಗಳೋತ್ಸವವು ಈಗಾಗಲೇ ಸಂಪನ್ನಗೊಂಡಿರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳ ಸಮಾರೋಪವು ಇದೇ ಬರುವ  ತಾ. 22.12.2023 ರಿಂದ ಮೊದಲ್ಗೊಂಡು 29.12.2023 ರ ತನಕ ಶ್ರೀ ಶಾಂತದುರ್ಗಾ ಮಾತೆಯ ನೂತನ ಬಿಂಬ ಪ್ರತಿಷ್ಠಾಪನೆಯೊಂದಿಗೆ, ಬ್ರಹ್ಮಕಲಶೋತ್ಸವ, ಪರಿವಾರದ ಶಕ್ತಿಗಳಾದ ತಾಯಿ ವರ್ತೆ, ಧರ್ಮ ದೈವ ಪಂಜುರ್ಲಿ, ಅಪ್ಪೆ ಮಂತ್ರದೇವತೆ , ಕಲ್ಕುಡ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ ಹಾಗೂ ಇತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬಹಳ ಅದ್ಧೂರಿಯಾಗಿ ಜರಗಲಿದೆ

ಇಂತಹ ಪುಣ್ಯ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ದೇವಸ್ಥಾನದ ಆಡಳಿತ ವಿಶ್ವಸ್ಥರಾದ ಶ್ರೀ ಉದಯ ಯಸ್ ಸಾಲಿಯಾನ್ ರವರ ಆಶಯದಂತೆ ಹಲವು ಧಾರ್ಮಿಕ, ಸಾಮಾಜಿಕ ಮುಂದಾಳುಗಳ ಹಾಗೂ ಅನುಭವಿ ಸದ್ಭಕ್ತರಿಂದೊಡಗೂಡಿದ ಬ್ರಹ್ಮಕಲಶೋತ್ಸವ ಸಮಿತಿಯೊಂದನ್ನು ರಚಿಸಲಾಗಿದೆ.ಈ ಸಮಿತಿಯ ಗೌರವ ಅಧ್ಯಕ್ಷರಾಗಿ ಮುಂಬೈಯ ಪ್ರತಿಷ್ಠಿತ ಉದ್ಯಮಿ ಹಾಗೂ ಕೊಡುಗೆೈದಾನಿ ಹುರ್ಲಾಡಿ ಶ್ರೀ ರಘುವೀರ ಶೆಟ್ಟಿ ನಲ್ಲೂರು ಹಾಗೂ ಅಧ್ಯಕ್ಷರಾಗಿ ಸಂಘಟಕ ಶ್ರೀ ರಘುನಾಥ್ ಎನ್ ಶೆಟ್ಟಿ ಕಾಂದಿವಿಲಿ ಆಯ್ಕೆಯಾಗಿರುತ್ತಾರೆ.ಇವರೊಂದಿಗೆ ಎಲ್ಲಾ ಕೆಲಸ ಕಾರ್ಯಗಳನ್ನು ಸಸೂತ್ರವಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗುವಂತೆ ವಿವಿಧ ಹುದ್ದೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ , ಯುವ ವಿಭಾಗ ಹಾಗೂ ಸಲಹಾ ಸಮಿತಿಯನ್ನು ರಚಿಸಲಾಗಿದೆ.

ಶ್ರೀ ಶಾಂತದುರ್ಗಾ ಮಾತೆಯ ನೂತನ ಬಿಂಬವನ್ನು ಅಮೃತ ಶಿಲೆಯಲ್ಲಿ ರಚಿಸಲಿದ್ದು ಅದರ ಕೆತ್ತನೆಯ ಕೆಲಸಕಾರ್ಯಗಳು ಕಳೆದ ಮೂರು ತಿಂಗಳುಗಳಿಂದ ರಾಜಸ್ಥಾನದ ಜಯಪುರದಲ್ಲಿ ನಡೆಯುತ್ತಿದ್ದು,  ಅದರ ನೇತೃತ್ವವನ್ನು ಮುಂಬಯಿಯ  ಸುಪ್ರಸಿದ್ದ ಶಿಲ್ಪಿಗಳಾದ ಶ್ರೀ ಬಲದೇವ ಸಿಂಗ್ ರವರು ವಹಿಸಿಕೊಂಡಿರುತ್ತಾರೆ.ಈಗ ಬಿಂಬವು  ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿದ್ದು ಅದನ್ನು ಮುಂಬಯಿಗೆ ತರಲಾಗಿದೆ. ಬ್ರಹ್ಮಕಲಶೋತ್ಸವ ಮಹೋತ್ಸವದ ವೈದಿಕ ವಿಧಿವಿಧಾನಗಳ ನೇತೃತ್ವವಹಿಸಿರುವ ಮುಂಬಯಿಯ ಖ್ಯಾತ ಪುರೋಹಿತರೂ , ಕ್ಷೇತ್ರದ ಧಾರ್ಮಿಕ ಸಲಹೆಗಾರರೂ ಆದ  ವಿದ್ವಾನ್ ಶ್ರೀ ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನದಂತೆ ನೂತನ ಬಿಂಬವನ್ನು ಸರ್ವಾಲಂಕೃತ ರಥದಲ್ಲಿ ತಾ.10.12.2023 ನೇ ಭಾನುವಾರದಂದು ಸಾಯಂಕಾಲ ದೇವಸ್ಥಾನಕ್ಕೆ ವಾದ್ಯ , ಜಾಗಟೆ, ಕುಣಿತ ಭಜನೆಗಳಿಂದೊಡಗೂಡಿದ ವೈವಿದ್ಯಮಯ ಮೆರವಣಿಗೆಯ ಮೂಲಕ ತರುವುದೆಂದು ನಿರ್ಣಯಿಸಲಾಗಿದೆ.ಆ ಬಳಿಕ ಬಿಂಬದ ಜಲಾಧಿವಾಸ, ಧಾನ್ಯಾಧಿವಾಸ ಮುಂತಾದ ವೈದಿಕ ವಿಧಿವಿಧಾನಗಳು ನೆರವೇರಲಿರುವುದು.

