
ಸುವರ್ಣಯುಗ
ಲೇಖಕರು : ಅನಿತಾ ಪಿ. ತಾಕೊಡೆ
ಪ್ರಕಾಶನ :ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ
ಪುಟ-೨೯೮, ಬೆಲೆ ರೂ. 375
ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಕಟಣೆ ” ಸುವರ್ಣ ಯುಗ ” ತುಂಬ ಚೆನ್ನಾಗಿ ಮೂಡಿ ಬಂದಿದೆ. ಮುಂಬೈ ನ ಹಿರಿಯ ಉದ್ಯಮಿ, ಸಮಾಜ ಸೇವಕ ರಾಗಿದ್ದ ಶ್ರೀ ಜಯ ಸುವರ್ಣರ , ಬದುಕು, ಸೇವೆ, ಸಾಧನೆ ಕುರಿತಾಗಿ ,ಅಮೂಲ್ಯ ಮಾಹಿತಿಗಳು ಈ ಪುಸ್ತಕದಲ್ಲಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಕುಗ್ರಾಮದ ಬಡ ಕುಟುಂಬ ದಿಂದ ಬಂದ ಜಯ ಸುವರ್ಣರು ಚಿಕ್ಕ ವಯಸ್ಸಿಗೇ ಮುಂಬೈಗೆ ವಲಸೆ ಬಂದು ಹೇಗೆಲ್ಲ ಶ್ರಮ ಪಟ್ಟರು, ಅಸಾದ್ಯ ಅಂತಾದದ್ದು ಹೇಗೆ ಸಾಧಿಸಿ, ತೋರಿಸಿದರು ಎಂಬ ಮಾಹಿತಿಯನ್ನು ಲೇಖಕಿ ಶ್ರೀಮತಿ ಅನಿತಾ ಪೂಜಾರಿ ತಾಕೊಡೆ ಅವರು ಎಳೆಎಳೆಯಾಗಿ ಹೇಳಿದ್ದಾರೆ. ಸುಂದರವಾದ ಭಾಷೆಯಲ್ಲಿ ಮೂಡಿ ಬಂದಿದೆ.
ಅನಿತಾ ಪಿ.ತಾಕೊಡೆಯವರು ಈ ಗ್ರಂಥವನ್ನು ಪ್ರೀತಿ ವಿಶ್ವಾಸ ಗೌರವಗಳ ಭಾವನೆಯಿಂದ ಒಂದು ವ್ರತದಂತೆ ಮಾಡಿ ಯಶಸ್ವಿಯಾಗಿದ್ದಾರೆ. ಅದು ಮುಂಬೈ ಕನ್ನಡಿಗರನ್ನೂ,ಒಳ ನಾಡು ವಿಶೇಷವಾಗಿ ಕರಾವಳಿ ಕರ್ನಾಟಕವನ್ನು ತಲುಪಲಿ. ಏಕೆಂದರೆ ಜಯ ಸುವರ್ಣ ಅವರು ಕರಾವಳಿ ಭಾಗದಿಂದ ಮುಂಬೈಗೆ ಹೋಗಿ ದೊಡ್ಡದನ್ನು ಸಾಧಿಸಿದವರು, ಅಲ್ಲಿನ ಬದುಕಲ್ಲಿ ದಶಕಗಳ ಕಾಲ ಇದ್ದವರು, ಸಾವಿರಾರು ಜನರಿಗೆ ಆಪ್ತರಾದವರು. ಇಂತಹ ಮೇರು ವ್ಯಕ್ತಿತ್ವದ ಜಯ ಸುವರ್ಣರ ಬದುಕನ್ನು ಓದುಗರಿಗೆ ಪರಿಚಯಿಸಿದ ಹೆಗ್ಗಳಿಕೆ ಲೇಖಕಿ ಶ್ರೀಮತಿ ಅನಿತಾ ತಾಕೊಡೆಯವರದ್ದು. “ಸುವರ್ಣ ಯುಗ “ಗ್ರಂಥ ಉತ್ತಮವಾಗಿ ಮೂಡಿ ಬರಲು ಲೇಖಕಿ ತುಂಬ ಶ್ರಮ ವಹಿಸಿದ್ದಾರೆ. ಅದು ಅವರಿಗೆ ಸದಾ ಖುಷಿ ಮತ್ತು ಹೆಮ್ಮೆ ಯ ವಿಷಯವಾಗಿ ಉಳಿಯಲಿದೆ ಎಂಬ ಸದಾಶಯ ನಮ್ಮದು
ಮದನ ಕಣಬೂರ ಬೆಳಗಾವಿ

.
.
.
.
.
.
.