September 6, 2026
Mumbai News Kannada
ಪ್ರಕಟಣೆ

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ : ಮೀರಾ ಭಾಯಂದರ್ ಶಾಖೆಯ ವತಿಯಿಂದ ಜನೆವರಿ 18ರಂದು ‘ಕ್ರೀಡಾಕೂಟ – 2026’





ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ಮೀರಾ-ಭಾಯಂದರ್ ಶಾಖೆಯ ವತಿಯಿಂದ ಸಮಾಜದ ಬಾಂಧವರಿಗಾಗಿ ಹಮ್ಮಿಕೊಳ್ಳಲಾಗಿರುವ ವಾರ್ಷಿಕ ಕ್ರೀಡಾಕೂಟವು ಜನೆವರಿ 18ರ ಭಾನುವಾರದಂದು ಮೀರಾ ರೋಡ್‌ನ ಶಾಂತಿ ನಗರದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ನಡೆಯಲಿರುವ ವಿವಿಧ ಕ್ರೀಡಾ ಸ್ಪರ್ಧೆಗಳು:
ಈ ಕ್ರೀಡಾಕೂಟದಲ್ಲಿ 8 ವರ್ಷದ ಬಾಲಕ-ಬಾಲಕಿಯರಿಂದ ಹಿಡಿದು ಹಿರಿಯ ನಾಗರಿಕರವರೆಗೆ ವಿವಿಧ ವಯೋಮಾನದವರಿಗಾಗಿ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

  • ಮಕ್ಕಳಿಗಾಗಿ: ಚಾಕೊಲೇಟ್ ರೇಸ್, ಕಪ್ಪೆ ಜಿಗಿತ ಹಾಗೂ ಲಿಂಬೆ ಹಣ್ಣು ಚಮಚ ಓಟದಂತಹ ಆಕರ್ಷಕ ಸ್ಪರ್ಧೆಗಳಿವೆ.
  • ಯುವಕ ಹಾಗೂ ಪ್ರೌಢರಿಗಾಗಿ: 100 ಮೀಟರ್ ಓಟ, ಗುಂಡು ಎಸೆತ, ಟೋಂಕಾ ರೇಸ್ ಹಾಗೂ ಸಾಂಪ್ರದಾಯಿಕ ‘ಕುಟ್ಟಿ ದೊಣ್ಣೆ’ ಸ್ಪರ್ಧೆಗಳು ವಿಶೇಷ ಆಕರ್ಷಣೆಯಾಗಿರಲಿವೆ.
  • ಮಹಿಳೆಯರಿಗಾಗಿ: ಬಾಲ್ ಥ್ರೋ, ರಿಂಗ್ ಥ್ರೋ ಮತ್ತು ಓಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
  • ಸಾರ್ವಜನಿಕ ಸ್ಪರ್ಧೆಗಳು: ಎಲ್ಲರಿಗೂ ಮುಕ್ತವಾಗಿರುವ ಹಗ್ಗಜಗ್ಗಾಟ (Tug of War), ಲಗೋರಿ, ಮ್ಯೂಸಿಕಲ್ ಚೇರ್, ಬಲೆ ಹರಡುವುದು ಹಾಗೂ ಸಾಹಸಮಯ ‘ದಹಿ ಹಂಡಿ’ ಸ್ಪರ್ಧೆಗಳು ನೋಡುಗರ ಮನರಂಜಿಸಲಿವೆ.
    ಗಣ್ಯರ ಉಪಸ್ಥಿತಿ:
    ಕಾರ್ಯಕ್ರಮದ ಅಧ್ಯಕ್ಷತೆಯನ್ನು MVM ಮಂಡಳಿಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಗಣೇಶ್ ಕಾಂಚನ್ ಅವರು ವಹಿಸಲಿದ್ದಾರೆ. ಶಾಖೆಯ ಕಾರ್ಯಧ್ಯಕ್ಷ ಗಂಗಾಧರ್ ಬಂಗೇರ, ಕಾರ್ಯದರ್ಶಿ ತಿಲಕ್ ಸುವರ್ಣ, ಕೋಶಾಧಿಕಾರಿ ಕಿಶೋರ್ ಉಪ್ಪೂರು ಹಾಗೂ ಮಹಿಳಾ ಮತ್ತು ಯುವ ವಿಭಾಗದ ಪದಾಧಿಕಾರಿಗಳ ನೇತೃತ್ವದಲ್ಲಿ ಈ ಕ್ರೀಡಾ ಹಬ್ಬ ನಡೆಯಲಿದೆ.
    ಸಮಯ ಮತ್ತು ವ್ಯವಸ್ಥೆ:
    ಬೆಳಿಗ್ಗೆ 8:00 ಗಂಟೆಗೆ ಕ್ರೀಡಾಕೂಟ ಆರಂಭವಾಗಲಿದ್ದು, ಸಂಜೆ 5:00 ಗಂಟೆಯವರೆಗೆ ಸಡೆಯಲಿದೆ. ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಹಾಗೂ ಸಮಾಜದ ಬಾಂಧವರಿಗೆ ಉಪಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
    ಮಂಡಳಿಯ ಅಧ್ಯಕ್ಷ ​ಗಣೇಶ್ ಕಾಂಚನ್,
    ​ ಗೌರವ ಪ್ರಧಾನ ಕಾರ್ಯದರ್ಶಿದಿಲೀಪ್ ಮೂಲ್ಕಿ,
    ​ಗೌರವ ಕೋಶಾಧಿಕಾರಿ ದೇವರಾಜ್ ಕುಂದರ್,
    ಕ್ರೀಡಾ ಸಮಿತಿ ಅಧ್ಯಕ್ಷರ ​ಮನ್ಮೋಹನ್ ಕರ್ಕೇರಾ,
    ಕ್ರೀಡಾ ಸಮಿತಿ ಕಾರ್ಯದರ್ಶಿ ​ಪ್ರಶಾಂತ್ ತಿಂಗಳಾಯ,
    ಮೀರಾ ಭಾಯಂದರ್ ಶಾಖೆ​ಯ ಸಂಯೋಜಕ ಶ ಪ್ರಜ್ವಲ್ ಸಾಲಿಯಾನ್, ಮೀರಾ ಭಾಯಂದರ್ ಶಾಖೆಯ ಕಾರ್ಯಧ್ಯಕ್ಷ ​ಗಂಗಾಧರ್ ಎಸ್. ಬಂಗೇರ,
    ​ಗೌರವ ಕಾರ್ಯದರ್ಶಿ ತಿಲಕ್ ಎನ್. ಸುವರ್ಣ,
    ​ಗೌರವ ಕೋಶಾಧಿಕಾರಿ ಕಿಶೋರ್ ಎ. ಉಪ್ಪೂರು,
    ​ಮಹಿಳಾ ವಿಭಾಗದ ಅಧ್ಯಕ್ಷೇ ​ಪ್ರಭಾವತಿ ಎಚ್. ಅಮೀನ್,
    ಕಾರ್ಯದರ್ಶಿ ​ಅಮೃತಾ ಪಿ. ಸಾಲಿಯಾನ್,
    ಕೋಶಾಧಿಕಾರಿಧಿಕಾರಿ ​ಜಾನಕಿ ಎನ್. ತಿಂಗಳಾಯ ಕೋಶಾಧಿಕಾರಿ, ​ಯುವ ವಿಭಾಗದ ಕಾರ್ಯಧ್ಯಕ್ಷ ​ಆಶಿಕಾ ಕಾಂಚನ್, ಕಾರ್ಯದರ್ಶಿ ​ಮಾನ್ಸಿ ಆರ್. ಪುತ್ರನ್, ಕೋಶಾಧಿಕಾರಿ ​ವಿಪಿನ್ ತಿಂಗಳಾಯ
    ​ಶಾಖಾ ಕ್ರೀಡಾ ಸಮಿತಿ ಅಧ್ಯಕ್ಷ ​ರವಿ ಎನ್. ಸುವರ್ಣ,
    ಕಾರ್ಯದರ್ಶಿ ​ದೇವಕಿ ಎಚ್. ಕೋಟ್ಯಾನ್
    ಮೊಗವೀರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕ್ರೀಡಾ ಸಂಭ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಕೇಳಿ ಕೊಂಡಿದ್ದಾರೆ.