ಈ ಪುಣ್ಯ ಕಾರ್ಯದಲ್ಲಿ ಅತ್ಯದಿಕ ಸಂಖ್ಯೆಯ ಭಕ್ತಾದಿಗಳು ಪಾಲುಗೊಂಡು  ಶ್ರೀ ಶಾಂತದುರ್ಗಾ ಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ ಆಧ್ಯಾತ್ಮ ಗುರುಗಳು ಹಾಗೂ ಮಾರ್ಗ ದರ್ಶಕರಾದ ಶ್ರೀ ಶ್ರೀ ಸುವರ್ಣ ಬಾಬಾ , ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನ, ಪೊವಾಯ್, , ಶ್ರೀಮತಿ ಪದ್ಮಾವತಿ ಯಸ್ ಸಾಲ್ಯಾನ್, (ಆಡಳಿತ ವಿಶ್ವಸ್ಥರು) ಶ್ರೀ ಉದಯ ಯಸ್ ಸಾಲಿಯಾನ್(ಆಡಳಿತ ವಿಶ್ವಸ್ಥರು) ಹುರ್ಲಾಡಿ ರಘುವೀರ ಶೆಟ್ಟಿ ನಲ್ಲೂರು (ಗೌ. ಅಧ್ಯಕ್ಷರು)ರಘುನಾಥ ಯನ್ ಶೆಟ್ಟಿ, ಕಾಂದಿವಲಿ , (ಅಧ್ಯಕ್ಷರು) ಭೋಜ ಯಸ್ ಶೆಟ್ಟಿ , ಕೇದಗೆ, (ಉಪಾಧ್ಯಕ್ಷರು)ಚಂದ್ರಶೇಖರ ಜೆ ಸಾಲಿಯಾನ್ , (ಗೌ. ಕಾರ್ಯದರ್ಶಿ) ಸುಮಂತ್ ಕುಂದರ್ (ಜೊತೆ ಕಾರ್ಯದರ್ಶಿ) ಪ್ರವೀಣ್ ಪುತ್ರನ್ (ಕೋಶಾಧಿಕಾರಿ)ಸಂತೋಷ್ ಕೆ ಶೆಟ್ಟಿ (ಜೊತೆ ಕೋಶಾಧಿಕಾರಿ)ಶ್ರೀ ರವೀಂದ್ರ ಬಿ ಸಾಲಿಯಾನ್ (ಹಿರಿಯ ಸಲಹೆಗಾರರು) ಪ್ರಸಾದ್ ಸಾಲಿಯಾನ್ ಕಲ್ಯಾ (ಧಾರ್ಮಿಕ ಸಲಹೆಗಾರರು), ಸಲಹೆಗಾರರಾದ ರಾಜಾರಾಮ್ ಎ ಪುಜಾರೆ, ರಾಜೇಶ್ ಶಿರ್ಕೆ,ಅನಿಲ್ ಸಾಲಿಯಾನ್ ,ವಿಷ್ಣು ರಾಣೆ,ಧರ್ಮೇಂದ್ರ ಶೆಟ್ಟಿ , ದತ್ತಾ ಕಾನ್ವಿಲ್ಕರ್,ಕಾರ್ಯಕಾರಿ ಸಮಿತಿ ಸದಸ್ಯರಾದ ವಿನಯ ಎ ಪೂಜಾರಿ, ಓಂಕಾರ್ ಜಿ ಶೆಟ್ಟಿ ,ಪ್ರಸಾದ್ ಆರ್ ಶೆಟ್ಟಿ ,ಸುಧೀರ್ ಆರ್ ಕುಂದರ್,ಉದಯ ಬಿ ಸಾಲಿಯಾನ್,ಸಾಯಿ ಪೂಜಾರಿ,ಅಶೋಕ ಶೆಟ್ಟಿ,ಚೇತನ್ ಬಾಂಡ್ಬೆ,ಪ್ರಶಾಂತ್ ಸೌದಾಗರ್,ಮನೀಶ್ ಶೇರುಗಾರ್,ಪ್ರಸಾದ್ ಯಸ್ ಪಾಲನ್,ಗೋಪಾಲ ಪೂಜಾರಿ,ಆನಂದ ಪೂಜಾರಿ, ಬಾಲಕೃಷ್ಣ ಆಚಾರ್ಯ,ಅಜಿತ್ ಹೆಚ್ ಚೌವ್ವಾಣ್, ಮಹಿಳಾ ವಿಭಾಗದ ನ್ಯಾ. ವಿಹಾ ವಿ ರಾಣೆ (ಕಾರ್ಯಾಧ್ಯಕ್ಷೆ ) ಅನುರಾಧಾ ಯಸ್ ಕರ್ಕೇರ (ಕಾರ್ಯದರ್ಶಿ)ವೈಭವಿ ವಿ  ವೈರಾಳೆ (ಕೋಶಾಧಿಕಾರಿ) ಕಾರ್ಯಕಾರಿ ಸಮಿತಿ ಸದಸ್ಯರಾದ ರಶ್ಮಿ ಆರ್ ಪುಜಾರೆ,ಜ್ಯೋತಿ ಯು ಸಾಲಿಯಾನ್, ರಂಜಿತಾ ಯಸ್ ಶೆಟ್ಟಿ,  ವಿಜಯಲಕ್ಷ್ಮಿ ಪಾಂಡೆ,ರಶ್ಮಿ ಆರ್ ಶಿರ್ಕೆ,ಸುಮಿತ್ರ ಯಸ್ ಕುಂದರ್,ಸುಮತಿ ಸಿ ಸಾಲಿಯಾನ್, ವಿಮಲಾ ಯಸ್ ಕುಂದರ್,ನಿರ್ಮಲಾ ಕಾಂಬ್ಳೆ,ಶಾಂತಿ ಎ ಪೂಜಾರಿ,ಲಕ್ಷ್ಮಿ ಪಿ ಶೆಟ್ಟಿ,ಸವಿತಾ ಕುಂದರ್,ಅಶ್ವಿನಿ ಯು ಅಂಗಾರ್ಕೆ,ರೀಮಾ ಪವಾರ್,ವೇದಾ ಜಿ ಶೆಟ್ಟಿ, ಯುವ ವಿಭಾಗದ ಗೋಲು ಯಸ್ ಶುಕ್ಲ,, ಸಾಯಿಪ್ರಸಾದ್ ಯಸ್ ಕುಂದರ್,ಪ್ರಿಯಾಂಕ ನಾಯ್ಕ್ ,ಸಾರ್ಥ್ ಯಸ್ ಶೆಟ್ಟಿ, ದೇವೇಶ್ ಜಿ ಶೆಟ್ಟಿ, ರಾಹುಲ್ ಸಿ ಸಾಲಿಯಾನ್,ಅಕ್ಷಯ್ ಯಸ್ ಮೊಗವೀರ,ರಚನಾ ರೈ,ರಶ್ಮಿ ರೈ,ಸೌಮ್ಯ ವಿ ಪೂಜಾರಿ,ಶಶಾಂಕ್ ಆರ್ ಶೆಟ್ಟಿ, ಪವನ್ ಆರ್ ಶೆಟ್ಟಿ,ರೇಶ್ಮಾ ಯನ್ ಪೂಜಾರಿ, ಸುಮಿತ್ ಆರ್ ಪುಜಾರೆ, ಅಲ್ಕಾ ಎ ಕದಂ ವಿನಂತಿಸಿರುತ್ತಾರೆ .

