30.5 C
Mumbai
June 8, 2026
Mumbai News Kannada
ಲೇಖನ

ಮೇರು ವ್ಯಕ್ತಿತ್ವದ ಸಾಧಕನ ಸಾಧನೆಯನ್ನು ತೆರೆದಿಟ್ಟ ಸುವರ್ಣಯುಗ





ಸುವರ್ಣಯುಗ


ಲೇಖಕರು : ಅನಿತಾ ಪಿ. ತಾಕೊಡೆ
ಪ್ರಕಾಶನ :ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ
ಪುಟ-೨೯೮, ಬೆಲೆ ರೂ. 375

ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಕಟಣೆ ” ಸುವರ್ಣ ಯುಗ ” ತುಂಬ ಚೆನ್ನಾಗಿ ಮೂಡಿ ಬಂದಿದೆ. ಮುಂಬೈ ನ ಹಿರಿಯ ಉದ್ಯಮಿ, ಸಮಾಜ ಸೇವಕ ರಾಗಿದ್ದ ಶ್ರೀ ಜಯ ಸುವರ್ಣರ , ಬದುಕು, ಸೇವೆ, ಸಾಧನೆ ಕುರಿತಾಗಿ ,ಅಮೂಲ್ಯ ಮಾಹಿತಿಗಳು ಈ ಪುಸ್ತಕದಲ್ಲಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಕುಗ್ರಾಮದ ಬಡ ಕುಟುಂಬ ದಿಂದ ಬಂದ ಜಯ ಸುವರ್ಣರು ಚಿಕ್ಕ ವಯಸ್ಸಿಗೇ ಮುಂಬೈಗೆ ವಲಸೆ ಬಂದು ಹೇಗೆಲ್ಲ ಶ್ರಮ ಪಟ್ಟರು, ಅಸಾದ್ಯ ಅಂತಾದದ್ದು ಹೇಗೆ ಸಾಧಿಸಿ, ತೋರಿಸಿದರು‌ ಎಂಬ‌ ಮಾಹಿತಿಯನ್ನು ಲೇಖಕಿ ಶ್ರೀಮತಿ ಅನಿತಾ ಪೂಜಾರಿ ತಾಕೊಡೆ ಅವರು ಎಳೆಎಳೆಯಾಗಿ ಹೇಳಿದ್ದಾರೆ. ಸುಂದರವಾದ ಭಾಷೆಯಲ್ಲಿ ಮೂಡಿ ಬಂದಿದೆ.
ಅನಿತಾ ಪಿ.ತಾಕೊಡೆಯವರು ಈ ಗ್ರಂಥವನ್ನು ಪ್ರೀತಿ ವಿಶ್ವಾಸ ಗೌರವಗಳ ಭಾವನೆಯಿಂದ ಒಂದು ವ್ರತದಂತೆ ಮಾಡಿ ಯಶಸ್ವಿಯಾಗಿದ್ದಾರೆ. ಅದು ಮುಂಬೈ ಕನ್ನಡಿಗರನ್ನೂ,ಒಳ ನಾಡು ವಿಶೇಷವಾಗಿ ಕರಾವಳಿ ಕರ್ನಾಟಕವನ್ನು ತಲುಪಲಿ. ಏಕೆಂದರೆ ಜಯ ಸುವರ್ಣ ಅವರು ಕರಾವಳಿ ಭಾಗದಿಂದ ಮುಂಬೈಗೆ ಹೋಗಿ ದೊಡ್ಡದನ್ನು ಸಾಧಿಸಿದವರು, ಅಲ್ಲಿನ ಬದುಕಲ್ಲಿ ದಶಕಗಳ ಕಾಲ ಇದ್ದವರು, ಸಾವಿರಾರು ಜನರಿಗೆ ಆಪ್ತರಾದವರು. ಇಂತಹ ಮೇರು ವ್ಯಕ್ತಿತ್ವದ ಜಯ ಸುವರ್ಣರ ಬದುಕನ್ನು ಓದುಗರಿಗೆ ಪರಿಚಯಿಸಿದ ಹೆಗ್ಗಳಿಕೆ ಲೇಖಕಿ ಶ್ರೀಮತಿ ಅನಿತಾ ತಾಕೊಡೆಯವರದ್ದು. “ಸುವರ್ಣ ಯುಗ “ಗ್ರಂಥ ಉತ್ತಮವಾಗಿ ಮೂಡಿ ಬರಲು ಲೇಖಕಿ ತುಂಬ ಶ್ರಮ ವಹಿಸಿದ್ದಾರೆ. ಅದು ಅವರಿಗೆ ಸದಾ ಖುಷಿ ಮತ್ತು ಹೆಮ್ಮೆ ಯ ವಿಷಯವಾಗಿ ಉಳಿಯಲಿದೆ ಎಂಬ ಸದಾಶಯ ನಮ್ಮದು


ಮದನ ಕಣಬೂರ ಬೆಳಗಾವಿ

.

.

.

.

.

.

.



Related posts

ಪ್ರಧಾನಮಂತ್ರಿಯವರ 75ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ತಯಾರಾದ ಮೋಹನ್ ದಾಸ್ ರವರ ಕೊಡುಗೆ “ವಸುಧೈವ ಕುಟುಂಬಕಂ ” ಕಲಾಕೃತಿ

Mumbai News Desk

ಮುಂಬಯಿ ಕನ್ನಡ ರಾತ್ರಿ ಶಾಲೆಯ ಹಳೆ ವಿದ್ಯಾರ್ಥಿಗಳೇ ಗಮನಿಸಿ: ನಿಮ್ಮ ಅಸ್ತಿತ್ವದ ದಾಖಲೆ ನಿಮ್ಮ ಕೈಯಲ್ಲಿದೆಯೇ ?

Mumbai News Desk

ಮುಂಬೈಯ ಯಾಂತ್ರಿಕ ಬದುಕಿನ ಹಳಿಗಳ ಮೇಲೆ ಮನುಷ್ಯತ್ವದ ಸೀಮಂತ: ಮುಂಬೈ ಲೋಕಲ್‌ನ ಒಂದು ಭಾವಸ್ಪರ್ಶಿ ಕ್ಷಣ

Mumbai News Desk

“ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜಿನ ನಲ್ಲಿ ಕನ್ನಡ ನಾಟಕ ಚಾಮ ಚಲುವೆ ಮತ್ತು ಸೋಲಿಗರ ಬಾಲೆ ಯಶಸ್ವಿ ಪ್ರದರ್ಶನ.”

Mumbai News Desk

ಮನೆ ಮನಗಳ ಬೆಳಗಿಸುವ ದೀಪಾವಳಿ

Mumbai News Desk

ಸಂಘಟಕ, ರಂಗ ನಟ, ಭಾಸ್ಕರ ಸುವರ್ಣ ಸಸಿಹಿತ್ಲುರವರಿಗೆ ವಿಶ್ವೇಶತೀರ್ಥ ಜೀವಮಾನ ಪ್ರಶಸ್ತಿ*

Mumbai News Desk