Related posts

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಅ. 26 ರಂದು 24ನೇ ವಾರ್ಷಿಕ ಮಹಾಸಭೆ, ರಜತ ಸಂಭ್ರಮಕ್ಕೆ ಚಾಲನೆ

Mumbai News Desk

ಗುರುನಾರಾಯಣ ಯಕ್ಷಗಾನ ಮಂಡಳಿಯ ಭಾಗವತರಾದ ಗಂಗಾಧರ್ ಸುವರ್ಣ ಅವರ ಕಲಾ ಸೇವೆಗೆ 25 ವರ್ಷ, ಆಗಸ್ಟ್ 2ರಂದು ”ಯಕ್ಷ ಸಂಭ್ರಮ’

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿಸೆ. 18ರಂದು ಶೀರೂರು ಮಠಾಧಿಪತಿ, ಪೂಜ್ಯ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ಗುರುವಂದನೆ.

Mumbai News Desk

ಬ್ರಹ್ಮಕಲಶ ಸಂಭ್ರಮದಲ್ಲಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ಮೂರ್ತಿ ದೇವಸ್ಥಾನ

Mumbai News Desk

ಜೀವ ರಕ್ಷಕ, ಈಜು ತಜ್ಞ ಈಶ್ವರ್ ಮಲ್ಪೆ ಅವರಿಗೆ 10ನೇ ಮೂಲತ್ವ ವಿಶ್ವ ಪ್ರಶಸ್ತಿ 2024

Mumbai News Desk

ಭಜನಾ ಮಂಡಳಿಗಳ ಒಕ್ಕೂಟ ಸಂಸ್ಥೆ ಮುಂಬಯಿ : 5ನೇ ವಾರ್ಷಿಕ ಭಜನೋತ್ಸವ ಮತ್ತು ರಾಜ್ಯ ಮಟ್ಟದ ಭಜನಾ ಸ್ಪರ್ಧೆ

Mumbai News Desk