.

.

.

.

.

.

Related posts

ಮಾ 16 ; ಗೋರೆಗಾಂವ್ ಇರಾನಿ ಕೊಲನಿ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಯ 69ನೇ ವಾರ್ಷಿಕ ಮಹೋತ್ಸವ,

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ ಫಲಿಮಾರು ಹೊಸಾಗ್ಮೆ, ಮೇ 1ಕ್ಕೆ 90ನೇ ವಾರ್ಷಿಕ ಮಂಗಲೋತ್ಸವ, ಶ್ರೀ ದೇವರ ಮೂರ್ತಿ ಪ್ರತಿಷ್ಠಾ ದಿನಾಚರಣೆ

Mumbai News Desk

ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಆರ್ಥಿಕ ಸಹಾಯ:* ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯಿಂದ ಮಾ. 24 ಕ್ಕೆ ಅರ್ಜಿ ವಿತರಣೆ

Mumbai News Desk

ಜುಲೈ 21: ಕುರ್ಲಾ ಬಂಟರ ಭವನದಲ್ಲಿ ಗುರು ಪೂರ್ಣಿಮೆ ಆಚರಣೆ, 

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಮಲಾಡ್ ಸ್ಥಳೀಯ ಕಚೇರಿ ,ಜು 21 ರಂದು ಗುರುಪೂರ್ಣಿಮೆ, ಆಟಿಡೊಂಜಿ ದಿನ, ಕಾರ್ಯಕ್ರಮ.

Mumbai News Desk
ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